SearchBrowseAboutContactDonate
Page Preview
Page 99
Loading...
Download File
Download File
Page Text
________________ ೯೪ / ಪಂಪಭಾರತಂ ವ|| ಎಂದು ನಿನ್ನನಾನಿನಿತಂ ಕೈಯೊಡ್ಡಿ ಬೇಡಿದನೆಂದ ಸತ್ಯವತಿಗಮರಾ ಪಗಾನಂದನನಿಂತೆಂದಂ ಕಂ II ಕಿಡುಗುಮೆ ರಾಜ್ಯಂ ರಾಜ್ಯದ ತೊಡರ್ಪದೇವಾ ಬಾ ನನ್ನಿಯ ನುಡಿಯಂ | ಕಿಡೆ ನಗು ನಾನುಮರಡ ನುಡಿದೊಡೆ ಹರಿ ಹರ ಹಿರಣ್ಯಗರ್ಭರ್ ನಗರೇ || ಚಂ || ಹಿಮಕರನಾತ್ಮಶೀತರುಚಿಯಂ ದಿನನಾಯಕನುಷ್ಠದೀಧಿತಿ ಕ್ರಮಮನಗಾಧ ವಾರಿಧಿಯೆ ಗುಣನಿಳಾವಧು ತನ್ನ ತಿಣ್ಣನು | ತಮ ಕುಲಶೈಲಮುನ್ನತಿಯನೇಳಿದವಾಗಿ ಬಿಸುಡಂ ಬಿಸು ಅಮ ಬಿಸುಡೆಂ ಮದೀಯ ಪುರುಷವ್ರತವೊಂದುಮನೀಗಳಂಬಕೇ || ೮೩ ವ|| ಎಂದು ತನ್ನ ನುಡಿದ ಪ್ರತಿಜ್ಞೆಯನೇಗೆಯು ತಪ್ಪಿದನಿಲ್ಲ ಕಂ || ರಂಗತರಂತ ವಾರ್ಧಿ ಚ ೮೨ ಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ | ಗಾಂಗೇಯನುಂ ಪ್ರತಿಜ್ಞಾ ಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ !! ೮೪ ಮೊದಲು ಪ್ರತಿಜ್ಞೆ ಮಾಡಿದ ಸತ್ಯಕ್ಕೆ ಭಂಗಬರದ ಹಾಗೆ ಸಮರ್ಥನಾಗಿ ಮಾಡಿದ ನಿನ್ನ ಖ್ಯಾತಿಯೂ ಯಶನ್ನೂ ಮುಗಿಲನ್ನು ಮುಟ್ಟಿತಲ್ಲವೇ! ನಮ್ಮ ವಂಶಕ್ಕೆ ಬೇರೆ ಮಕ್ಕಳೇತಕ್ಕೆ? ನೀನೇ ಶೂರನಾಗಿದ್ದೀಯೇ. ಹಿಂದಿನ ಒರಟುತನ ಬೇಡ. ಮಗನೇ ನೀನೇ ರಾಜ್ಯಭಾರವನ್ನು ವಹಿಸಿಕೊ, ವ|| ಎಂದು ಕೈಯೊಡ್ಡಿ ಬೇಡಿದ ಸತ್ಯವತಿಗೆ ದೇವಗಂಗಾನದಿಯ ಮಗನಾದ ಭೀಷ್ಮನು ಹೀಗೆಂದನು-೮೨. ರಾಜ್ಯವು ಕೆಡತಕ್ಕುದೇ (ಅಶಾಶ್ವತವಾದುದರಿಂದ) ರಾಜ್ಯದ ತೊಡಕು ನನಗೇಕೆ? ನನ್ನ ಬದುಕು ಸತ್ಯಪ್ರತಿಜ್ಞೆಗೆ ವಿರೋಧವಾಗುವಂತೆ ನಡೆದರೆ (ನಾನೂ ಎರಡು ಮಾತನ್ನಾಡಿದರೆ) ತ್ರಿಮೂರ್ತಿಗಳಾದ ಬ್ರಹ್ಮವಿಷ್ಣುಮಹೇಶ್ವರರು ನಗುವುದಿಲ್ಲವೇ? ೮೩. ಚಂದ್ರನು ತನ್ನ ಶೀತಕಿರಣವನ್ನೂ ಸೂರ್ಯನು ತನ್ನ ಬಿಸುಗದಿರ ತೀವ್ರತೆಯನ್ನೂ ಅತ್ಯಂತ ಆಳವಾದ ಸಮುದ್ರವು ತನ್ನ (ಗಾಂಭೀರ್ಯ) ಆಳವನ್ನೂ ಈ ಭೂದೇವಿಯು ತನ್ನ ಭಾರವನ್ನೂ ಶ್ರೇಷ್ಠವಾದ ಕುಲಪರ್ವತಗಳು ತಮ್ಮ ಔನ್ನತ್ಯವನ್ನೂ ಹಾಸ್ಯಾಸ್ಪದವಾಗುವಂತೆ ಬಿಸುಟರೂ ಬಿಸಾಡಲಿ. ಎಲೆ ತಾಯೇ ನಾನು ನನ್ನ ಪುರುಷ (ಬ್ರಹ್ಮಚರ್ಯ) ವ್ರತವೊಂದನ್ನು ಮಾತ್ರ ಬಿಸುಡುವುದಿಲ್ಲ. ೮೪, ಚಂಚಲವಾಗಿ ಕುಣಿಯುತ್ತಿರುವ ಅಲೆಗಳನ್ನುಳ್ಳ ಸಮುದ್ರದ ಸಮೂಹಗಳು ತಮ್ಮಎಲ್ಲೆಯನ್ನು ದಾಟಿದರೂ ಭೀಷ್ಮನೂ ಪ್ರತಿಜ್ಞಾಗಾಂಗೇಯನೆಂಬ ಬಿರುದುಳ್ಳ ಅರಿಕೇಸರಿಯೂ ತಾವೂ ಒಂದು ಸಲ ಹೇಳಿದುದನ್ನು ತಪ್ಪುತ್ತಾರೆಯೇ?
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy