________________
೯೬] ಪಂಪಭಾರತಂ ವ್ಯಾಸಮುನೀಂದ್ರಂ ಸತ್ಯವತಿಗಂ ಭೀಷಂಗಮಿಂತೆಂದನನ್ನ ವರಪ್ರಸಾದ ಕಾಲದೊಳೆನ್ನಂ ಕಂಡಂಬಿಕೆ ಕಣ್ಣಂ ಮುಚ್ಚಿದಳಪುದಳೆಂದಾಕೆಗೆ ಧೃತರಾಷ್ಟ್ರನೆಂಬ ಮಗನತ್ಯಂತ ಸುಂದರಾಂಗನಾಗಿಯು ಜಾತ್ಯಂಧನಕ್ಕುಮಂಬಾಲೆ ಮದೂಪಮಂ ಕಂಡು ಮೂಗಮಂ ಪಾಂಡುರಂ ಮಾಡಿ ದಳಪುದಳೆಂದಾಕೆಗೆ ಪಾಂಡುರೋಗಸಂಗತನುಮನೇಕ ಭದ್ರಲಕ್ಷಣಲಕ್ಷಿತನುಮಂತ ಪ್ರತಾಪನುಮಾಗಿ ಪಾಂಡುರಾಜನೆಂಬ ಮಗನಕುಮಂಬಿಕೆಯ ಸೂಚಾಯ್ಯಪ್ಪಾಕ ದರಹಸಿತ ವದನಾರವಿಂದೆಯಾಗಿ ಬರವಂ ಕೈಕೊಂಡಳುದಂದಾಕೆಯ ಮಗಂ ವಿದುರನೆಂಬ ನನಂಗಾಕಾರನುಮಾಚಾರವಂತನುಂ ಬುದ್ಧಿವಂತನುಮಕ್ಕುಮೆಂದು ಪಟ್ಟು ಮುನಿಪುಂಗವಂ ಪೋದನಿತ್ತಂಸೃಷ್ಟಿಗೆ ವರಂಬಡೆದ ಸಂತಸಂ ಮನದೊಳಾಗಲೋಂದುತ್ತರೋ
ತರಂ ಬಳೆವ ಮಾಚಿಯಿಂ ಬಳೆವ ಗರ್ಭಮಂ ತಾಳಿಯಾ | ದರಂ ಬೆರಸು ಪೆತ್ತರಂದು ಧೃತರಾಷ್ಟ್ರ ವಿಖ್ಯಾತ ಪಾಂ
ಡುರಾಜ ವಿದುರರ್ಕಳಂ ಕ್ರಮದ ಮೂವರು ಮೂವರಂ || ಕಂ | ಆ ವಿವಿಧ ಲಕ್ಷಣಂಗಳೊ |
ಲಾವರಿಸಿದ ಕುಲದ ಬಲದ ಚಲದಳವಿಗಳೊಳ್ | ಮೂವರುಮನಾದಿ ಪುರುಷರ್ ಮೂವರುಮನಲಲ್ಲದತ್ತ ಮತ್ತೇವೆಂಬರ್ 11
೮೭
ವರವನ್ನು ಪ್ರಾರ್ಥಿಸುವಂತೆ ಹೇಳಿ ಕಳುಹಿಸಲು (ವ್ಯಾಸಮಹರ್ಷಿಯು) ಅವಳಿಗೂ ವರವನ್ನು ಕೊಟ್ಟು ಸತ್ಯವತಿ ಮತ್ತು ಭೀಷ್ಮರನ್ನು ಕುರಿತು ನನ್ನ ವರಪ್ರಸಾದಕಾಲದಲ್ಲಿ ನನ್ನನ್ನು ನೋಡಿ ಅಂಬಿಕೆಯು ಕಣ್ಣನ್ನು ಮುಚ್ಚಿದಳಾದುದರಿಂದ ಆಕೆಗೆ ಧೃತರಾಷ್ಟ್ರನೆಂಬ ಮಗನು ಅತ್ಯಂತ ಸುಂದರನಾಗಿಯೂ ಹುಟ್ಟುಗುರುಡನಾಗಿಯೂ ಹುಟ್ಟುತ್ತಾನೆ. ಅಂಬೆಯು ನನ್ನ ರೂಪವನ್ನು ಕಂಡು ಮುಖವನ್ನು ಬೆಳ್ಳಗೆ ಮಾಡಿಕೊಂಡುದರಿಂದ ಆಕೆಯ ಮಗನು ಪಾಂಡುರೋಗದಿಂದ ಕೂಡಿದವನೂ ಅನೇಕ ಶುಭಲಕ್ಷಣಗಳಿಂದ ಗುರುತುಮಾಡಲ್ಪಟ್ಟವನೂ (ಕೂಡಿದವನೂ) ಅತ್ಯಂತ ಶೌರ್ಯಶಾಲಿಯೂ ಆಗಿ ಪಾಂಡುರಾಜನೆಂಬ ಮಗನಾಗುತ್ತಾನೆ. ಅಂಬಿಕೆಯ ದಾದಿಯಾದವಳು ಹುಸಿನಗೆಯಿಂದ ಕೂಡಿದ ಮುಖಕಮಲವುಳ್ಳವಳಾಗಿ ಬಂದುದರಿಂದ ಆಕೆಯ ಮಗನಾದ ವಿದುರನು ಮನ್ಮಥಾಕಾರವುಳ್ಳವನೂ ಆಚಾರವಂತನೂ ಬುದ್ದಿವಂತನೂ ಆಗುತ್ತಾನೆ ಎಂದು ಹೇಳಿ ಋಷಿಶ್ರೇಷ್ಠನು ಹೊರಟುಹೋದನು. ಈ ಕಡೆ ೮೬, ಆ ಮೂವರು ಸ್ತ್ರೀಯರೂ ವರವನ್ನು ಪಡೆದ ಸಂತೋಷವು ಅಭಿವೃದ್ಧಿಯಾಗಿ ಮೇಲೆ ಮೇಲೆ ಬೆಳೆಯುತ್ತಿರುವ ಹಾಗೆಯೇ ಬೆಳೆಯುತ್ತಿರುವ ಗರ್ಭವನ್ನು ಧರಿಸಿ ಪ್ರೀತಿಯಿಂದ ಕೂಡಿದವರಾಗಿ ಮೂವರೂ ಧೃತರಾಷ್ಟ್ರ, ವಿಖ್ಯಾತನಾದ ಪಾಂಡುರಾಜ, ವಿದುರ ಎಂಬ ಮೂವರನ್ನು ಕ್ರಮವಾಗಿ ಅಂದು ಪಡೆದರು. ೮೭. ಆ ಬಗೆಬಗೆಯ ರಾಜಲಕ್ಷಣಗಳಿಂದ ಕೂಡಿದ ವಂಶದ, ಶೌರ್ಯದ, ಛಲದ ಪ್ರಮಾಣಗಳಲ್ಲಿ ಆ ಮೂವರನ್ನೂ ಆದಿಪುರುಷರೂ ತ್ರಿಮೂರ್ತಿಗಳೂ ಆದ ಬ್ರಹ್ಮವಿಷ್ಣು ಶಿವರೆಂದು ಹೇಳದೆ ಮತ್ತೇನೆಂದು ಹೇಳುವುದು.