Book Title: Antahskaran Ka Swroop Kannada
Author(s): Dada Bhagwan
Publisher: Dada Bhagwan Aradhana Trust

View full book text
Previous | Next

Page 40
________________ ಅಂತಃಕರಣದ ಸ್ವರೂಪ ಪ್ರಶ್ಯಕರ್ತ: ಅಹಂಕಾರವನ್ನು ಬಿಡಲು ಮಾರ್ಗ ಯಾವುದಾದರು ಇದೆಯೇ? ದಾದಾಶ್ರೀ: ನಾವೇ ಬಿಡಿಸಿಕೊಡಬೇಕಾಗಿದೆ. ನಿಮ್ಮಿಂದ ಹೇಗೆ ಬಿಡಲು ಸಾಧ್ಯವಾಗುತ್ತದೆ? ಸ್ವತಃ ನೀವೇ ಅಹಂಕಾರದ ಬಂದಿಯಾಗಿದ್ದೀರಿ. ಈ ಅಹಂಕಾರವು ಎಷ್ಟು ಉದ್ದ (length), ಎಷ್ಟು ಎತ್ತರ (height) ಹಾಗೂ ಎಷ್ಟು ಅಗಲ (breadth) ಇದೆ, ಎನ್ನುವುದು ಏನಾದರು ನಿಮಗೆ ತಿಳಿದಿದೆಯೇ? ಈ ಅಹಂಕಾರವು ಇಡೀ ಜಗತ್ತಿನಲ್ಲಿ ವ್ಯಾಪಕವಾಗಿ (wide Spread) ಹರಡಿಕೊಂಡಿದೆ. ಅಹಂಕಾರದ ಉದ್ದ, ಅಗಲ, ಎತ್ತರ ಎಲ್ಲವೂ ದೊಡ್ಡ ಪ್ರಮಾಣದಲ್ಲಿದೆ, ಹಾಗಿರುವಾಗ ಅಹಂಕಾರವನ್ನು ಹೇಗೆ ತೆಗೆಯುವುದು? ಹೇಗೆ ಭಗವಂತನ ವಿರಾಟ ಸ್ವರೂಪವಿದೆಯೋ, ಹಾಗೆ ಅಹಂಕಾರದ ಸ್ವರೂಪವಾಗಿದೆ. ನಿಮಗೆ ಅಹಂಕಾರವನ್ನು ತೆಗೆಯಬೇಕೇ? ಹಾಗಿದ್ದರೆ ನಾವು ತೆಗೆದುಬಿಡುತ್ತೇವೆ. ನಮ್ಮ ಬಳಿ ಆ ಜ್ಞಾನವಿದೆ. ಅಹಂಕಾರವು ಹೊರಟು ಹೋದರೆ ಆನಂತರ ಅಹಂಕಾರದ ಮಕ್ಕಳಿದ್ದಾರಲ್ಲಾ, ಕ್ರೋಧ-ಮಾನ-ಮಾಯಾ-ಲೋಭ, ಅವೆಲ್ಲವೂ ಅವುಗಳ ಹಾಸಿಗೆ ಸುತ್ತಿಕೊಂಡು ಹೊರಟು ಹೋಗುತ್ತವೆ. ಆಮೇಲೆ ದೇಹದಲ್ಲಿ ಏನು ಅಲ್ಪ ಸ್ವಲ್ಪ ಉಳಿದಿರುವುದೋ, ಅದು ನಿರ್ಜೀವವಾದ ಅಹಂಕಾರ ಹಾಗೂ ನಿರ್ಜೀವವಾದ ಕ್ರೋಧ-ಮಾನ-ಮಾಯಾ-ಲೋಭಗಳಾಗಿರುತ್ತವೆ, ಅವು ಸಜೀವವಾಗಿರುವುದಿಲ್ಲ. ನಂತರದಲ್ಲಿ ಕ್ರೋಧವು ನಿಮಗೆ ಬರುವುದೇ ಇಲ್ಲ, ಶರೀರವು ವ್ಯಕ್ತಪಡಿಸುತ್ತದೆಯಾದರೂ ಅದು ನಿರ್ಜೀವವಾಗಿರುತ್ತದೆ. ನಿರ್ಜೀವ ಎಂದರೆ ನಾಟಕೀಯದ (dramatic) ಹಾಗೆ ತೋರುತ್ತದೆ. ಹೇಗೆ ನಾಟಕದಲ್ಲಿ ನಟಿಸುವವನು, 'ನಾನು ರಾಜಿ' ಎಂದು ರಾಜನ ಪಾತ್ರವಹಿಸಿದ್ದರೂ, 'ತಾನು ಒಬ್ಬ ಬ್ರಾಹ್ಮಣ, ಇದು ಕೇವಲ Drama' ಎಂದು ಅವನಿಗೆ ತಿಳಿದಿರುತ್ತದೆಯಲ್ಲಾ, ಹಾಗೆ! ನಿರಹಂಕಾರಿಯ ಸಂಸಾರವನ್ನು ಯಾರು ನಡೆಸುತ್ತಾರೆ? ನಮ್ಮ (ಜ್ಞಾನಿಗಳ) ಅಹಂಕಾರವು ಪೂರ್ಣವಾಗಿ ಸಮಾಪ್ತಿಯಾಗಿದೆ. ವಿಜ್ಞಾನಿಗಳು ಕೇಳುತ್ತಾರೆ ಏನೆಂದರೆ, 'ನಿಮ್ಮ ಅಹಂಕಾರವು ಪೂರ್ಣವಾಗಿ ಹೋಗಿದೆಯಾದರೆ, ನೀವು ಕೆಲಸ ಮಾಡಲು ಹೇಗೆ ಸಾಧ್ಯ?' ಆಗ ನಾವು ಹೇಳುತ್ತೇವೆ, 'ನಮ್ಮ ನಿರ್ಜೀವವಾದ ಅಹಂಕಾರ

Loading...

Page Navigation
1 ... 38 39 40 41 42 43 44 45 46 47 48 49 50 51 52 53 54