SearchBrowseAboutContactDonate
Page Preview
Page 70
Loading...
Download File
Download File
Page Text
________________ ಉಪೋದ್ಘಾತ | ೬೫ ಸಹಾಯ ಸಂಪಾದಕತ್ವದಲ್ಲಿ ೧೯೩೧ರಲ್ಲಿ ಉತ್ತಮ ಸಂಸ್ಕರಣವೊಂದನ್ನು ಪ್ರಕಟಿಸಿದರು. ಕಾಲಾನುಕಾಲದಲ್ಲಿ ಪ್ರತಿಗಳು ಮುಗಿಯಲು ಮೈಸೂರುವಿಶ್ವವಿದ್ಯಾನಿಲಯದವರು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಭಾಗಶಃ ಇದನ್ನು ಮುದ್ರಿಸಿ ಸಹಾಯ ಮಾಡಿದರು. ಈ ಉತ್ತಮಕೃತಿಯ ಪ್ರತಿಗಳ ಲಭ್ಯವೇ ಇಲ್ಲದುದರಿಂದ ವಿಶ್ವವಿದ್ಯಾನಿಲಯದವರು ಪರಿಷತ್ತಿನ ಪ್ರಕಟಣೆಯನ್ನೇ ಆಧಾರವಾಗಿಟ್ಟುಕೊಂಡು ೧೯೭೩ರಲ್ಲಿ ಅದರ ಪುನರ್ಮುದ್ರಣ ಮಾಡಿದರು. ಪ್ರಕೃತ ಅನುವಾದವು ಈ ಮುದ್ರಣದ ಪಾಠವನ್ನು ಅಂಗೀಕರಿಸಿದೆ. ಬೇರೆ ಯಾವ ಕೈ ಬರೆಹಗಳ ಸಹಾಯವೂ ದೊರೆತಿಲ್ಲವಾದುದರಿಂದ ಇದೇ ಮುದ್ರಣದಲ್ಲಿ ಕೊಟ್ಟಿರುವ ಕೆಲವು ಅಡಿ ಟಿಪ್ಪಣಿಯ ಪಾಠಾಂತರಗಳ ಪುನರ್ವಿಮರ್ಶೆಯಿಂದ ಕೆಲವು ಪಾಠಾಂತರಗಳನ್ನು ಉಪಯೋಗಿಸಿಕೊಂಡು ಅನುವಾದಿಸಿದೆ. ಅವರಿಗೆ ಸಂದೇಹಗಳಿದ್ದ ಅನೇಕ ಪಾಠಗಳು ನಮಗೂ ಹಾಗೆಯೇ ಉಳಿದಿರುವುದು ಅನಿವಾರ್ಯವಾಗಿದೆ. - ಎನ್. ಅನಂತರಂಗಾಚಾರ್
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy