SearchBrowseAboutContactDonate
Page Preview
Page 69
Loading...
Download File
Download File
Page Text
________________ ೬೪ | ಪಂಪಭಾರತಂ ಉಪಯುಕ್ತವಾಗಿದೆ. ಪಂಪನ ಛಂದೋವಿಲಾಸದಲ್ಲಿ ಇರುವ ವೈಶಿಷ್ಟ, ಅವನಿಗೆ ಎಲ್ಲೆಲ್ಲಿ, ಯಾವ ಯಾವ ಪ್ರಕರಣದಲ್ಲಿ ಯಾವ ಯಾವ ಛಂದಸ್ಸನ್ನು ಉಪಯೋಗಿಸಬೇಕೆಂಬ ವಿವೇಕ ಜ್ಞಾನ. ಅವನ ಈ ಜಾಣೆಯಿಂದ ವರ್ಣಿತ ವಸ್ತುಗಳಿಗೆ ವಿಶೇಷ ಅರ್ಥ ವ್ಯಕ್ತಿತ್ವವೂ ನಾದಮಾಧುರ್ಯವೂ ಉಂಟಾಗುತ್ತದೆ. ಚಂಪೂಕೃತಿಗಳಾದ ಇವನ ಕೃತಿಗಳಲ್ಲಿ ಗದ್ಯಕ್ಕೂ ಪದ್ಯದಷ್ಟೇ ಪ್ರಭಾವವಿರುತ್ತದೆ. ಅನೇಕ ಗದ್ಯಭಾಗಗಳು ಛಂದೋರಹಿತವಾದ ಪದ್ಯಗಳಂತೆ ವಿಶೇಷನಾದಮಯವಾಗಿಯೂ ಇವೆ. ಅವನು ಮಾರ್ಗಿ ಮತ್ತು ದೇಸಿಗಳೆರಡಕ್ಕೂ ಸಮಾನವಾದ ಸ್ಥಾನವನ್ನೇ ಕೊಟ್ಟಿರುವುದರಿಂದ ಸಂಸ್ಕೃತ ಮತ್ತು ದೇಸೀ ಶಬ್ದಗಳ ಜೋಡಣೆ ಬಹು ರಂಜಕವಾಗಿರುತ್ತದೆ. ಅವನ ಕಾವ್ಯತತ್ವವನ್ನು ಸಿದ್ದಾಂತಗೊಳಿಸುತ್ತವೆ. ಆದರೂ ಕಥಾನಿರೂಪಣೆಗೆ ಗದ್ಯವೂ ವರ್ಣನೆಗೆ ಪದ್ಯವೂ ಹೆಚ್ಚು ಹೊಂದಿಕೊಳ್ಳುವಂತೆ ಕಾಣುತ್ತದೆ. ಗದ್ಯಭಾಗದಲ್ಲಿ ಸಂಸ್ಕೃತ ಪದಗಳ ಮತ್ತು ಸಮಾಸಗಳ ಭಾಗ ಹೆಚ್ಚಿರುತ್ತದೆ. ಇಷ್ಟಾದರೂ ಶಾಸ್ತ್ರಗ್ರಂಥವಾದ ಆದಿಪುರಾಣದಲ್ಲಿರುವಷ್ಟು ಗದ್ಯಭಾಗವು ಲೌಕಿಕ ಕಾವ್ಯವಾದ ಪಂಪಭಾರತ ದಲ್ಲಿಲ್ಲ. ಆದುದರಿಂದಲೇ ಇದು ಪುರಾಣಕ್ಕಿಂತ ಹೆಚ್ಚು ಭಾವಪೂರ್ಣವಾಗಿದೆ. ಗ್ರಂಥಪಾಠ ಮತ್ತು ಮುದ್ರಣಗಳು : ಪಂಪಭಾರತವು ಅತ್ಯುತ್ತಮ ಗ್ರಂಥವಾದರೂ ಅದರ ಶುದ್ಧಪಾಠವನ್ನು ನಿಷ್ಕರ್ಷಿಸಲು ಸಾಕಷ್ಟು ಹಸ್ತಪ್ರತಿಗಳು ಲಭ್ಯವಾಗಿಲ್ಲ. ಇದನ್ನು ಮೊತ್ತ ಮೊದಲನೆಯ ಸಲ ಮೈಸೂರುಪ್ರಾಚ್ಯಸಂಶೋಧನೆಯ ಇಲಾಖೆಯ ಮುಖ್ಯಾಧಿಕಾರಿಗಳಾಗಿದ್ದ ಮಿ ರೈಸ್ ಸಿ.ಐ.ಇ. ಅವರು ಪ್ರಾಕ್ತನವಿಮರ್ಶವಿಚಕ್ಷೆಣರಾದ ಆರ್. ನರಸಿಂಹಾಚಾರ್ಯರ ಸಹಾಯದಿಂದ ೧೮೯೮ರಲ್ಲಿ ಮೊದಲನೆಯ ಸಲ ಪ್ರಕಟಿಸಿದರು. ಆ ಮುದ್ರಣವನ್ನು ಅವರು ಮೈಸೂರು ಅರಮನೆಯ ಸರಸ್ವತೀಭಂಡಾರದ ಓಲೆ ಪ್ರತಿ ಮತ್ತು ಭಂಡಾರ್‌ಕರ್ ಓರಿಯಂಟಲ್ ರಿಸರ್ಚ್ ಸೊಸೈಟಿಯ ಮತ್ತೊಂದು ತಾಳೆಯೋಲೆಯ ಪ್ರತಿಗಳ ಸಹಾಯದಿಂದ ಸಂಶೋಧಿಸಿದರು. ಮುಂದೆ ಬಹು ಕಾಲ ಅದರ ಪುನರ್ಮುದ್ರಣವಾಗಲಿಲ್ಲ. ೧೯೧೭ನೆಯ ವರ್ಷದಲ್ಲಿ ಸರ್ಕಾರದವರ ಅಭಿಪ್ರಾಯದಂತೆ ಕರ್ಣಾಟಕದ ಸಾಹಿತ್ಯ ಪರಿಷತ್ತಿನವರು ಪಂಡಿತರುಗಳ ಸಹಾಯದಿಂದ ಪ್ರಕಟಿಸಲು ಒಪ್ಪಿಕೊಂಡರು. ಮ! ರಾ। ಗಳಾದ ಎಸ್. ತಿಮ್ಮಪ್ಪಯ್ಯಶಾಸ್ತ್ರಿಗಳು, ತಿರುವಳ್ಳೂರು ಶ್ರೀನಿವಾಸ ರಾಘವಾಚಾರ್ಯರು, ಕಾನಕಾನ ಹಳ್ಳಿಯ ವರದಾಚಾರ್ಯರು, ಮೈಸೂರು ಸೀತಾರಾಮಶಾಸ್ತಿಗಳು-ಇವರುಗಳನ್ನೊಳಗೊಂಡ ಪಂಡಿತಮಂಡಳಿ ಈ ಕಾರ್ಯವನ್ನು ಆರಂಭಿಸಿತು. ಮುಂದೆ ಶ್ರೀ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಪ್ರಧಾನ ಸಂಪಾದಕರಾದರು. ಅವರಿಗೆ ಪಂಡಿತ ಕೆ. ಭುಜಬಲಿಶಾಸ್ತಿಗಳು ಉತ್ತರಭಾರತದ ಆರಾ ಎಂಬ ಪುಸ್ತಕ ಭಂಡಾರದಲ್ಲಿದ್ದ ಪ್ರತಿಯನ್ನು ಕಳುಹಿಸಿ ಕೊಟ್ಟರು. ಸಂಪಾದಕರು ಮೇಲಿನ ಪಂಡಿತ ಮಂಡಳಿಯ ಸದಸ್ಯರ ಮತ್ತು ಇತರ ಪ್ರಸಿದ್ದ ಕನ್ನಡ ಪಂಡಿತರುಗಳಾದ ಬಿ.ಎಂ. ಶ್ರೀಕಂಠಯ್ಯ, ಟಿ. ಎಸ್. ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರಿ, ಎ. ಎನ್. ನರಸಿಂಹಯ್ಯ, ಡಿ. ವಿ. ಗುಂಡಪ್ಪ, ಬಿ. ಕೃಷ್ಣಪ್ಪ, ಬಿ. ರಾಮರಾವ್, ಶಾಂತಿರಾಜಶಾಸ್ತಿಗಳು-ಇವರ ನೆರವಿನಿಂದ ಕಡಬದ ನಂಜುಂಡಶಾಸ್ತಿಗಳು ಮತ್ತು ಟಿ. ಎಸ್. ವೆಂಕಣ್ಣಯ್ಯ ಇವರುಗಳ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy