SearchBrowseAboutContactDonate
Page Preview
Page 681
Loading...
Download File
Download File
Page Text
________________ ೬೭೬ / ಪಂಪಭಾರತಂ ಚಂ|| ನುಡಿದುದನೆಯ ತುತ್ತ ತುದಿಯೆಯ್ಯುವಿನಂ ನುಡಿದಂ ವಲಂ ಚಲಂ ಬಡಿದುದನೆಯೇ ಮುಂ ಪಿಡಿದುದಂ ಪಿಡಿದಂ ಸಲೆ ಪೂಣ್ಣ ಪೂಣ್ಯ ನೇ | ರ್ಪಡೆ ನಡೆವನ್ನೆಗಂ ನಡೆದನಳದೆ ಬಳ್ಳದೆ ತನ್ನೊಡಲ್ ಪಡ ಊಡುವಿನಮಣುಗುಂದನೆ ದಲೇನಭಿಮಾನಧನಂ ಸುಯೋಧನಂ | ೯೭ ವ|| ಅಂತು ಸತ್ತುಂ ನೆಲನಂ ಪತ್ತುವಿಡೆನೆಂಬಂತೆ ನೆಲನಂ ಪ ಮೂರ್ಛಾಗತನಾಗಿರ್ದ ಕುರುಕುಳಚೂಡಾಮಣಿಯನೇನುಂ ಮಾಣದ ಕಿಮಾರವೈರಿ ಮುಟ್ಟೆವಂದಾಗಳೇಕಾದಶಾ ಕೋಹಿಣೀಪತಿಯಪ್ಪ ರಾಜಾಧಿರಾಜನಂ ಪರಾಭವಂಬಡಿಸದಿರೆಂದು ಬಲದೇವಂ ಬಾರಿಸೆವಾರಿಸೆಮll ಸ ಇದಾಳ್ ಮೂರ್ಧಾಭಿಷೇಕಂ ತನಗೆ ಗಡ ಸಮಂತಾಯ್ತು ಪಿಂಛಾತಪತ್ರಂ ಪುದಿದತ್ತಂ ತಣ್ಣೆಳಲಾಡುವುದು ಗಡಮಿದೆಂತೆಂದುಮಾರ್ಗಪೊಡಂ ಪ | ರ್ವಿದ ಗರ್ವೊದ್ರೇಕದಿಂ ಬಾಗದು ಗಡಮನುತುಂ ಮಾಣಿಕಂ ಸೂಸೆ ಬಲ್ಲಿಂ ದೊದೆದಂ ಸಾರ್ತಂದು ದುರ್ಯೋಧನನ ಮಕುಟಮಂ ಕೋಪದಿಂ . : ಭೀಮಸೇನಂ || ೯೮ ವll ಒದವುದುಂ ದುರ್ಯೋಧನಂಗಾದವಸ್ಥೆಯಂ ನೋಡಲಾಗಿದೆಯುಂ ತನ್ನ ತಮ್ಮನ ಮನಮಂ ನೋಯಿಸಲಾದೆಯುಂ ಬಲದೇವಂ ಭಗ್ನಮನೋರಥನಾಗಿ ದ್ವಾರಾವತಿಗೆ ಮರ್ಮವನ್ನು ತಿಳಿಯದೆ ನಾನು ಇಲ್ಲಿಯವರೆಗೆ ತಪ್ಪಿದೆನು. ಇನ್ನು ಬಿಡು, ಅವಕಾಶವನ್ನು ನಿರೀಕ್ಷಿಸುತ್ತಿದ್ದೇನೆ-ಎಂದು ನಿಧಾನವಾಗಿ ಹಗೆಯನ್ನು ಹೊಂಚುಹಾಕುತ್ತಿದ್ದು (ಗದೆಯನ್ನು ಸ್ವಲ್ಪ ಸರಿಮಾಡಿಕೊಂಡು) ಭೋರೆಂದು ಮೇಲೆ ಬೀಳುವ ಶತ್ರುವಿನ ಎರಡು ತೊಡೆಗಳನ್ನು ಹೊಡೆಯಲು ಗದೆಯ ಪೆಟ್ಟಿನಿಂದ ಆ ಎರಡು ತೊಡೆಗಳೂ ಮುರಿದು ಎಲ್ಲ ಕಡೆಯಲ್ಲಿಯೂ ಪುಡಿಪುಡಿಯಾಗಿರಲು ದುರ್ಯೋಧನನು ನೆಲದ ಮೇಲೆ ಬಿದ್ದನು. ೯೭. ಆಡಿದ ಮಾತನ್ನು ತುತ್ತತುದಿ ಮುಟ್ಟುವವರೆಗೂ ಆಡಿದನು. ಮೊದಲು ಹಿಡಿದ ಹಟವನ್ನು ಕೊನೆಯವರೆಗೂ ಸಾಧಿಸಿದನು. ಮಾಡಿದ ಪ್ರತಿಜ್ಞೆಯು ನೇರವಾಗಿ ನಡೆಯುವವರೆಗೂ ನಡೆದು ಹೆದರದೆ ಅಳ್ಳಾಡದೆ ತನ್ನ ಶರೀರವು ಕೆಳಗೆ ಬೀಳುವವರೆಗೂ ತನ್ನ ಪರಾಕ್ರಮವನ್ನು ಕಡಿಮೆಮಾಡಿಕೊಳ್ಳಲಿಲ್ಲವಲ್ಲಾ, ದುರ್ಯೋಧನನು ಎಷ್ಟು ಆತ್ಮಗೌರವನ್ನುಳ್ಳವನು! ವರ ಹಾಗೆ ಸತ್ತೂ ನೆಲವನ್ನು (ಅಂಟಿಕೊಂಡಿರುವುದನ್ನು ಬಿಡುವುದಿಲ್ಲ ಎನ್ನುವ ಹಾಗೆ ನೆಲವನ್ನು ತಬ್ಬಿಕೊಂಡು ಮೂರ್ಛಾಗತನಾಗಿದ್ದ ಕುರುಕುಲಚೂಡಾಮಣಿಯಾದ ದುರ್ಯೊಧನನನ್ನು ಭೀಮನು ಸ್ವಲ್ಪವೂ ಬಿಡದೆ ಸಮೀಪಕ್ಕೆ ಬಂದಾಗ ಬಲರಾಮನು, ಹನ್ನೊಂದಕ್ಟೋಹಿಣೀ ಪತಿಯಾದ ಚಕ್ರವರ್ತಿಯನ್ನು ಅವಮಾನಪಡಿಸಬೇಡವೆಂದು ತಡೆದನು. ೯೮. 'ಇದರಿಂದಲ್ಲವೇ ಇವನಿಗೆ ಪಟ್ಟಾಭಿಷೇಕವು ಪೂರ್ಣವಾಗುವುದು. ನವಿಲುಗರಿಯ ಕೊಡೆಯು ಎಲ್ಲ ಕಡೆಯೂ ಪ್ರಸರಿಸಿ ಇದಕ್ಕಲ್ಲವೇ ತಂಪಾದ ನೆರಳನ್ನುಂಟು ಮಾಡುವುದು. ಇದು ಎಂದೂ ಯಾರಿಗೂ ಹೆಚ್ಚಾದ ಗರ್ವದಿಂದ ಬಾಗುವುದಿಲ್ಲ ವಲ್ಲವೇ' ಎನ್ನುತ್ತ ಮಾಣಿಕ್ಯರತ್ನಗಳು ಚೆಲ್ಲುತ್ತಿರಲು ಭೀಮಸೇನನು ಹತ್ತಿರಬಂದು ಕೋಪದಿಂದ ದುರ್ಯೋಧನನ ಕಿರೀಟವನ್ನು ಬಲವಾಗಿ ಒದೆದನು. ವ|| ಬಲರಾಮನು ದುರ್ಯೋಧನನಿಗಾದ ಅವಸ್ಥೆಯನ್ನು ನೋಡಲಾರದೆಯೂ ತನ್ನ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy