SearchBrowseAboutContactDonate
Page Preview
Page 680
Loading...
Download File
Download File
Page Text
________________ ತ್ರಯೋದಶಾಶ್ವಾಸಂ | ೬೭೫ ವ|| ಅಂತಿರ್ವರುಮೊರ್ವರೋರ್ವರೊಳ್ ಬೀರಮಂ ಬಿನ್ನಣಮುಮಂ ಮದು ಕಾದ ದುರ್ಯೋಧನಂ ವಿದ್ಯಾಧರ ರಣದೊಳತಿಪರಿಚಿತನಪುದಂದಾಕಾಶಕ್ಕೆ ನೆಗೆದು ಕoll ಸಿಡಿಲೆಗುವಂತ ಭೋರೆಂ ದೊಡನೆಆಗಿ ಮಹೋಗ್ರ ಘನ ಗದಾಪರಿಘದಿನಾ | ರ್ದಡಗಿಡ ಪೊಯೊಡ ಭೀಮಂ ಕೆಡದಂ ಧರೆ ನಡುಗ ನೀಳ ಕುಳಂಬೂಲ್ || EX ವ|| ಅಂತು ದುರ್ಯೋಧನ ಗದಾಪ್ರಹರಣದಿಂದಚೇತನನಾಗಿರ್ದೊಡೆ ಬಿಲ್ಡನನಿಯ ನೆಂದು ಪವಮಾನಮಾರ್ಗದೊಳಲ್ಲಾಂತರದೊಳ್ ಗದೆಯಂ ಬೀಸುವಾಗಳ್ ಸುಯೋಧನನ ಗದೆಯ ಗಾಳಿಯೊಳ್ ಮೂರ್ಛಯಿಂದತ್ತು ಧರಾತಳದೊಳ್ ಸೂಸಿದ ತನ್ನ ಗದಾದಂಡಮಂ ಭುಜದಂಡದೊಳಳವಡಿಸಿಕೊಂಡ ವೃಕೋದರನನಂಬುಜೋದರಂ ಬಿಚ್ಚಟೆಸುವ ನವದೊಳಮ್ಮಮ್ಮಂಗಕ್ಕುಮಂದು ತೊಡೆಯಂ ಪೊಯ್ಯಾರ್ವುದುಂ ದುರ್ಯೋಧನನ ನನದಂದಓದು ಮ|| ಸ || ನೆನೀತಂಗೂರುಯುಗಂ ನೆನನಟಿಯದಾನಿನ್ನೆಗಂ ಮಾನಿಂ ಪೋ ತಪಂ ಪಾರ್ದಿಪೆ್ರನೆಂದೊಯ್ಯನ ಗದೆಯನಣಂ ಪಾಡುಗೆಯ್ದಿರ್ದು ಭೋರಂ | ದಪುಗ್ರಾರಾತಿಯೂರುದ್ವಯಮನಿಡ ಗದಾಘಾತದಿಂದೂರುಯುಗ ಮುಳದತ್ತಂ ನುಚ್ಚುನೂರಾಗಿರೆ ಕೆಡೆದನಿಳಾಭಾಗದೊಳ್ ಧಾರ್ತರಾಷ್ಟ್ರಂ || ೯೬ ವ್ಯಾಪಿಸಿ ದೇವತೆಗಳ ಕಣ್ಣಲ್ಲಿ ತುಂಬಿ ತೊಳಗಲು ಅವರಿಗೆ ಅವು ಪ್ರಳಯಕಾಲದ ಉಲ್ಕಾಪಾತದ ಸಂದೇಹವನ್ನುಂಟುಮಾಡಿದವು. ಅವರ ಕ್ರಮ ಕ್ರಮವಾದ ತುಳಿತದಿಂದ ಬೆಟ್ಟಗಳು ಸಡಿಲವಾಗಿ ಕಳಚಿ ಬಿದ್ದವು. ಭೂಭಾಗವು ಅಳ್ಳಾಡಿದುವು. ಭೀಮ, ದುರ್ಯೋಧನರ ಗದಾಯುದ್ಧವು ಮಹಾಭಯಂಕರವಾಯಿತು. ವ! ಇಬ್ಬರೂ ಒಬ್ಬೊಬ್ಬರಲ್ಲಿ ವೀರ್ಯವನ್ನು ಕೌಶಲವನ್ನೂ ಪ್ರದರ್ಶಿಸಿ ಕಾದಲು ದುರ್ಯೋಧನನು ವಿದ್ಯಾಧರಕರಣದಲ್ಲಿ (ಮೇಲಕ್ಕೆ ಹಾರುವ ಒಂದು ವರಸೆ ಅಥವಾ ಪಟ್ಟು) ವಿಶೇಷ ಪರಿಚಿತನಾದುದರಿಂದ ಆಕಾಶಕ್ಕೆ ನೆಗೆದು -೯೫. ಸಿಡಿಲು ಬೀಳುವಂತೆ ಭೋರೆಂದು ತಕ್ಷಣವೇ ಎರಗಿ ಮಹಾಭಯಂಕರವಾದ ದಪ್ಪನಾದ ಪರಿಘದಂತಿರುವ ಗದೆಯಿಂದ ಘರ್ಜನೆಮಾಡಿ ಇದ್ದ ಸ್ಥಳದಿಂದ ಕದಲುವಂತೆ ಹೊಡೆಯಲು ಭೂಮಿ ನಡುಗಿತು, ಭೀಮನು ನೀಲಪರ್ವತದಂತೆ ಕೆಳಗೆ ಬಿದ್ದನು; ವ|| ಹಾಗೆ ದುರ್ಯೋಧನನ ಗದೆಯ ಹೊಡೆತದಿಂದ ಮೂರ್ಛಿತನಾಗಿರಲು ದುರ್ಯೋಧನನು 'ಬಿದ್ದವನನ್ನು ಹೊಡೆಯುವುದಿಲ್ಲ' ಎಂದು ವಾಯುಮಾರ್ಗದಲ್ಲಿ ಸ್ವಲ್ಪದೂರದಲ್ಲಿಯೇ ಗದೆಯನ್ನು ಬೀಸಿದನು. ಭೀಮನು ಆ ಗದೆಯ ಗಾಳಿಯಿಂದ ಮೂರ್ಛಿಯಿಂದೆಚ್ಚತ್ತು ಭೂಮಿಯ ಮೇಲೆ ಬಿದ್ದಿದ್ದ ತನ್ನ ಗದೆಯನ್ನು ಭುಜಾದಂಡದಲ್ಲಿ ಅಳವಡಿಸಿಕೊಂಡನು. ಭೀಮನನ್ನು ಕೃಷ್ಣನು ಹೊಗಳುವ ನೆಪದಿಂದ ನಮ್ಮಪ್ಪನಿಗೆ ಜಯವಾಗುತ್ತದೆ ಎಂದು ತೊಡೆಯನ್ನು ತಟ್ಟಿ ಆರ್ಭಟಿಸಿದನು, ಭೀಮನು ಅದೇ (ಆ ತೊಡೆಯೇ) ದುರ್ಯೋಧನನ ಮರ್ಮಸ್ಥಳವೆಂದು ತಿಳಿದನು. ೯೬. ಈ ಎರಡು ತೊಡೆಗಳು ಈತನಿಗೆ ಮರ್ಮಸ್ಥಾನ.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy