SearchBrowseAboutContactDonate
Page Preview
Page 669
Loading...
Download File
Download File
Page Text
________________ ೬೬೪) ಪಂಪಭಾರತಂ ಸರೋವರದೊಳ್ ಮುಲುಗಿ ಕಾಲಾಗ್ನಿ ರುದ್ರ ರಸಾತಳದೊಳಡಂಗಿರ್ಪಂತಿರ್ದು ನಿನ್ನವಸರಕ್ಕೆ ಬಂದು ಕೂಡುವ ಬಲದೇವನುಮಂ ನಿನ್ನಿರ್ದೆಡೆಯನಳೆಯದಜಸುವಶ್ವತ್ಥಾಮ ಕೃಪ ಕೃತವರ್ಮರುಮಂ ಕೂಡಿಕೊಂಡು ಪಗೆವರಂ ನಾಳೆ ಕಾದಿ ಗೆಲ್ಲುದೆಂದು ಹಿತೋಪದೇಶಂಬೆರಸು ಜಳಮಂತ್ರೋಪದೇಶಮಂ ಕಿವಿಯೊಳ್ ಪರ್ಚಿ ಪೇಟ್ಟು ಕುರುಪಿತಾಮಹಂ ಸಂಜಯನಂ ಧೃತರಾಷ್ಟ್ರನಲ್ಲಿಗೆ ಸಂಧಾನವಾರ್ತೆಯಂ ಸಮಗೊಳಿಸುವತಾನಾಗತಬಾಧಾಪ್ರತಿಷೇಧ ಮಾಡುವಂತಟ್ಟಿ ಸಕಳ ಕುರುಕುಳಾವಲಂಬನಕಲ್ಪವೃಕ್ಷಮಂ ಪರಸಿ ಪೋಗಲ್ವೇಚಿ ದೇವನದೀಪ್ರಿಯಪುತ್ರನಂ ಧೃತರಾಷ್ಟ್ರಪುತ್ರಂ ಬೀಳ್ಕೊಂಡು ಕನಕಪತ್ರಲತಾಲಾಂಛಿತಗದಾದಂಡಮಂ ಕೊಂಡೊರ್ವನೆ ವೈಶಂಪಾಯನಸರೋವರದ ಬಟ್ಟೆಯಂ ನಡೆಗೊಂಡು - ಶಾ||| ಕ್ರಂದತ್ನಂದನಜಾತನಿರ್ಗತಶಿಖಿಚ್ಚಾಳಾಸಹಸಂಗಳಾ ಟಂದೆತ್ತ ಕವಿದುಬೇವ ಶವಸಂಘಾತಂಗಳಂ ಚಕ್ರಮೊ | ಕೆಂದಾಗ ಕಡಿದುಗ್ರಭೂತನಿಕರಂ ಕೆಯ್ ಬೇಯೆ ಬಾಯ್ ಬೇಯೆ ತಿಂ ಬಂದು ತನ್ನ ಮನಕ್ಕಗುರ್ವಿಸುವಿನಂ ದುರ್ಯೋಧನಂ ನೋಡಿದಂ || ೭೧ ವll ನೋಡಿ ಕನ ಕೆಂಡದ ಮೇಲೆ ಪಲ್ಯ ಬೇವಿನೆಣ್ಣೆಯೊಳ್ ತೊಯ್ದಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ ಬಳ್ಳುವಿನ ಬಾಯೊಳಳುರ್ವ ಕೆಂಡಂಗಳೊಳ್ ಸುಟಿದು ಬೇವ ದಿಗ್ಯಾಗದಲ್ಲಿರುವ ವೈಶಂಪಾಯನಸರೋವರದಲ್ಲಿ ಮುಳುಗಿದ್ದು ಕಾಲಾಗ್ನಿರುದ್ರನು ಪಾತಾಳಲೋಕದಲ್ಲಡಗಿರುವ ಹಾಗೆ ಇರು. ನಿನ್ನ ಸಹಾಯಕ್ಕೆ ಬಂದು ಸೇರುವ ಬಲರಾಮನನ್ನೂ ನೀನು ಇರುವ ಸ್ಥಳವನ್ನು ತಿಳಿಯದೇ ಹುಡುಕುತ್ತಿರುವ ಅಶ್ವತ್ಥಾಮ ಕೃಪ ಕೃತವರ್ಮರನ್ನು ಕೂಡಿಕೊಂಡು ಶತ್ರುಗಳನ್ನು ನಾಳೆ ಜಯಿಸು” ಎಂದು ಭೀಷ್ಮನು ಹಿತೋಪದೇಶದಿಂದ ಕೂಡಿದ ಜಳಮಂತ್ರೋದೇಶವನ್ನು ದುರ್ಯೊಧನನ ಕಿವಿಯಲ್ಲಿ ರಹಸ್ಯವಾಗಿ ಉಪದೇಶಿಸಿದನು. ಸಂಜಯನನ್ನು ಧೃತರಾಷ್ಟ್ರನ ಬಳಿಗೆ ಸಂಧಾನದ . ಮಾತನ್ನು ಸಿದ್ಧಗೊಳಿಸುವುದಕ್ಕಾಗಿ ಕಳುಹಿಸಿದನು. ಮುಂದೆ ಬರುವ ತೊಂದರೆಗೆ ಪ್ರತೀಕಾರವನ್ನು ಮಾಡುವಂತೆ ಹೇಳಿ ಸಕಲ ಕುರುವಂಶದ ಆಶ್ರಯಕ್ಕೆ ಕಲ್ಪವೃಕ್ಷದ ಹಾಗಿರುವ ದುರ್ಯೋಧನನನ್ನು ಆಶೀರ್ವದಿಸಿ ಬೀಳ್ಕೊಟ್ಟನು. ದುರ್ಯೋಧನನು ಭೀಷ್ಮನ ಅಪ್ಪಣೆಯನ್ನು ಪಡೆದು ಹೊರಟು ಕನಕಪತ್ರಲತೆಯಿಂದ ಗುರುತುಮಾಡಲ್ಪಟ್ಟ ಗದಾದಂಡವನ್ನು ತೆಗೆದುಕೊಂಡು ಏಕಾಕಿಯಾಗಿ ವೈಶಂಪಾಯನಸರೋವರದ ಮಾರ್ಗವನ್ನು ನಡೆದುಹೋದನು. ೭೧. ಶಬ್ದಮಾಡುತ್ತಿರುವ ರಥದಿಂದ ಹುಟ್ಟಿ ಹೊರಹೊರಟ ಸಾವಿರಾರು ಅಗ್ನಿಜ್ವಾಲೆಗಳು ಮೇಲೆ ಹಾಯ್ದು ಎಲ್ಲಕಡೆಯೂ ಸುಡುತ್ತಿರಲು ಬೇಯುತ್ತಿರುವ ಹೆಣಗಳ ರಾಶಿಗಳನ್ನು ಆಗ ಭಯಂಕರವಾದ ಪಿಶಾಚಿಗಳ ಸಮೂಹಗಳು ಚಕ್ಕುಮೊಕ್ಕೆಂದು ಕತ್ತರಿಸಿ ಕೈಬಾಯಿಗಳು ಬೇಯುತ್ತಿರುವಂತೆಯೇ ತಿನ್ನುವುದನ್ನು ನೋಡಿದಾಗ ದುರ್ಯೊಧನನ ಮನಸ್ಸಿಗೆ ವಿಶೇಷ ಭಯವುಂಟಾಯಿತು. ವll ಹೊಳೆಯುತ್ತಿರುವ ಕೆಂಡದ ಮೇಲೆ ಹಳೆಯ ಬೇವಿನೆಣ್ಣೆಯಲ್ಲಿ ನೆನೆಯಿಕ್ಕಿದ ಬೆಳ್ಳುಳ್ಳಿಯ ವಾಸನೆಯ ಹಾಗೆ ಗುಳ್ಳೆನರಿಯ ಬಾಯಲ್ಲಿ ಸುಡುತ್ತ ಕಾಣಿಸಿಕೊಂಡು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy