________________
ತ್ರಯೋದಶಾಶ್ವಾಸಂ | ೬೬೩ ಉll ದೋಷಮುಮೇವಮುಂ ಶಕುನಿಯಿಂ ಯುವರಾಜನಿನಾಯ್ತು 'ಪೋಯ್ತು ನಿ
ರ್ದೋಷಿಗಳಷ್ಟ ನಿಮ್ಮೆರಡು ತಂಡಮುಮಿಂ ಪುದುವಾಳ್ಳುದಂತದೇಂ || ದೋಷಮೊ ಮೇಣ್ ವೃಕೋದರನಿನಾ ರಣರಂಗದೊಳಾದ ದುಷ್ಟ ದು
ಶ್ಯಾಸನರಕ್ತಮೋಕ್ಷದೊಳೆ ದೋಷವಿಮೋಕ್ಷಮದೇಕೆ ಕೊಂಡಷ್ಯ || ೬೮
ವ|| ಎಂದು ನುಡಿದ ಪಿತಾಮಹನ ನುಡಿಗಳೆ ಕುರುರಾಜನಿಂತೆಂದಂಮlu
ಶರಶಯಾಗ್ರದೊಳಿಂತು ನೀಮಿರೆ ಘಟಪೋದೂತನಂತಾಗೆ ವಾ ಸರನಾಥಾತ್ಮಜನಂತು ಸಾಯೆ ರಣದೊಳ್ ದುಶ್ಯಾಸನಂ ತದ್ಧ ಕೋ | ದರನಿಂದಂತಚಿದ ಸೈರಿಸಿಯುಮಾಂ ಸಂಧಾನಮಂ ವೈರಿ ಭೂಪ ರೊಳಿ೦ ಸಂಧಿಸಿ ಪೇಟೆಮಾರ್ಗ ಮಜವೆಂ ಸಂಪತ್ತುಮಂ ಶ್ರೀಯುಮಂll ೬೯ ಕಂ11 ಬಿಡಿಮೆನ್ನ ನುಡಿಗೆ ಬೀಳ್ಕೊಳೆ
ನುಡಿಯದಿರಿಂ ಪೆಜತನಜ್ಜ ಮುಂ ನುಡಿದೆರಡಂ | ನುಡಿವನೆ ಚಲಮಂ ಬಲ್ಕಿಡಿ ವಿಡಿದೆಂ ತನ್ನವುದಕ್ಕೆ ಸಂಗರ ಧರೆಯೊಳ್ ||
೭೦ * ವ|| ಎಂಬುದುಂ ನೀನುಮಂತುಂ ಕಾದಿಯಲ್ಲದಿರೆಯವೊಡಿಂದಿನೊಂದಿವಸಮನನ್ನ ಪೇಟ್ಟಿ ಜಳಮಂತ್ರೋಪದೇಶಮಂ ಕೆಯೊಂಡು ಕುರುಕ್ಷೇತ್ರದುತ್ತರದಿಣ್ಣಾಗದ ವೈಶಂಪಾಯನ
ಕುರುಕುಲಶ್ರೇಷ್ಠನಾದ ದುರ್ಯೋಧನನೇ ನೀನು ನಾನು ಹೇಳಿದ ಮಾತಿಗೆ ತಲೆಯಾಡಿಸಬೇಡ. ! ೮. ನಿಮ್ಮ ತಪ್ಪೋ ಕೋಪವೂ ಶಕುನಿಯಿಂದಲೂ ದುಶ್ಯಾಸನನಿಂದಲೂ ಪ್ರಾರಂಭವಾಯಿತು, ಹೋಯಿತು; ನಿರ್ದೋಷಿಗಳಾದ ನಿಮ್ಮ ಎರಡು ಗುಂಪೂ ಇನ್ನು ಕೂಡಿ ಬಾಳಿರಿ; ಹಾಗೆ ಮಾಡುವುದು ದೋಷವೇನಲ್ಲ. ಭೀಮನು ರಣರಂಗದಲ್ಲಿ ಬಿಡುಗಡೆಮಾಡಿದ ದುಷ್ಟ ದುಶ್ಯಾಸನನ ರಕ್ತದಿಂದಲೇ ದೋಷವಿಮೋಚನೆಯೂ ಆಯಿತು. ನೀನು ಅದನ್ನೇ ಪುನಃ ಏಕೆ ಅಂಗೀಕರಿಸುತ್ತೀಯೆ? ವ|| ಎಂದು ಹೇಳಿದ ಭೀಷ್ಮನ ಮಾತುಗಳಿಗೆ ದುರ್ಯೋಧನನು ಹೀಗೆಂದನು-೬೯. ಬಾಣದ ಹಾಸಿಗೆಯ ತುದಿಯಲ್ಲಿ ನೀವು ಹೀಗಿರುವಾಗ ದ್ರೋಣಾಚಾರ್ಯರು ಹಾಗಿರುವಾಗ, ಕರ್ಣನು ಸತ್ತು ಯುದ್ಧದಲ್ಲಿ ದುಶ್ಯಾಸನನು ಭೀಮನಿಂದ ಹಾಗೆ ಸತ್ತು ನಾಶವಾಗಿರುವಾಗ (ಇವೆಲ್ಲವನ್ನೂ ನಾನು ಸಹಿಸಿಕೊಂಡು ಶತ್ರುರಾಜರಲ್ಲಿ ಸಂಧಿಯನ್ನುಂಟುಮಾಡಿಕೊಂಡು ಯಾರಿಗೆ ನನ್ನ ಐಶ್ವರ್ಯವನ್ನೂ ವೈಭವವನ್ನೂ ಪ್ರದರ್ಶಿಸಬೇಕು. ೭೦. ನನ್ನ ಮಾತಿಗೆ (ಸಿದ್ಧಾಂತಕ್ಕೆ) ನನ್ನನ್ನು ಬಿಡಿ, ಅಜ್ಜ, ತಮ್ಮ ಅಪ್ಪಣೆಯನ್ನು ಪಡೆದು ಹೋಗುವುದಕ್ಕಾಗಿ ಬಂದ ನನಗೆ ಬೇರೆ ಯಾವುದನ್ನೂ ಹೇಳಬೇಡಿ. ಮೊದಲು ಒಂದು ರೀತಿ ಪುನಃ ಬೇರೆ ರೀತಿಯಲ್ಲಿ ಹೇಳುತ್ತೇನೆಯೇ? ಛಲವನ್ನು ಬಿಗಿಯಾಗಿ ಹಿಡಿದಿದ್ದೇನೆ. ಯುದ್ದದಲ್ಲಿ ತಾನಾದುದಾಗಲಿ' ಎಂದನು. ವ| “ನೀನು ಹೇಗೂ ಯುದ್ಧ ಮಾಡದೇ ಇರುವುದಿಲ್ಲವಾದರೆ ಈ ಒಂದು ದಿವಸವನ್ನು ನಾನು ಹೇಳುವ ಜಲಮಂತ್ರೋಪದೇಶವನ್ನು ಅಂಗೀಕರಿಸಿ ಕುರುಕ್ಷೇತ್ರದ ಉತ್ತರ