SearchBrowseAboutContactDonate
Page Preview
Page 658
Loading...
Download File
Download File
Page Text
________________ - ತ್ರಯೋದಶಾಶ್ವಾಸಂ | ೬೫೩ ಚಂ|| ಮುಳಿಯಿಸದನ್ನಮಾ ನೃಪನಿನಾಗದು ಸಾವನಗೆಂತುಮಿಾತನಂ ಮುಳಿಯಿಪಿನಂದುರಃಸ್ಥಳಮನಂತೂದದಾಗಡೆ ಕಂತುಗೀಶ್ವರಂ || ಮುಳಿದವೊಲಾ ನೃಪಂ ಮುಳಿದು ನೋಡ ವಿಲೋಚನಪಾವಕಂ ತಗು' ಆಳುರ್ದೊಡೆ ಬೂದಿಯಾದುದೊಡಲಾಗಳೆ ಮದ್ರ ಮಹಾಮಹೀಶನಾ || - ೪೮ ವ|| ಅಂತಜಾತಶತ್ರು ನೇತ್ರೋದ್ದಾತಾನಳಂ ತ್ರಿಣೇತಲಲಾಟಾನಳನಂತಳವಲ್ಲದಳು ಮದ್ರನಾಥಂ ಭಸ್ಮಿಭೂತನಾದ ಮಾತನಹಿಕೇತನಂ ಕೇಳುಉ! ಆ ದೊರೆಯರ್ ನದೀಜ ಘಟಸಂಭವ ಸೂರ್ಯತನೂಜ ಮದ್ರ ರಾ ಜಾದಿ ಮಹೀಭುಜರ್‌ ಧುರದೊಳೆನ್ನಯ ದೂಸಟಿನಲ್ಲಿ ಮಚ್ಚೆದಂ | ತಾದರಿಂದ ಮಯುಟಿದುದಿನೆನಗಾವುದೊ ಮೆಳಡೆಯ ಮುಂ ದಾದ ವಿರೋಧಿಸಾಧನಮನನ್ನ ಗದಾಶನಿಯಿಂದುರುಳುವೆಂ 1 ೪೯ ವ| ಎಂದು ನಿಜಭುಜ ವಿಕ್ರಮೃಕಸಾಹಯನಾಗಿ ಗದೆಯಂ ಕೊಂಡು ಸಂಗ್ರಾಮ ರಂಗಕ್ಕೆ ನಡೆಯಲೆಂದಿರ್ದ ಕುರುಕುಳಚೂಡಾಮಣಿಯ ದಕ್ಷಿಣಕರಾಗ್ರಮಂ ಪಿಡಿದು ಸಂಜಯನಿಂತೆಂದಂ* ಮll ಬೆವಸಾಯಂಗೆಯನ್ನುಮುಂಟೆಡೆ ಕೃಪಾಶ್ವತ್ಥಾಮರುಳ್ಳಂತೆ ಪಾಂ ಡವರಂ ಗೆಲ್ಗುದಸಾಧ್ಯಮಾಯ್ಕೆ ನಿಜ ದೋರ್ದಂಡಂಬರಂ ಗಂಡರಾ | ಹವರಂಗಕ್ಕೊಳಗೇ ಸಮಂತು ಪಗೆಯಂ ಕೊಲ್ವಂತು ಗೆಲ್ವಂತು ಕಾ , ದುವುದೇಕಾಕಿಯ ಆಗಿ ದೇವರಿಪುಭೂಪಾಳರ್ಕಳೊಳ್ ಕಾದುವೆ || ೫೦ ಶಲ್ಯನು ನೋಡಿ (ಕರುಣದಿಂದ ನೋಡಿ) ಕರುಣಿಸಿ, ೪೮. ಕೋಪವನ್ನುಂಟು ಮಾಡುವವರೆಗೂ ಈ ರಾಜನಿಂದ ಸಾವು ಹೇಗೂ ನನಗಾಗುವುದಿಲ್ಲ. ಹೇಗೂ ಈತನನ್ನು ರೇಗಿಸುತ್ತೇನೆ ಎಂದು ಎದೆಯನ್ನು ಒದ್ದನು. ತಕ್ಷಣವೇ ಮನ್ಮಥನಿಗೆ ಈಶ್ವರನು ಕೋಪಿಸಿಕೊಂಡ ಹಾಗೆ ಆ ರಾಜನು ಕೋಪಿಸಿ ನೋಡಿದನು. ಕಣ್ಣಿನ ಬೆಂಕಿಯು ಅಟ್ಟಿಕೊಂಡು ಬಂದು ಆಗಲೆ ಸುಡಲು ಶಲ್ಯಮಹಾರಾಜನ ಶರೀರವು ಬೂದಿಯಾಯಿತು. ವ|| ಹಾಗೆ ಧರ್ಮರಾಯನ ಕಣ್ಣಿನಲ್ಲಿ ಹುಟ್ಟಿದ ಬೆಂಕಿಯು ಮುಕ್ಕಣ್ಣನ ಹಣೆಗಣ್ಣಿನ ಬೆಂಕಿಯಂತೆ ಅಳತೆಯಿಲ್ಲದಷ್ಟು ಸುಡಲು ಶಲ್ಯನು ಬೂದಿಯಾದ ಮಾತನ್ನು ದುರ್ಯೋಧನನು ಕೇಳಿದನು. ೪೯. ಅಂತಹ ಅದ್ಭುತಶಕ್ತಿಯುಳ್ಳ ಭೀಷ್ಮ ದ್ರೋಣ, ಕರ್ಣ, ಮದ್ರರಾಜನೇ ಮೊದಲಾದ ರಾಜರುಗಳು ಯುದ್ಧದಲ್ಲಿ ನನ್ನ ಕಾರಣದಿಂದ ಸತ್ತು ನಿರ್ನಾಮವಾದರು. ಈ ನನ್ನದೊಂದೆ ಶರೀರ ಉಳಿದಿದೆ. ಇನ್ನು ನನಗೆ ಮಾಡುವ ಕಾರ್ಯವಾವುದು? ಸಂಪೂರ್ಣವಾಗಿ ನನ್ನನ್ನು ಎದುರಿಸುವ ಶತ್ರುಸೈನ್ಯವನ್ನು ನನ್ನ ಗದೆಯೆಂಬ ಸಿಡಿಲಿನಿಂದ ಉರುಳಿಸುವೆನು ವll ಎಂದು ತನ್ನ ಬಾಹುಬಲವೊಂದನ್ನೇ ಸಹಾಯವನ್ನಾಗಿ ಹೊಂದಿ ಗದೆಯನ್ನು ತೆಗೆದುಕೊಂಡು ಯುದ್ಧರಂಗಕ್ಕೆ ಹೋಗಬೇಕೆಂದಿದ್ದ ಕುರುಕುಲಚೂಡಾಮಣಿಯಾದ ದುರ್ಯೋಧನನ ಬಲಗೈಯ್ಯ ತುದಿಯನ್ನು ಹಿಡಿದುಕೊಂಡು ಸಂಜಯನು ಹೀಗೆಂದನು.-೫೦. ಕೃಪಾಶ್ವತ್ಥಾಮರಿರಲು ಕಾರ್ಯಭಾರಮಾಡುವುದಕ್ಕೆ ಇನ್ನೂ ಅವಕಾಶವುಂಟು. ಪಾಂಡವರನ್ನು ಗೆಲ್ಲುವುದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy