SearchBrowseAboutContactDonate
Page Preview
Page 657
Loading...
Download File
Download File
Page Text
________________ ೬೫೨) ಪಂಪಭಾರತಂ * ಪರ್ಛಾಸಿರ ಮಕುಟಬದ್ಧರಂ ಕೊಂದು ಮುಂದಾಂಪರಾರುಮಂ ಕಾಣದ ಮೇಗಿಲ್ಲದೆ ನಿಂದಾಗಳ್ ಧರ್ಮಪುತ್ರ ತ್ರಿಭುವನಂಗಳಾಕಂಪಂಗೊಳೆ ಮುರಜಕೇತನವಿರಾಜಿತಮಪ್ಪ ತನ್ನ ರಥಮನದಿರದಿದಿರು ಪರಿಯಿಸಿಮಲ್ಲಿಕಾಮಾಲೆ 1 ಬೀರವಟ್ಟಮನಾಂತ ಬೀರರುಮಿರ್ವರುಂ ಸುರ ರಾಜಿ ಕೈ ವಾರದಿಂ ಬಟಿವಿಟ್ಟು ನಮ್ಮನೆ ನೋಡ ನೋಡುವರೀಗಳೀ | ಭಾರತಂ ಸಮೆದಪ್ಪುದಳದ ನಿಂದು ಕಾದೆನುತುಂ ಶರಾ ಸಾರಮಂ ಸುರಿದಂತಕಾತ್ಮಜನಂತಸುಂಗೊಳೆ ಕಾದಿದಂ || ಕಂth ಕಾದೆ ರಥ ತುರಗ ಕೇತನ ಕೋದಂಡಂಗಳುಮನುಜದೆ ಖಂಡಿಸಿ ವಿಳಯಾಂ | ಭೋದನಿನಾದದ ಮದ್ರ ಮ ಹೀದಯಿತಂ ತೊಟ್ಟನಾರ್ವುದುಂ ಧರ್ಮಸುತಂ || ಮುಳಿದು ತಳಮಳಿಸಿ ತಳರದ ತೊಳಗುವ ಕರವಾಳನುರ್ಚಿ ಮೆಯ್ಕೆರ್ಚಿ ಪೊದ | ಆಳವಮರೆ ಹಿಡಿದು ರಥದಿಂ ದಿಳೆಗಿಳಿದವನವನಿಪತಿಯನಣುಗಿದೆವೋಯ್ತಂ || ವll ಪೊಯೊಡೆ ಮದಾಂಧಗಂಧಸಿಂಧುರಂ ಪೊಯ್ದ ಪೆರ್ಮರದಂತೆ ನೆಲನದಿರೆ ಕೆಡೆದ ತನ್ನಳಿಯನಂ ಮದ್ರರಾಜಂ ಕಂಡು ಕರುಣಿಸಿ ಪಾಂಡವಸೈನ್ಯದಲ್ಲಿ ಒಂದಕ್ಟೋಹಿಣಿ ಸೈನ್ಯವನ್ನು ಕೊಂದು ದ್ರುಪದನ ಅಯ್ದುಜನ ಮಕ್ಕಳನ್ನೂ ಅವನ ಇಪ್ಪತೈದು ತಮ್ಮಂದಿರನ್ನೂ ಶಕಟವಿಕಟರೇ ಮೊದಲಾದ ಹನ್ನೆರಡುಸಾವಿರ ರಾಜರನ್ನೂ ಕೊಂದು ಮುಂದೆ ಪ್ರತಿಭಟಿಸುವವರಾರನ್ನೂ ಕಾಣದೆ ತನಗಿಂತ ಉತ್ತಮರಾದವರಾರೂ ಇಲ್ಲದೆ ನಿಂತನು. ಧರ್ಮರಾಜನು ಮೂರುಲೋಕಗಳೂ ಪೂರ್ಣವಾಗಿ ನಡುಗಿಸುವಂತೆ ಮದ್ದಲೆಯ ಗುರುತಿನ ಬಾವುಟದಿಂದ ಮೆರೆಯುತ್ತಿರುವ ತನ್ನ ತೇರನ್ನು ಹೆದರದೆ ಎದುರಾಗಿ ಹರಿಯಿಸಿದನು. ೪೫. ನಾವಿಬ್ಬರೂ ಸೇನಾಧಿಪತ್ಯವನ್ನು ವಹಿಸಿರುವ ವೀರರೇ ಆಗಿದ್ದೇವೆ. ದೇವತೆಗಳ ಸಮೂಹವು ಹೊಗಳುತ್ತಾ ದಾರಿಮಾಡಿಕೊಂಡು ನಮ್ಮನ್ನೇ ನೋಡುತ್ತಿದ್ದಾರೆ. ನೋಡು ಈಗ ಈ ಭಾರತಯುದ್ಧ ಪರಿಸಮಾಪ್ತಿಯಾಗುತ್ತಿದೆ. ಹೆದರದೆ ನಿಂತು ಯದ್ಧಮಾಡು ಎನ್ನುತ್ತ ಬಾಣದ ಮಳೆಯನ್ನು ಸುರಿದು ಧರ್ಮರಾಯನು ಪ್ರಾಣವನ್ನು ಸೆಳೆದುಕೊಳ್ಳುವಂತೆ ಕಾದಿದನು. ೪೬. ತೇರು, ಕುದುರೆ, ಬಾವುಟ, ಬಿಲ್ಲುಗಳನ್ನು ವೇಗವಾಗಿ ಖಂಡಿಸಿ ಪ್ರಳಯಕಾಲದ ಗುಡುಗಿನ ಶಬ್ದದಿಂದ ಶಲ್ಯಮಹಾರಾಜನು ಗರ್ಜಿಸಿದನು. ಧರ್ಮರಾಯನು ೪೭. ಕೋಪದಿಂದ ತಲ್ಲಣಗೊಂಡು ಹೊಳೆಯುವ ಕತ್ತಿಯನ್ನು ಒರೆಯಿಂದ ಸೆಳೆದು ರಥದಿಂದ ಇಳಿದು ಉಬ್ಬಿ ಆವರಿಸಿದ ಶಕ್ತಿಯಿಂದ ಹೊಡೆಯಲು ಶಲ್ಯನ ಸಮೀಪಕ್ಕೆ ಬರಲು ಶಲ್ಯನೂ ತೇರಿನಿಂದ ಇಳಿದು ಧರ್ಮರಾಜನನ್ನು ಸಮೀಪಿಸಿ ಹೊಡೆದನು. ವ|| ಮದ್ದಾನೆಯು ಅಪ್ಪಳಿಸಿದ ದೊಡ್ಡ ಮರದಂತೆ ನೆಲವು ಅಳ್ಳಾಡುವ ಹಾಗೆ ಕೆಳಗೆ ಬಿದ್ದ ತನ್ನಳಿಯನಾದ ಧರ್ಮರಾಜನನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy