SearchBrowseAboutContactDonate
Page Preview
Page 650
Loading...
Download File
Download File
Page Text
________________ ತ್ರಯೋದಶಾಶ್ವಾಸಂ | ೬೪೫ ಚoll ನುಡಿ ನಿನಗಂ ದಿನೇಶತನಯಂಗಮದೆನ್ನಯ ಪಕ್ಕದಾದೊಡಂ ಮಿಡುಕದ ಕೇಳೋನಲ್ಲಿ ಸಮನಿರ್ವರುಮಾತನತೀತನಾದ ಓಂ | ಬಡಿನೊಳದೆಂತು ಪೇಯ್ ಪಟಿಯ ಕೇಳ್ವನೂ ಕೇಳೊಡ ಚಿಃ ಪಣಂ ಪರಿಂ ನುಡಿದೊಡೆ ಕೇಳನೆಂದೆನಗೆ ನೋಯನೆ ಸಗ್ಗದೂಳಿರ್ದಿನಾತ್ಮಜಂ || ೨೮ ವt ಎಂಬುದುಮೀ ನುಡಿಯ ನಿನ್ನ ಕೂರ್ಮಗಂ ತಕ್ಕೂರ್ಮೆಗಂ ದೊರೆಯಪ್ಪು ದಾದೊಡಮರಾತಿನಮಂ ತವ ಕೊಂದಲ್ಲದೆ ನಿನ್ನ ಮೊಗಮಂ ನೋಡೆನೆಂದಶ್ವತ್ಥಾಮ ನಾಸ್ಥಾನದಿಂದಟ್ಟು ಪೋದನಾಗಳ್ ಭೂನಾಥಂ ಮದ್ರರಾಜನನಿಂತೆಂದಂ ಚಂ| ಇನತನಯಂಗೆ ಸಾವುಮೆನಗಿಂತಿನಿತೂಂದಬಲುಂ ದಿನೇಶ ಪು ತನೆ ನಿಮಗಿಂಬುಕಯ್ಯದುದಂ ದೊರಕೊಂಡುದು ವೀರ ಲಕ್ಷ್ಮಿ ನಿ | ಮನುಬಲದಿಂದಮಲ್ಲನಗಾಗದು ದಲ್ ಸಲೆ ಪಟ್ಟಮಂ ಸಮಂ ತನಗೆಯೆ ಮಾಡಿಕೊಡೇ ತೂದಳೊ ನೀಮ ದಲಾಂಪುದು ಬೀರವಟ್ಟಮಂ ||೨೯ ವ|| ಎಂಬುದುಂ ಶಲ್ಯನಿಂತಿರ್ದಿನಿಬರೊಳಮಾನಾವಾಳ ದೊರೆಯಂ ಬೆಸನಂ ನೀಮನಗೆ ದಯೆಗೆಯ್ದಿರೆಂಬುದೆಲ್ಲಮೆನಗೆ ಸೈಪುಂ ಸ್ವಾಮಿ ಸಂಪತ್ತುಮಂತಗೆಯ್ದನೆಂದು ಷೋಡಶ ರಾಜಭರಮಂ ತಾಳ್ಳುವಂತೆ ಸೇನಾಧಿಪತ್ಯಭಾರಮಂ ಮದ್ರರಾಜು ತಾಳಿ ನನ್ನೆದುರಿನಲ್ಲಿ ಕರ್ಣನನ್ನು ನಿಂದಿಸಿ ಬದುಕುತ್ತಿದ್ದರೆ? ೨೮. ನಿನಗೂ ಕರ್ಣನಿಗೂ ನನ್ನ ಸಮಕ್ಷಮದಲ್ಲಿ ವಾಗ್ವಾದವಾದರೆ ಚಲಿಸದೆ ಕೇಳುತ್ತೇನೆ. ಅಲ್ಲಿ ಇಬ್ಬರೂ ಸಮ. ಅವನು ಸತ್ತುಹೋದ ಬಳಿಕ ಅದು ಹೇಗೆ ಅವನ ವಿಷಯವಾದ ನಿಂದೆಯನ್ನು ಕೇಳುವೆನು ಹೇಳು. ಹಾಗೆ ಕೇಳಿದರೆ ಸ್ವರ್ಗದಲ್ಲಿರುವ ಕರ್ಣನು ಚಿಃ, ಇತರರು ನನ್ನನ್ನು ಬಯ್ದರೆ (ದುರ್ಯೊಧನನು) ಇದನ್ನು ಕೇಳಿದನು ಎಂದು ನನ್ನ ವಿಷಯದಲ್ಲಿ ನೊಂದುಕೊಳ್ಳುವುದಿಲ್ಲವೇ? ವ| ಎನ್ನಲು ಈ ಮಾತೇ ನಿನ್ನ ಸ್ನೇಹಕ್ಕೂ ಯೋಗ್ಯವಾದ ನಡತೆಗೂ ಸಮಾನವಾಗಿದೆ (ಯೋಗ್ಯವಾಗಿದೆ. ಆದರೂ ಶತ್ರುಸೈನ್ಯವನ್ನು ಪೂರ್ಣವಾಗಿ ಕೊಂದಲ್ಲದೆ ನಿನ್ನ ಮುಖವನ್ನು ನೋಡುವುದಿಲ್ಲ ಎಂದು ಅಶ್ವತ್ಥಾಮನು ಅಲ್ಲಿಂದ ಎದ್ದುಹೋದನು. ಆಗ ರಾಜನಾದ ದುರ್ಯೋಧನನು ಶಲ್ಯನನ್ನು ಕುರಿತು ಹೀಗೆಂದನು - ೨೯. ಕರ್ಣನಿಗೆ ಸಾವೂ ನನಗೆ ಇಷ್ಟೊಂದು ದುಃಖವೂ ಕರ್ಣನು ನೀವು ಹೇಳಿದ ಹಾಗೆ ಕೇಳದುದರಿಂದುಂಟಾಯಿತು. ವೀರಲಕ್ಷಿಯೂ ನಿಮ್ಮ ಸಹಾಯವಿಲ್ಲದೆ ನನಗೆ ಆಗುವುದಿಲ್ಲ ಅಲ್ಲವೇ? ನಿಜವಾಗಿಯೂ ನನಗೆ ರಾಜ್ಯಾಭಿಷೇಕಮಾಡಬೇಕಾದರೆ (ನಾನು ಗೆಲ್ಲಬೇಕಾದರೆ) ನೀವೇ ವೀರಪಟ್ಟವನ್ನು ಸ್ವೀಕರಿಸಬೇಕು. ಇದು ಸುಳ್ಳೇ? ವ|| ಎನ್ನಲಾಗಿ ಇಲ್ಲಿರುವ ಇಷ್ಟು ಜನರಲ್ಲಿ (ಲೆಕ್ಕದವನು) ನಾನು ಯಾವ ವೀರಪುರುಷನಿಗೆ ಸಮಾನಾಗುತ್ತೇನೆ. ನೀವು ನನಗೆ ಕಾರ್ಯವನ್ನು ದಯೆಗೈದಿರುವದೆಲ್ಲ ನನ್ನ ಅದೃಷ್ಟವೂ ಸ್ವಾಮಿಸಂಪತ್ತೂ ಆಗಿರುತ್ತದೆ. ನೀವು ಹೇಳಿದ ಹಾಗೆಯೇ ಮಾಡುತ್ತೇನೆ' ಎಂದು ಹದಿನಾರು ರಾಜರ ಭಾರವನ್ನೂ ತಾಳುವಂತೆ ಶಲ್ಯನು ಸೇನಾಧಿಪತ್ಯ ಭಾರವನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy