SearchBrowseAboutContactDonate
Page Preview
Page 649
Loading...
Download File
Download File
Page Text
________________ ೬೪೪ | ಪಂಪಭಾರತಂ ವ|| ಎಂಬುದುಂ ಜಳಧರಧ್ವನಿಯಿನಶ್ವತ್ಥಾಮನಿಂತೆಂದಂಚoll ಕುಳಬಳಶೌರ್ಯಧೈರ್ಯಯುತರೆಲ್ಲರುಮಂ ಪಂಗಿಕ್ಕಿ ಕರ್ಣನಂ ಪಳಯಿಸುತಿರ್ಪಯೇನೂ ಗಳ ನಿನ್ನಯ ತಮ್ಮನ ನೆತ್ತರಂ ಭಯಂ | ಗೋಳೆ ಪವಮಾನಸೂನು ತವ ಪೀರ್ದಡೆಯೊಳ್ ಕಲಿ ಕರ್ಣನೇಕೆ ಪೇಯ್ ಮಿಳ ಮಿಳ ನೋಡುತಿರ್ದನವನುರ್ಕನಿಳಾಧಿಪರುಂಟೆ ನಿನ್ನವೋಲ್ || ೨೫ ಕoil ಅಂಬಿಗಳಾದುದಿದು ಋಣ ಸಂಬಂಧಂ ನಿನಗಮೋಘಮಿದನುಟಿದವರಾ | ರ್ಗ೦ ಬಿಸುಡಂ ಬರ್ಕುಮ ನೀಂ ಬೆಸಸುವುದನ್ನನಾಂತರಂ ತವ ಕೊಲ್ವಂ || ೨೬ ವl ಎಂದಶ್ವತ್ಥಾಮಂ ಕರ್ಣನ ಪಡೆದು ನುಡಿದೊಡಾ ನುಡಿಗೆ ಮುನಿದು ಕೂಲ್ವನಿತು ವರಂ ಬಗೆದು ದುರ್ಯೋಧನನಿಂತೆಂದಂಕಂ|| ನಿನ್ನಿಂದಂ ತ್ರಿಭುವನ ರಾ ಜ್ಯೋನ್ನತಿ ಬಂದೆನಗೆ ಸಾರ್ಗುಮವೊಡಮೊಲ್ಲಂ | ನೀನ್ನುಡಿದು ಬರ್ದುಕಿ ಪಜ ರೆದಿರೊಳ್ ನುಡಿದು ಕರ್ಣನಂ ಬರ್ದುಕುವರೇ || ೨೭ ನಾನು ಏನೆಂಬುದಾಗಿ ಸಂಧಿಯನ್ನುಂಟುಮಾಡಲಿ ? ಕರ್ಣನನ್ನು ನನ್ನ ಮುಂದೆ ತಂದು ಇಳಿಸುವುದಕ್ಕೆ ಸಮರ್ಥನಾದರೆ (ಆಗ ಸಂಧಿಯನ್ನು ಗಳಿಯಿಸುತ್ತೇನೆ. ಕೃಪನೇ ನೀನು ಈ ಮಾತನ್ನು ಏನೆಂದು ಹೇಳುತ್ತೀಯೆ. ಇನ್ನು ಮಾತನ್ನು ಬಿಡು. ಯುದ್ಧಭೂಮಿಯಲ್ಲಿ ಪಾಂಡವರನ್ನು ಕಾಣುವ ದುರ್ಯೊಧನನೆಂಬ (ಆಶ್ಚರ್ಯವಾದ) ಹೆಸರುಳ್ಳವನಲ್ಲವೇ ನಾನು? ವ| ಎನ್ನಲು ಗುಡುಗಿನ ಶಬ್ದದಿಂದ ಅಶ್ವತ್ಥಾಮನು ಹೀಗೆಂದನು-೨೫. ಕುಲ, ಬಲ, ಶೌರ್ಯ ಧೈರ್ಯದಿಂದ ಕೂಡಿದವರೆಲ್ಲರನ್ನೂ ಬಿಟ್ಟು ಕರ್ಣನನ್ನು ಕುರಿತು ಪ್ರಲಾಪಮಾಡುತ್ತಿದ್ದೀಯೆ, ನಿಜ. ನಿನ್ನ ತಮ್ಮನಾದ ದುಶ್ಯಾಸನನ ರಕ್ತವನ್ನು ಭಯವನ್ನುಟುಮಾಡುತ್ತಿರುವ ಹಾಗೆ ಭೀಮನು ಪೂರ್ಣವಾಗಿ ಕುಡಿದ ಸಂದರ್ಭದಲ್ಲಿ ಶೂರನಾದ ಕರ್ಣನೇಕೆ ಹೇಳು ಮಿಟಮಿಟನೆ ನೋಡುತ್ತಿದ್ದ? ನಿನ್ನ ಹಾಗಿರುವ ರಾಜರೂ ಉಂಟೇ ? ೨೬. ನಿನಗೆ ಅಂಬಿಗರವನಲ್ಲಿ ವಿಶೇಷ ಋಣಸಂಬಂಧವಾಯಿತು. ಇದನ್ನು ಬಿಡಿಸಲು ಉಳಿದವರಿಗೆ ಸಾಧ್ಯವೇ ? ನೀನು ಅಪ್ಪಣೆ ಕೊಡು; ಪ್ರತಿಭಟಿಸಿದವರನ್ನು ಪೂರ್ಣವಾಗಿ ಕೊಲ್ಲುತ್ತೇನೆ. ವ|| ಎಂದು ಅಶ್ವತ್ಥಾಮನು ಕರ್ಣನನ್ನು ನಿಂದಿಸಿ ಮಾತನಾಡಲು ಆ ಮಾತಿಗೆ ಕೋಪಿಸಿಕೊಂಡು ಅವನನ್ನು ಕೊಂದು ಹಾಕುವವರೆಗೂ ಯೋಚಿಸಿ ದುರ್ಯೋಧನನು ಹೀಗೆಂದನು. ೨೭. ನಿನ್ನಿಂದ ಮೂರುಲೋಕದ ರಾಜ್ಯಾಧಿಪತ್ಯದ ವೈಭವವು ಬಂದು ನನಗೆ ಸೇರುವುದಾದರೂ ನನಗೆ ಬೇಡ. ಕರ್ಣನ ವಿಷಯವಾಗಿ (ಕೆಟ್ಟುದನ್ನು) ಆಡಿ ನೀನಾಗುವ ಹೊತ್ತಿಗೆ ಬದುಕಿದ್ದೀಯೆ. ಇತರರು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy