SearchBrowseAboutContactDonate
Page Preview
Page 644
Loading...
Download File
Download File
Page Text
________________ ತ್ರಯೋದಶಾಶ್ವಾಸಂ | ೬೩೯ ಹರಿಣಿ | ಪಗೆಗೆ ಕಣಿಯೊಂದುಂಟೇ ನಣ್ಣಂಗಮಾಗರಮುಂಟೆ ನೀರಿ ಬಗೆಯ ಪಗೆಯುಂ ನಣ್ಣುಂ ಕೆಯ್ಯೋಂಡ ಕಜ್ಯದಿನ ಪು | ಟ್ಟುಗುಮರಸುಗಳೆಂದೀ ಸಂದರ್ಥಶಾಸ್ತ್ರದೊಳೇಕೆ ಪೇಯ್ ಮಗನೆ ನೆಗ ಕಾರ್ಯಂ ಮಿತ್ರಾದಿ ಕಾರಕಮೆಂಬುದಂ || ೧೦ ಕಂ! ನೀನುಳೊಡಲ್ಲರೊಳರೆಮ ಗೇನುಮಲ್ ಮನದೊಳಿಲ್ಲದಂತೆನೆ ಮಗನೇ || ಭಾನುವೆ ಸಾಲದೆ ಪಗಲೆನಿ ತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ 11 . ? ವಗ ಅದಲ್ಲದೆಯುಂ ಪಾಂಡವರಪೊಡೆನಗೆ ಪಾಂಡುರಾಜಂಗೆ ಬೆಸಕೆಯ್ಯದುದನೆ ಬೆಸಕೆಯ್ಯರೆಂದುದಂ ಮೀಜುವರಲ್ಲರವರನಾನೆಂತುಮೊಡಂಬಡಿಸಿ ನೀನೆಂದುದನೆನಿಸುವನಿದರ್ಕೆ ಮಾರ್ಕೊಳ್ಳದೊಡಂಬಡು ನಿನ್ನ ಕೆಯ್ಯನೊಡ್ಡಿ ಬೇಡಿದಪ್ಪೆನೆಂದ ಧೃತರಾಷ್ಟ್ರನ ನುಡಿಗನುಬಲವಾಗಿ ಗಾಂಧಾರಿಯಂತೆಂದಳಚಂll ಕುರುಕುಳನಂದನಂ ಪವನನಂದನನೆಂಬ ಮದಾಂಧಗಂಧಸಿಂ ಧುರಮೆ ಕುತ್ತು ಪಾಯ ಪಡಲಿಟ್ಟಿಲಾದುದು ಪುಣ್ಯದೊಂದು ಪ | ರ್ಮರನುಟಿವಂತ ನೀನುಟಿದೆಯನ್ನಿವರುಮಿಲ್ಲ ಮುತ್ತರುಂ . ಕುರುಡರುಮನ್ನದಮ್ಮ ನುಡಿಗೇಳ್ ಮಗನೇ ಬಗೆ ತಂದೆಗಿಂಬುಕೆಯ್ ll೧೨ ಕರ್ಣರಿಗೆ ಅಸಾಧ್ಯವಾದ ಆ ಅರ್ಜುನನನ್ನು ಕೋಪದಿಂದ ಎದುರಿಸಿ ಯುದ್ದ ಮಾಡುವವರಾರಿದ್ದಾರೆ? ಇನ್ನು ಸಂಧಿಯನ್ನು ಅವರೊಂದಿಗೆ ಮಾಡಿಕೊಳ್ಳೋಣ. ೧೦. ಹಗೆತನಕ್ಕೆ ಒಂದು ಗಣಿಯಿದೆಯೇನು ? ಸ್ನೇಹಕ್ಕೆ ಒಂದು ಮನೆಯಿದೆಯೇನು? ನೀನು ಯೋಚಿಸಪ್ಪ; ರಾಗದ್ವೇಷಗಳೆರಡೂ ಅವರು ಅಂಗೀಕರಿಸುವ ಕಾರ್ಯ ದಿಂದಲ್ಲವೇ ಹುಟ್ಟುವುದು ? ರಾಜರಿಗೆ ವಿಶೇಷ ಸತ್ಯವಾಗಿರುವ ಅರ್ಥಶಾಸ್ತ್ರದಲ್ಲಿ ಹೇಳಿರುವ 'ಕಾರ್ಯವೇ ಸ್ನೇಹದ್ವೇಷಗಳಿಗೆ ಕಾರಣವಾದುದು' ಎಂಬ ಈ ನೀತಿವಾಕ್ಯದಂತೇಕೆ ಮಾಡುವುದಿಲ್ಲ? ೧೧. ಮಗನೆ ನಮಗೆ ನೀನಿದ್ದರೆ ಎಲ್ಲರೂ ಇದ್ದಂತೆಯೇ, ಮಗನೆ ನಮಗೆ ಮನಸ್ಸಿನಲ್ಲಿ ಯಾವ ದುಃಖವೂ ಇಲ್ಲ; ಹೇಗೆಂದರೆ ಹಗಲಿನಲ್ಲಿ ಒಬ್ಬ ಸೂರ್ಯನಿದ್ದರೆ ಸಾಲದೇ ? ಎಷ್ಟೋ ದೀವಿಗೆಗಳು ಉರಿದರೇನು, ಆರಿಹೋದರೇನು? ವl ಹಾಗಲ್ಲದೆಯೂ ಪಾಂಡವರಾದರೆ ಪಾಂಡುರಾಜನಿಗೆ ವಿಧೇಯರಾಗಿದ್ದಂತೆಯೇ ನನ್ನಲ್ಲಿಯೂ ವಿಧೇಯರಾಗಿದ್ದಾರೆ. ನಾನು ಹೇಳಿದುದನ್ನು ಮೀರುವವರಲ್ಲ. ಅವರನ್ನು ನಾನು ಹೇಗೆ ಒಪ್ಪಿಸಿ ನೀನು ಹೇಳಿದುದಕ್ಕೆ ಒಪ್ಪಿಕೊಳ್ಳುವ ಹಾಗೆ ಮಾಡುತ್ತೇನೆ. ಇದಕ್ಕೆ ನೀನು ಪ್ರತಿಯಾಡದೆ ಒಪ್ಪಿಕೊ; ನಿನ್ನನ್ನು ಕೈಯೊಡ್ಡಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ ಧೃತರಾಷ್ಟ್ರನ ಮಾತಿಗೆ ಸಹಾಯಕವಾಗಿ (ಬೆಂಬಲವಾಗಿ) ಗಾಂಧಾರಿ ಹೀಗೆಂದಳು. ೧೨. ಕುರುಕುಲವೆಂಬ ನಂದನವನವು ಭೀಮನೆಂಬ ಮದ್ದಾನೆಯು ಕೋಪದಿಂದ ನುಗ್ಗಲು ಧ್ವಂಸವಾಯಿತು. ನಮ್ಮ ಪುಣ್ಯದಿಂದ ಒಂದು ದೊಡ್ಡ ಮರವು ಉಳಿಯುವ ಹಾಗೆ ನೀನು ಉಳಿದಿದ್ದೀಯೆ. ಇನ್ನು ಯುದ್ದಮಾಡುವವರಾರೂ ಇಲ್ಲ. ಮುದುಕರು ಕುರುಡರು ಎನ್ನದೆ ನಮ್ಮ ಮಾತನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy