SearchBrowseAboutContactDonate
Page Preview
Page 643
Loading...
Download File
Download File
Page Text
________________ ೬೩೮ / ಪಂಪಭಾರತಂ ಕಂ|| ಆನುಂ ದುಶ್ಯಾಸನನುಂ ಕಾನೀನನುಮೊಡನೆ ಪೋಗಿ ಬೀಳೊಂಡು ರಣ | ಸ್ಥಾನಕ್ಕೆ ಪೋದೆವಿಗು ಬಂದಾಂ ನಾದಿವರ ಮೊಗಮಂ ನೋಟಿಂ || ಚಂ|| ಪವನಜನಂತು ಪೂಣ್ಣು ಯುವರಾಜನ ನೆತ್ತರನಾರ್ದು ಪೀರ್ದನಿಂ ತವಗಡದಿಂ ದಿನೇಶಜನನಂಕದ ಗಾಂಡೀವಿ ಕೊಂದನೆಂತು ಪಾಂ | ಡವರನಿದಿರ್ಚಿ ಸಾಧಿಸುವೆ ಸಂಧಿಯನೊಲ್ವುದ ಕಜ್ಜಮೀಗಳೆಂ ಬವರ್ಗಳ ಮಾತುಗೇಳ್ವನಿತನಿನ್ನೆನಗಂ ಬಿದಿ ಮಾಡಿತಾಗದೇ 11 ಆ ವಗ ಎಂಬೆನ್ನಗಮೆಮ್ಮೆ ವಂದ ಪಿತೃದ್ವಂದ್ವ ಚರಣಕ್ಕೆ ವಿನಯವಿನಮಿತೋತ್ತಮಾಂಗ ನಾದನನಿರ್ವರುಂ ಪರಸಿ ತಡವರಿಸಿಯುಂ ತೆಬರಿಸಿಯುಮಂಜಳಪಿಕೊಂಡಮತವರ್ಷಿ ಕರ ಪರಿಷೇಕದಿಂದ ಪುಷ್ಟರ್ಶನಮಾಪ್ಯಾಯನಕೋಟಿಯಾಗೆ ಪುಳಕಿತಗಾತ್ರರುಮಾನಂದ ಬಾಷ್ಪವಾರಿ ಧಾರಾಪರಿಕಲಿತನೇತ್ರರುಮಾಗಿ ಕಳೆದಾನುಂ ಬೇಗಮಿರ್ದಲ್ಲಿ ಕಾರ್ಯವ್ಯಗ್ರ ಪಾಪಿಪಾಶಾಶ್ರಿತರೆಲ್ಲರುಂ ಕೇಳಲೆಂದು ಮಹೀಭುಜನಿಂತೆಂದಂಮಗ ಎನಗಂ ಪಾಂಡುಗಮಿಲ್ಲ ಭೇದಮಳೆಯಂ ಪಚ್ಚಾಶ್ವಮಾ ಪಾಂಡುನಂ ದನರುಂ ಸೈದರೆ ನಿನ್ನೊಳೀ ಕಲಹಮುಂ ನಿನ್ನಿಂದಮಾಯ್ತಂದೊಡಿಂ | ಮುನಿವೆ ಗಂಗೆಯ ಪರ್ಮಗಂಗೆ ಘಟಸಂಭೂತಂಗೆ ಕರ್ಣಂಗಸಾ ಧ್ವನೊಳಾ ಗಾಂಡೀವಿಯೊಳ ಕಟುತ್ತಿದೆವರಾರಿಂ ಮಾಡುವ ಸಂಧಿಯಂ II೯ ೭. ನಾನೂ ದುಶ್ಯಾಸನನೂ ಕರ್ಣನೂ ಜೊತೆಯಲ್ಲಿ ಹೋಗಿ ಅಪ್ಪಣೆ ಪಡೆದು ಯುದ್ಧರಂಗಕ್ಕೆ ಹೋದೆವು. ಈಗ ನಾನು ಇನ್ನೇನೆಂದು ಹೇಳಿ ನಾಚದೆ ಇವರ ಮುಖವನ್ನು ನೋಡಲಿ ? ೮, ಭೀಮನು ಹಾಗೆ ಪ್ರತಿಜ್ಞೆ ಮಾಡಿ ಯುವರಾಜನ ರಕ್ತವನ್ನು ಆರ್ಭಟಮಾಡಿ ಕುಡಿದನು. ಹೀಗೆ ಸಾಹಸದಿಂದ ಕರ್ಣನನ್ನು ಶೂರನಾದ ಅರ್ಜುನನು ಕೊಂದನು. ಪಾಂಡವರನ್ನು ಹೇಗೆ ಎದುರಿಸಿ ಗೆಲ್ಲುತ್ತೀಯೇ? ಈಗ ಸಂಧಿಗೆ ಒಪ್ಪುವುದೇ (ಸರಿಯಾದ) ಕಾರ್ಯವೆಂದು ಹೇಳುವವರ ಮಾತನ್ನು ಕೇಳುವಷ್ಟನ್ನು ಇನ್ನು ನನಗೆ ವಿಧಿ ಮಾಡಿದೆಯಲ್ಲವೇ? ವ|| ಎನ್ನುವಷ್ಟರಲ್ಲಿ ಸಮೀಪಕ್ಕೆ ಬಂದ ತಾಯಿ ತಂದೆಗಳ ಪಾದಕ್ಕೆ ವಿನಯದಿಂದ ತಲೆಬಗ್ಗಿಸಿ ನಮಸ್ಕಾರಮಾಡಿದವನನ್ನು ಇಬ್ಬರೂ ಹರಸಿದರು. ಮೈಯನ್ನು ಮುಟ್ಟಿನೋಡಿಯೂ ಸಮಾಧಾನಮಾಡಿಯೂ ಪ್ರೀತಿಯಿಂದ ಆಲಿಂಗನಮಾಡಿಕೊಂಡರು. ಅಮೃತವನ್ನು ಸುರಿಸುವ ಅಭಿಷೇಕಕ್ಕಿಂತ ಮಗನ ಸ್ಪರ್ಶವು ಹೆಚ್ಚಿನ ಸಂತೋಷವನ್ನುಂಟುಮಾಡಿತು. ರೋಮಾಂಚಿತವಾದ ಶರೀರವುಳ್ಳವರೂ ಸಂತೋಷದ ಕಣ್ಣೀರಿನ ಪ್ರವಾಹದಿಂದ ತುಂಬಿದ ಕಣ್ಣುಳ್ಳವರೂ ಆದರೂ ಸ್ವಲ್ಪ ಕಾಲವಿದ್ದು ಮುಂದಿನ ಕಾರ್ಯದಲ್ಲಿ ಆಸಕ್ತನಾದ ಪಾಪಿ ದುರ್ಯೋಧನನ ಪಾಶಕ್ಕೆ ಒಳಗಾದವರೆಲ್ಲರೂ ಕೇಳಲೆಂದು ಧೃತರಾಷ್ಟ್ರನು ಹೀಗೆಂದನು. ೯. ನನಗೂ ಪಾಂಡುವಿಗೂ ಭೇದವಿಲ್ಲ: ರಾಜ್ಯವನ್ನು ಭಾಗಮಾಡಿಕೊಂಡು ಆಳೋಣ. ಆ ಪಾಂಡುಪುತ್ರರೂ ನಿನ್ನಲ್ಲಿ ಸರಿಯಾಗಿ ನಡೆದುಕೊಳ್ಳುವವರೇ ಆಗಿದ್ದಾರೆ. ಈ ಜಗಳವೂ ನಿನ್ನಿಂದ ಆಯಿತು ಎಂದರೆ ಇನ್ನು ನೀನು ಕೋಪಿಸಿಕೊಳ್ಳುತ್ತೀಯೆ. ಭೀಷ್ಮದ್ರೋಣ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy