SearchBrowseAboutContactDonate
Page Preview
Page 64
Loading...
Download File
Download File
Page Text
________________ ಉಪೋದ್ಘಾತ | ೫೯ wಳದ ತಡಿಯಲ್ಲಿ ದುರ್ಯೋಧನನ ಹೆಜ್ಜೆಯ ಗುರುತನ್ನು ತೋರಿಸಲು ಪಾಂಡವರು ಅಲ್ಲಿಗೆ ಹೋಗಿ ದುರ್ಯೋಧನನನ್ನು ಕೊಳದಿಂದ ಹೊರಗೆ ಹೊರಡಿಸಲು ಮರ್ಮೋದ್ಘಾಟಕವಾಗಿ ಮಾತನಾಡುವರು. “ಎನ್ನ ಸರಂಗಳಲ್ಲದೆ ಈ ಬೂತು ಪೊಮಡುವನಲ್ಲಂ. ಈತಂಗಾನ ಬಲ್ಲೆನ್, ಉಸಿರದಿರಿಂ' ಎಂದು ಸಕಳ ದಿಗ್ವಳಯ ಭರಿತ ಮಹಾಸಿಂಹನಾದದಿಂದ ಗರ್ಜಿಸಿದ ಭೀಮಸೇನನ ಆರ್ಭಟವನ್ನು ಕೇಳಿ ಸೈರಿಸಲಾರದ್ದೆ 'ಕಿಡುಗುಂ ಮಚ್ಚರ್ಯಂ' ಎಂದು ಉದ್ಧತಂ ರೌದ್ರಗದಾದಂಡಮಂ ಪ್ರಚಂಡಮಂ ಆಗಿ ಸೆಜಗಿಲ್ಲದ ಕಲಿತನದಿಂ ಕೂಳದಿಂ ಪೊಣಮಟ್ಟು' ಬರುವನು. ಅವನನ್ನು ನೋಡಿ ಧರ್ಮನಂದನನು ಈಗಲೂ ಭೂಮಿಯನ್ನು ವಿಭಾಗಿಸಿಕೊಂಡು ಸ್ನೇಹದಿಂದಿರೋಣವೆನ್ನುವನು. ಛಲದಂಕಮಲ್ಲನೂ ಅಚಲಿತಮನಸ್ಕನೂ ಆದ ದುರ್ಯೋಧನನಿಗೆ ಇದು ಒಪ್ಪಿಗೆಯಾಗುವುದಿಲ್ಲ. ಒಡನೆಯೇ ರಾಜರಾಜನು ದುಶ್ಯಾಸನನನ್ನು ಕೊಂದ ಭೀಮನು ಇನ್ನೂ ಜೀವದಿಂದಿರುವಾಗ ಸಂಧಿಯೇ? ಯುದ್ಧವನ್ನೆ ಕೈಗೆತ್ತಿಕೊಂಡಿದ್ದೇನೆ' ಎಂದು ಹೇಳುವನು. ಅಷ್ಟರಲ್ಲಿ ತೀರ್ಥಯಾತ್ರೆಯನ್ನು ಮುಗಿಸಿಕೊಂಡು ಅಲ್ಲಿಗೆ ಬಂದ ಬಲದೇವನು ತನಗೆ ನಮಸ್ಕಾರ ಮಾಡಿದ ಕೌರವಚಕ್ರವರ್ತಿಗೆ ಆಶೀರ್ವದಿಸಿ ಅವನನ್ನು ಆ ಸ್ಥಿತಿಗೆ ತಂದ ಮುರಾಂತಕನನ್ನೂ ಪಾಂಡವರನ್ನೂ ನೋಡಿ ಕೋಪಿಸಿಕೊಂಡು ಮಾನವೇರುವಾದ ದುರ್ಯೋಧನನನ್ನು ಕುರಿತು 'ನೀಂ ಮರುಳನಮನೇಕೆ ಮಾಡಿದೆ? ಎಂದು ಕೇಳಲು ಅವನು ಹೀಗೆಂದು ಉತ್ತರ ಕೊಡುವನು ಹರಿಯೆಂದಂದಂ, ಅದಂತೆ, ಪಾಂಡುತನಯ‌ ನಿರ್ದೋಷಿಗಳ್, ತಥಮಿಂ ತು, ರಣಸ್ಥಾನದೊಳ್‌, ಇನ್ನೆರಟ್ಟುಡಿವೆನೆ? ಮದ್ದಂಧುಶೋಕಾಗ್ನಿಯಿಂದೆ. ಉರಿದಪ್ಟೆಂ, ತೊಡರ್ದೆನ್ಸನ್, ಇಂ ಬಿಡು, ವಿರೋಧಿಕ್ಷಾಪರ್, ಎ ಗದಾ ಪರಿಘಾಘಾತದಿಂ, ಅಟ್ಟೆ ತಟ್ಟೆ ಮಡಿದು, ರ್ಇ, ಅಜಾಡದೇಂ ಪೋಪರೇ ? ಎಂತಹ ಮಾತು! ಮಹಾನುಭಾವನಿಗೆ ಮಾತ್ರ ಸಾಧ್ಯ. ಮುಂದೆ ಗದಾಯುದ್ಧವು ಪ್ರಾರಂಭವಾಗುವುದು. ಭೀಮ ದುರ್ಯೋಧನರಿಬ್ಬರೂ ಸಿಡಿಲೆರಗುವಂತೆ ಎರಗಿ ಯುದ್ಧಮಾಡುವರು. ಭೀಮನು ದುರ್ಯೋಧನನ ಗದಾಪ್ರಹಾರದಿಂದ ಅಚೇತನನಾಗಿ ನೆಲಕ್ಕೆ ಬೀಳುವನು. ಆ ಸಮಯದಲ್ಲಿ ಪಾಂಡವ ವಿರೋಧಿಯಾದ ದುರ್ಯೋಧನನು ಭೀಮನನ್ನು ಹೊಡೆದು ಮುಗಿಸಿ ಬಿಡಬಹುದಾಗಿತ್ತು. ಆದರೆ ಪಂಪನ ಕೌರವ ಧರ್ಮಿಷ್ಠ, ಅಧರ್ಮಯುದ್ದದಲ್ಲಿ ಕೈ ಹಾಕಲು ಅವನಿಗೆ ಮನಸ್ಸು ಬಾರದು. ಆದುದರಿಂದ ಅವನು “ಬಿದ್ದಿನನ್ ಇದೆಯೆನ್' ಎಂದು ಪವಮಾನ ಮಾರ್ಗದೊಳ್ ಅಲ್ಪಾಂತರದೊಳ್ ಗದೆಯಂ ಬೀಸಿದನ್', ಗದೆಯ ಗಾಳಿಯಿಂದೆಚೈತ್ರ ಭೀಮನು ಪುನಃ ಗದಾಯುದಕ್ಕೆ ಪ್ರಾರಂಭ ಮಾಡಿ ಕೃಷ್ಣನ ಸೂಚನೆಯ ಪ್ರಕಾರ ಕುರುರಾಜನ ತೊಡೆಗಳೆರಡನ್ನೂ ಒಡೆಯುವನು. ಧಾರ್ತರಾಷ್ಟ್ರನು ಇಳಾತಳದಲ್ಲಿ ಕೆಡೆಯುವನು. “ಭೀಮಸೇನ ಚರಣಪ್ರಹರಣಗಳಿತ ಶೋಣಿತಾದ್ರ್ರಮೌಳಿಯುಮಾಗಿ ಕೋಟಲೆಗೊಳ್ಳುತ್ತಿದ್ದ ಕೌರವೇಶ್ವರನಲ್ಲಿಗೆ ಅಶ್ವತ್ಥಾಮನ್ನು ಬಂದು 'ಎನ್ನ ಬಂಚಿಸಿ ಪೋದುದರೊಳ್ ನಿನಗೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy