SearchBrowseAboutContactDonate
Page Preview
Page 63
Loading...
Download File
Download File
Page Text
________________ ೫೮ ) ಪಂಪಭಾರತಂ ನೆಗಟ್ಟುದು ಬಿಲ್ಲ ಬಿನ್ನಣಂ, ಇಳಾವಳಯಕ್ಕೆ ಸಮಸ್ತ ಧಾತ್ರಿ ಕೆ ಯುಗಿವುದು ನಿಮ್ಮದೊಂದು ಪೆಸರ್ಗಳೊಡ, ನಿಮ್ಮ ಸರಲ್ಲಿ ದೇವರುಂ ಸುಗಿವರ್, ಅಯೋನಿಸಂಭವರಿರ್, ಎನ್ನೆಯ ದೂರ್ಸನ್, ಎನ್ನ ಕರ್ಮದಿಂ ಪಗೆವರಿನ್, ಅಕ್ಕಟಾ ನಿಮಗ, ಈ, ಇರವಾದುದೆ ಕುಂಭಸಂಭವಾ | ಎಂದು ಅವರ ಪರಾಕ್ರಮವನ್ನು ಕೊಂಡಾಡಿ ತನ್ನ ನೈಜವಾದ ಗುರುಭಕ್ತಿಯನ್ನು ಪ್ರದರ್ಶಿಸಿ ಅವರಿಗೆ ನಮಸ್ಕರಿಸುವನು. ಮುಂದೆ 'ವೃಕೋದರನಿಂ ನಿಶ್ಲೇಷಪೀತರುಧಿರನಪ್ಪ ದುಶ್ಯಾಸನನನ್ನು ಕಂಡು 'ಸೋದರನ, ಅಲೊಳ್ ಕಣ್ಣ ನೀರ್ಗಳಂ ಸುರಿದು ನಿನ್ನಂ ಕೊಂದನ ಬಸಿಲಿಂ ನಿನ್ನಂ ತೆಗೆಯದೆಯುಂ, ಅವನ ಕರುಳಂ ಪರ್ದಿ೦ ಮುಂ, ನುಂಗಿಸಿ ನೋಡದೆಯುಂ ಮುನ್ನಮೆ ಯುವರಾಜ ನಿನ್ನನ್, ಆಂ ನೋಡಿದನೇ? ಎಂದು ಮರುಗುವನು. ಮುಂದೆ ವೃಷಸೇನನ ದೇಹವನ್ನು ಕಂಡು ಕರ್ಣನನ್ನೇ ನೆನೆದು ಅವನ ಶರೀರವನ್ನು ಹುಡುಕಿ ಆ ಕಳೇಬರವನ್ನು ನೋಡಿ ಸೈರಿಸಲಾರದೆ ಮೂರ್ಛ ಹೋಗಿ ಪುನಃ ಎಚ್ಚೆತ್ತು ಎದೆದೆರೆದು ದುಃಖಿಸಿ ಮುನ್ನಡೆದು ಶರಶಯ್ಯಾಗತರಾಗಿದ್ದ ಭೀಷರನ್ನು ಕಾಣಲು ಅವರು ದುರ್ಯೋಧನನು ಬಂದ ಬರವಿನಿಂದಲೇ ಸಮರ ವೃತ್ತಾಂತವನ್ನು ತಿಳಿದು ನಿನಗಮೀಯಿರವಾದುದೇ' ಎಂದು ದುಃಖಿಸಿ ನಿನ್ನಗೆಯ್ದ ನಿಯೋಗ ಮಾವುದು ಗೆಯ್ಯಲ್ ಬಗೆದಪೆ ಎನೆ, ಅರಿನ್ಯಪರನ್ನು ತರಿದೊಟ್ಟುವುದಲ್ಲದೆ ಮತ್ತೇನು? ಭವತ್ವದಸರೋಜಮನಾಂ ಬಲಗೊಂಡು ಮತ್ತಮಾಜಿಗೆ ನಡೆಯಲೆ ಬಂದಂ' ಎಂದು ಹೇಳಿದ ದುರ್ಯೊಧನನಳವಿಂಗೆ ಮನಗೊಂಡು ಮಗನೇ ನಿನಗಪ್ರೊಡೆ ದೈವ ಪ್ರತಿಕೂಲಂ, ಮೈತ್ರೇಯರ್ ಕೊಟ್ಟ ಊರುಭಂಗಶಾಪಮನಿವಾರಿತಂ, ಎನ್ನ ಪ್ರಾಣಮುಳ್ಳಂತೆ ಸಂಧಿಯಂ ಮಾಡಿ ವಸುಂಧರೆಯಂ ಕೊಂಡು ಕಾಲಮಂ ಕಜ್ಜಮಂ ಅಳೆದು ಬಲೆಯಂ ನಿನ್ನ ನೆಗದು ನೆಗಲ್ವುದು' ಎಂದು ನುಡಿದ ಪಿತಾಮಹನ ನುಡಿಗಳಿಗೆ ಕುರುರಾಜನ ಉತ್ತರವಿದು ಶರಶಯಾಗ್ರದೊಳಿಂತು ನೀಮಿರೆ, ಘಟಪ್ರೋದ್ಧೂತನಂತಾಗೆ ವಾ ಸರನಾಥಾತ್ಮಜನ್, ಅಂತು ಸಾಯ ರಣದೊಳ್‌, ದುಶ್ಯಾಸನಂ ತದ್ವಕೋ ದರನಿಂದೆ, ಅಂತದ ಸೈರಿಸಿಯುಂ ಸಂಧಾನಮಂ ವೈರಿಭೂ ಪರೆಳಿಂ ಸಂಧಿಸಿ ಪೇಟೆಂ, ಆರ್ಗ ಮೆಳವಂ ಸಂಪತ್ತುಮಂ ಶ್ರೀಯುಮಂ || ಈ ಮಾತನ್ನು ಕೇಳಿ ಭೀಷ್ಕರು ವಿಸ್ಮಿತರಾಗಿ ಅದೊಂದು ದಿವಸ ವೈಶಂಪಾಯನ ಸರೋವರದಲ್ಲಿ ಮುಳುಗಿ ಕಾಲಯಾಪನೆ ಮಾಡುತ್ತಿದ್ದು ಮುಂದೆ ಅವನ ಸಹಾಯಕ್ಕೆ ಕಾದಿ ಗೆಲ್ಲತಕ್ಕದ್ದು ಎಂದು ಹಿತೋಪದೇಶ ಮಾಡಿ ಜಳಮಂತ್ರೋಪದೇಶಮಾಡಲು ಅವರ ಮಾತನ್ನು ಮೀರಲಾರದೆ ಬಹಳ ಕಷ್ಟದಿಂದ ಸರೋವರದಲ್ಲಿ ಹೋಗಿ ಮುಳುಗಿಕೊಳ್ಳುವನು. ವ್ಯಾಸಭಾರತದ ದುರ್ಯೋಧನನಿಗೂ ಪಂಪನ ದುರ್ಯೋಧನನಿಗೂ ಎಷ್ಟು ಅಂತರ! ಇಷ್ಟರಲ್ಲಿ ಭೀಮನು ದುರ್ಯೋಧನನನ್ನು ಅರಸುತ್ತಾ ಬರುವನು. ಕಿರಾತರು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy