________________
ದ್ವಾದಶಾಶ್ವಾಸಂ | ೬೩೧ ಬೆಳಗುವ ಕೊಡರ್ಗಳ ಬೆಳಗ ಗಳಿಸುವವೋಲ್ ಪೋಪ ಪೊಕ್ಕಳೊಳ್ ತೇಜಂ ಪ | ಇಳಿ; ತಟತಟಿಸಿ ತೋಳ ತೋಳ
ತೋಳಗಿದನಸಮಯ ಸಮಯದೋಳ್ ದಿನಪಸುತಂ | ೨೧೦ ವ|| ಅಂತು ಕರ್ಣ ನಿಶಿತ ವಿಕರ್ಣಹತಿಯಿಂದಮಸುರಾಂತಕಂ ಕಟಿಯ ನೊಂದುಕಂ ಕಸೆಯಂ ಬಿಟ್ಟುಜದಭಿಮಂ
ತ್ರಿಸಿ ಚಕ್ರಮನಸುರವೈರಿಯಿಡುವಾಗಳ್ ಬಾ | ರಿಸಿ ಪಂತು ಗೊಣೆಯದಿಂದೇ ಆಸಿ ಬಿಲ್ಲಂ ತ್ರಿಭುವನಂಗಳಳ್ಳಾಡುವಿನಂ ||
೨X ವ|| ಮುನ್ನಮಿಂದ್ರಕೀಲನಗೇಂದ್ರದೋಳ್ ಪಶುಪತಿಯನಾರಾಧಿಸಿ ಪಾಶುಪತಾಸ್ತಂ ಬದಂದು ತೆಲ್ಲಟಿಯೆಂದು ಚಂ|| ಗಿರಿಜೆಯ ಮೆಟ್ಟಿ ಕೊಟ್ಟ ನಿಶಿತಾಸ್ತಮನಂಜಲಿಕಾಸ್ತಮಂ ಭಯಂ
ಕರತರಮಾಗೆ ಕೊಂಡು ವಿಧಿಯಿಂದಭಿಮಂತ್ರಿಸಿ ಪೂಡೆ ಬಿಲ್ಗೊಳು | ರ್ವರೆ ನಡುಗಿತ್ತಜಾಂಡಮೊಡೆದತ್ತು ತೆಲಂ ಪಿಡುಗಿತ್ತು ಸಪ್ತಸಾ |
ಗರಮುಡುಗಿತ್ತು ಸಾಹಸಮಂ ಪಿರಿದೋ ಕದನತ್ರಿಣೇತ್ರನಾ || ೨೧೨ ನಿಲ್ಲಿಸಬೇಕೆಂದೇ ಕೃಷ್ಣನ ಎದೆಯನ್ನು ಸೀಳಿಹೋಗುವ ಹಾಗೆ ಹೊಡೆದು ಕೋಪವು ಅಧಿಕವಾಗುತ್ತಿರಲು ಅರ್ಜುನನ ಬಿಲ್ಲಿನ ಹೆದೆಯನ್ನು ಕತ್ತರಿಸಿದನು. ೨೧೦. ಪ್ರಕಾಶಮಾನವಾದ ದೀಪಗಳ ಕಾಂತಿಯು ಆರಿಹೋಗುವ ಕಾಲದಲ್ಲಿ ಹೆಚ್ಚಾಗಿ ಜ್ವಲಿಸುವ ಹಾಗೆ ಸೂರ್ಯಪುತ್ರನಾದ ಕರ್ಣನು ಮುಳುಗುವ (ಸಾಯುವ) ಕಾಲದಲ್ಲಿ ತೇಜಸ್ಸು ಪ್ರಜ್ವಲಿಸಲು ತಳತಳನೆ ಪ್ರಕಾಶಿಸಿದನು. ವ|| ಹಾಗೆ ಕರ್ಣನ ಹರಿತವಾದ ಬಾಣದ ಪೆಟ್ಟಿನಿಂದ ಕೃಷ್ಣನು ಸಾಯುವಷ್ಟು ನೊಂದು ೨೧೧. ಚಾವುಟಿಯನ್ನೆಸೆದು ಚಕ್ರಾಯುಧವನ್ನಭಿಮಂತ್ರಿಸಿ ಕೃಷ್ಣನು ಎಸೆಯುವಾಗ ಅರ್ಜುನನು ಅದನ್ನು ತಡೆದು ಬೇರೊಂದು ಹೆದೆಯಿಂದ ಬಿಲ್ಲನ್ನು ಕಟ್ಟಿ ಮೂರುಲೋಕಗಳು ನಡುಗುವ ಹಾಗೆ ವ|| ಮೊದಲು ಇಂದ್ರಕೀಲಪರ್ವತದಲ್ಲಿ ಈಶ್ವರನನ್ನು ಪೂಜಿಸಿ ಪಾಶುಪತಾಸ್ತ್ರವನ್ನು ಪಡೆದ ದಿನ ಬಳುವಳಿಯೆಂದು ೨೧೨. ಪಾರ್ವತಿಯು ಪ್ರೀತಿಯಿಂದ ಕೊಟ್ಟ ಪರಿತವಾದ ಅಂಜಲಿಕಾಸ್ತವನ್ನು ಭಯವುಂಟಾಗುವ ಹಾಗೆ ಕೈಗೆ ತೆಗೆದುಕೊಂಡು ಶಾಸ್ತರೀತಿಯಿಂದ ಅಭಿಮಂತ್ರಣ ಮಾಡಿ (ಮಂತ್ರಾಧಿ ದೇವತೆಯನ್ನು ಆಹ್ವಾನಿಸಿ) ಬಿಲ್ಲಿನಲ್ಲಿ ಹೂಡಲು ಭೂಮಿಯು ಕಂಪಿಸಿತು, ಬ್ರಹ್ಮಾಂಡವು ಒಡೆಯಿತು, ನೆಲವು ಸಂಕೋಚವಾಯಿತು, ಏಳು ಸಮುದ್ರಗಳು ಬತ್ತಿಹೋದುವು. ಕದನತ್ರಿಣೇತ್ರನಾದ ಅರ್ಜುನನ ಸಾಹಸವು ಅತಿಮಹತ್ತರ ವಾದುದು. ವ|| ಆಗ ಸಮಸ್ತಲೋಕವೆಂಬ ಮನೆಯನ್ನು ನಾಶಮಾಡುವ ಅಂಜಲಿಕಾಸ್ತವನ್ನು ಅಮೋಘಾಸ್ತ್ರ ಧನಂಜಯನಾದ ಅರ್ಜುನನು ಕರ್ಣನನ್ನು ಕೊಲ್ಲಲು ಯೋಚಿಸಿ ಕಿವಿಯವರೆಗೂ ಸೆಳೆದು ಕತ್ತಿನ ಸಂದಿಯನ್ನು ನಿರೀಕ್ಷಿಸಿ