SearchBrowseAboutContactDonate
Page Preview
Page 635
Loading...
Download File
Download File
Page Text
________________ ೬೩೦ | ಪಂಪಭಾರತಂ ಮಗ ಬಲುವು ಸಾರಥಿಯಿಲ್ಲ ಮೆಯ್ಕೆ ಮಣಿಯುಂ ತಾನಿಲ್ಲದಂತೀಗಳಾ ನಿಜವೆಂ ನೋಡಿರೆ ಮತ್ತಮೊಂದನಿಸಲುಂ ಕೆಯ್ಯೋದೇಕೆಂದುಮಾ | ನಟಿಯೆಂ ಕೂರ್ಮಯೆ ಮಿಕ್ಕು ಬಂದಪುದಿದರ್ಕೆಗಯ್ಯನೇನೆಂಬೆನಾಂ | ಮದೆಂ ಮುನ್ನಿನದೊಂದು ವೈರಮನಿದಿಂತ್ಕಾರಣಂ ಭೂಧರಾ 11 ೨೦೭ ವll ಎಂಬುದುಮನಿತಳೆಯದಿರ್ದೊಡು ಸೋದರಿಕೆಯೆ ಮಿಕ್ಕು ಬರ್ಕುಮಾಗದೆಯೆಂದು ತನ್ನಂತರ್ಗತದೊಳ್ ಬಗೆದಸುರಾಂತಕನಿಂತೆಂದಂಚಂ|| ನೆಗಟ್ಟಿಭಿಮನ್ಯುವಂ ಚಲದಿನಂದಿಳದಿಂದು ನಿಜಾಗ್ರಜಾತನಂ ಸುಗಿವಿನಮೆಚ್ಚು ಬೀರದೊಳೆ ಬೀಗುವ ಸೂತಸುತಂಗೆ ನೀನುಮಾ || ಜಿಗೆ ಸೆಡೆದಿರ್ದಯಿಡಿರು ಚಕ್ರವಿಘಾತದಿನಿಕ್ಕಿ ಬೀರಮು ರ್ವಿಗೆ ಪಡಿಚಂದಮಾಗೆ ತಳೆದೊಟ್ಟಿ ಜಯಾಂಗನೆಗಾಣನಾದಪಂ || ೨೦೮ ವ|| ಎಂಬನ್ನೆಗಂ ಧರಾತಳಮಳ ರಥದ ಗಾಲಿಯಂ ಕಿಟ್ಟು ಮತ್ತು ರಥವನಪ್ರತಿರಥ ನೇ ನಿಟ್ಟಾಲಿಯಾಗೆ ಮುಟ್ಟೆವಂದು ಕಿಡಿಗುಟ್ಟೆ ಮರ್ಮೋದ್ಘಾಟನಂಗೆಯ್ದು ಕಾದುವಾಗಳ್ ಕಪಿಧ್ವಜಂ ವನದಂತಿಯಂತೆ ಧ್ವಾಂಕ್ಷಧ್ವಜಮನುಡಿದು ಕೆಡವಿನಮೆಚ್ಚಾಗಳಕoll ಪಲಯಿಗೆ ಬಿಟಿಡೆ ಬೀರದ ಪಲವಿಗೆಯಂ ನಿಲಿಸಲೆಂದೆ ಹರಿ ವಕ್ಷಮನ ಅಟೆವೊಗೆಯಚ್ಚು ಮುಳಿಸವ | ಗಟೆಯಿಸುತಿರೆ ನರನ ಬಿಲ್ಲ ಗೊಣೆಯುಮನೆಚ್ಚಂ 11 : ೨೦೯ ಮಾತಿಗೆ ಅಸಹ್ಯಪಟ್ಟು ಅರ್ಜುನನು ಹೀಗೆ ಹೇಳಿದನು-೨೦೭. ಬರಿದಾದವನು (ನಿಸ್ಸಹಾಯಕನು), ಸಾರಥಿಯೂ ಇಲ್ಲ: ಶರೀರಕ್ಕೆ ಮರೆಯಾದ ಕವಚವೂ ಇಲ್ಲ: ಅದು ಹೇಗೆ ಈಗ ನಾನು ಹೊಡೆಯಲಿ; ಪುನಃ ಒಂದು ಬಾಣವನ್ನು ಹೊಡೆಯುವುದಕ್ಕೂ ಕೈಗಳು ಏಳುವುದಿಲ್ಲ: ಏತಕ್ಕೆಂದು ನಾನು ತಿಳಿಯಲಾರೆ; ಪ್ರೀತಿಯ ಮೀರಿ ಬರುತ್ತಿದೆ. ಇದಕ್ಕೆ ಏನು ಮಾಡಲಿ, ಏನೆಂದು ಹೇಳಲಿ; ನಾನು ಹಿಂದಿನ ದ್ವೇಷವನ್ನು ಮರೆತೆನು; ಕೃಷ್ಣಾ ಇದಕ್ಕೇನು ಕಾರಣ? ವli ಎನ್ನಲು ವಾಸ್ತವಾಂಶವು ತಿಳಿಯದಿದ್ದರೂ ಭ್ರಾತೃಭಾವವೇ ಮೀರಿ ಬರುತ್ತದೆಯಲ್ಲವೇ ಎಂದು ತನ್ನ ಮನಸ್ಸಿನಲ್ಲಿ ತಿಳಿದು ಕೃಷ್ಣನು ಹೀಗೆ ಹೇಳಿದನು-೨೦೮. ಅಂದು ಪ್ರಸಿದ್ಧನಾದ ಅಭಿಮನ್ಯುವನ್ನು ಹಟದಿಂದ ಕತ್ತರಿಸಿ ಇಂದು ನಿಮ್ಮಣ್ಣನಾದ ಧರ್ಮರಾಯನನ್ನು ಹೆದರುವಂತೆ ಹೊಡೆದು ವೀರ್ಯದಿಂದ ಅಹಂಕಾರಪಡುವ ಸೂತನ ಮಗನಿಗೆ ನೀನು ಯುದ್ದದಲ್ಲಿ ಹೆದರು ವುದಾದರೆ ಇರು ನಾನೇ ಚಕ್ರಾಯುಧದ ಪೆಟ್ಟಿನಿಂದ ಹೊಡೆದು ಪರಾಕ್ರಮವು ಲೋಕಕ್ಕೆ ಮಾದರಿಯಾಗುವ ಹಾಗೆ ಕತ್ತರಿಸಿ ರಾಶಿ ಮಾಡಿ ಜಯಲಕ್ಷ್ಮಿಗೆ ಒಡೆಯನಾಗುತ್ತೇನೆ. ವ|| ಎನ್ನುವಷ್ಟರಲ್ಲಿ ಭೂಮಿಯು ನಡುಗುವ ಹಾಗೆ ತೇರಿನ ಚಕ್ರವನ್ನು ಕಿತ್ತು ಪುನಃ ಪ್ರತಿರಥನಿಲ್ಲದ ಕರ್ಣನು ರಥವನ್ನು ಹತ್ತಿ ದೀರ್ಘದೃಷ್ಟಿಯಿಂದ ಸಮೀಪಕ್ಕೆ ಬಂದು ಕಿಡಿಗಳನ್ನು ಸುರಿಸಿ ಮರ್ಮಭೇದಕವಾದ ಮಾತುಗಳನ್ನಾಡಿ ಯುದ್ಧಮಾಡುವಾಗ ಕಪಿಧ್ವಜನಾದ ಅರ್ಜುನನು ಕಾಡಾನೆಯಂತೆ ಕಾಗೆಯ ಬಾವುಟವನ್ನು ಕತ್ತರಿಸಿ ಕೆಡೆಯುವ ಹಾಗೆ ಹೊಡೆದನು. ೨೦೯. ಬಾವುಟವು ಬೀಳಲು ಶೌರ್ಯದ ಧ್ವಜವನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy