SearchBrowseAboutContactDonate
Page Preview
Page 623
Loading...
Download File
Download File
Page Text
________________ ೧೬೩ ೬೧೮ ) ಪಂಪಭಾರತಂ ಕull ಇವನ ಶರಕಲ್ಪವನದ ಟಿವನಳನಿವನು ನಿನಗಮಗ್ಗಳಮಿವನಂ | ಪವನಸುತಂ ಗೆಲ್ಲಂ ನೀ ನಿವನೊಳ್ ಪೊಣರೆಂದೂಡವನೊಳರಿಗಂ ಪೊಣರ್ದ೦ || ಪೊಣರ್ದೊಡಮನುವರಮಿವನೊಲ್ ತೊಣವಪುದೆನಗೆ ನರನೊಳಂದಳಿಕೆಯ ಕೂ | ರ್ಗಣೆಗಳೊಳೆ ಪೂಟ್ಟು ತನ್ನಳ ವಣಿಯರಮನೆ ನಾಲ್ಕು ಶರದ ಪಾರ್ಥನನೆಚ್ಚಂ || ಇಸೆ ಮುತ್ತಿ ಮುಸು ಪರಿ ಬಂ ಧಿಸಿದುವು ನರರಥತುರಂಗಮಂಗಳನಂತಾ | ರ್ದಸಗಲ್ ಪೊಣರಲ್ ಮಿಡುಕಲ್ ಮಿಸುಕಲ್ಯಣಮೀಯದಾದುವವನ ಸರಳ | - ವ|| ಆಗಳದಂ ಕಂಡು ಪರಸೈನ್ಯಭೈರವಂ ಮುಕುಂದನನಿಂತೆಂದಂಕ೦ll ಸ್ಕಂದನಬಂಧನವೆಂಬುದ ನಿಂದೀ ವೃಷಸೇನನಿಂದಮದನಿದಂ ಮು | ನೋಂದುಂ ಕಂಡಳಿಯನಿದ ರ್ಕಾ೦ ದಲ್ ಬೆಂಗಾದನೆನಗೆ ಬೆಸಸು ಮುಕುಂದಾ|| , ೧೬೬ ಕಡಮೆಮಾಡದೆ ಬಂದು ತಾಗಿದನು. ನಕುಲಸಹದೇವರು ಬಂದು ಅವನನ್ನು ಅಡ್ಡಗಟ್ಟಿದರು. ಇವರೂ ನಮ್ಮಲ್ಲಿ ಯುದ್ಧಮಾಡುತ್ತಾರೆಯೇ ಎಂದು ಅವರ ತೇರುಗಳನ್ನು ಅಚ್ಚು. ಮುರಿದುಹೋಗುವ ಹಾಗೆ ಹೊಡೆದು ತಡಮಾಡದೆ ಭೀಮನ ಹತ್ತಿರಕ್ಕೆ ಬಂದು ವಿಜೃಂಭಿಸಿದನು. ಆಗ ಕೃಷ್ಣನು ಅರ್ಜುನನಿಗೆ ಹೇಳಿದನು. ೧೬೩. ಇವನ ಬಾಣವಿದ್ಯೆ, ಇವನ ಪರಾಕ್ರಮ, ಇವನ ಪೌರುಷ, ಇವನ ಶಕ್ತಿ ಇವು ನಿನಗಿಂತಲೂ ಹೆಚ್ಚಿನವು. ಇವನನ್ನು ಭೀಮನು ಗೆಲ್ಲಲಾರ. ನೀನು ಇವನಲ್ಲಿ ಯುದ್ಧಮಾಡು ಎನ್ನಲು ಅರಿಗನು ಅವನಲ್ಲಿ ಕಾಧಿದನು. ೧೬೪. ವೃಷಸೇನನು ಇವನೊಡನೆ ಕಾದಿದರೆ ನನಗೆ ಯುದ್ಧವು ಅನುರೂಪವಾಗುತ್ತದೆ (ಸರಿಸಮಾನವಾಗುತ್ತದೆ) ಎಂದು ಹೇಳಿ ಪ್ರಸಿದ್ಧವೂ ಹರಿತವೂ ಆದ ಬಾಣಗಳಿಂದಲೇ ಹೂಳಿ ತನ್ನ ಶಕ್ತಿಯು ಅತಿಶಯವಾದುದು ಎನ್ನುವ ಹಾಗೆ ನಾಲ್ಕುಬಾಣಗಳಿಂದ ಅರ್ಜುನನನ್ನು ಹೊಡೆದನು. ೧೬೫. ಆ ಬಾಣಗಳು ಅರ್ಜುನನ ತೇರು ಕುದುರೆಗಳನ್ನು ಮುತ್ತಿ ಆವರಿಸಿಕೊಂಡು ಕಟ್ಟಿ ಹಾಕಿದುವು. ಹಾಗೆಯೇ ಆ ಬಾಣಗಳು ಆರ್ಭಟಿಸಿ ಕಾರ್ಯಮಾಡುವುದಕ್ಕೂ ರಥವನ್ನು ನಡೆಸುವುದಕ್ಕೂ ಜಗಳವಾಡುವುದಕ್ಕೂ ಅಳ್ಳಾಡುವುದಕ್ಕೂ (ಚಲಿಸುವುದಕ್ಕೂ ಸ್ವಲ್ಪವೂ ಅವಕಾಶ ಕೊಡದಂತಹುವಾದುವು. ವ!! ಅದನ್ನು ನೋಡಿ ಪರಸೈನ್ಯಭೈರವನಾದ ಅರ್ಜುನನು ಕೃಷ್ಣನಿಗೆ ಹೀಗೆ ಹೇಳಿದನು. ೧೬೬. ತೇರನ್ನು ಕಟ್ಟಿಹಾಕುವುದೆಂಬುದನ್ನು ಈ ದಿನ ವೃಷಸೇನನಿಂದ ತಿಳಿದೆನು. ಇದಕ್ಕೆ ಮೊದಲು ಎಂದೂ ತಿಳಿದಿರಲಿಲ್ಲ. ಇದಕ್ಕೆ ನಾನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy