SearchBrowseAboutContactDonate
Page Preview
Page 622
Loading...
Download File
Download File
Page Text
________________ ದ್ವಾದಶಾಶ್ವಾಸಂ | ೬೧೭ ಮll ಮುನಿಸಂ ಮಾಡಿದರಾತಿನಾಥರಡಗಂ ಸುಪ್ಪಕ್ಕೆ ಕೆನ್ನೆತ್ತರಂ ಕೆನೆಗೊಂಡಾಜೆದ ಪಾಲ್ ದೊಂಡೆಗರುಳು ಕರ್ಬಿಂಗೆ ಲೆಕ್ಕಕ್ಕೆ ತಂ | ದಿನಿಸುಂ ಮಾಣದೆ ಪೀರ್ದು ಪೀರ್ದು ನೊಣದಂತೀ ಮಾಣಿಯಿಂ ಭೀಮಸೇ ನನವೋಲ್ ಪೂಣ್ಣುದನೆಯ ಪೂಣ್ಣ ಪಗೆಯಂ ಕೊಂಡಾಡದ ಗಂಡನೇ 11 . ೧೬೦ ವಗ ಎಂದು ಜರಾಸಂಧಾರಿಯ ಗಂಡವಾತಂ ಕೊಂಡಾಡುತ್ತಿದೆ ಭೀಮಸೇನನಾ ನೆರೆದ ನೆರವಿಗಿಂತೆಂದಂಉll ಪೊಲ್ಲದು ಪೂಣ್ಣು ಪುಚ್ಚಟೆಯದುರ್ಕಿದ ಕೌರವರಂ ಪೊರಳ್ಳಿ ಕೊಂ ದಿಲ್ಲಿಯೆ ವೈರಿ ಶೋಣಿತಮನೀಂಟಿ ತದಂತ್ರದೆ ಕೃಷೆಗಿಂದು ಧ || ಮಿಲವನಿಂಬಿನಿಂ ಮುಡಿಸಿ ಕೌರವ ನಾಯಕನೂರುಭಂಗಮೋಂ ದಲ್ಲದುದೆಲ್ಲಮಂ ನೆಬಿಪಿದೆಂ ಗಡಮೋಳಿಯ ಕೇಳಿಮಲ್ಲರುಂ || ೧೬೧ ವ|| ಎಂದು ನುಡಿದು ಗಜ ಗರ್ಜಿಸಿ ಕಾಲದಂಡಮಂ ಪೋಲ್ವ ತನ್ನ ಗದಾದಂಡಮಂ ಕೊಂಡು ತಿರಿಪಿ ಬೀಸುತ್ತುಂ ಬರ್ಪ ಭೀಮಸೇನನಂ ಕರ್ಣನ ಮಗಂ ವೃಷಸೇನಂ ಕಂಡು~ ಚಂil ದಡಿಗನ ಮಿಬ್ರುವಂ ಮಿದಿದೊಡಲ್ಲದೆ ಮಾಣೆನಮೊಘಮೆಂದು ಕೂ ರ್ಪುಡುಗದೆ ಬಂದು ತಾಗೆ ಯಮಳರ್ ತಡೆಗೊಂಡೊಡ ತಾವುಮಮ್ರಳಂ ತೊಡರ್ದಪರೆಂದವಂದಿರ ರಥಂಗಳನಚುಡಿಯಚ್ಚು ಭೀಮನಂ ತಡೆಯದೆ ಮುಟ್ಟಿ ಪರ್ಚೆ ನುಡಿದಂ ಕಪಿಕೇತನನಂ ಮುರಾಂತಕಂ ||೧೬೨ ಕೋಪದಿಂದ ಎಲುಬನ್ನೂ ತೇದು ಕುಡಿಯಬಹುದಾಗಿತ್ತು. ಆದರೆ ಶತ್ರುವಿನ ರಕ್ತವೆಂಬ ತಿಳಿನೀರನ್ನೇ ಕುಡಿದು ತೃಪ್ತನಾಗಿದ್ದಾನೆ. ಭೀಮನು ಯಾವರೀತಿಯಿಂದಲೂ ದೋಷಿಯಲ್ಲ. ೧೬೦. ಕೋಪವನ್ನುಂಟುಮಾಡಿದ ಶತ್ರುರಾಜರ ಮಾಂಸವನ್ನು ಉಪ್ಪುಹಾಕಿದ ಭಕ್ಷವಿಶೇಷಕ್ಕೂ ಕೆಂಪುರಕ್ತವನ್ನು ಕೆನೆಗಟ್ಟಿ ಆರಿದ ಹಾಲಿಗೂ ದೊಂಡೆಗರುಳನ್ನು ಕಬ್ಬಿನ ಗಣನೆಗೂ ಸಮನಾಗಿ ಭಾವಿಸಿ ಸ್ವಲ್ಪವನ್ನೂ ಬಿಡದೆ ಕುಡಿದು ಚಪ್ಪರಿಸಿದ ಈ ಭೀಮಸೇನನ ಹಾಗೆ ಪ್ರತಿಜ್ಞೆ ಮಾಡಿದುದನ್ನು ಪೂರ್ಣಮಾಡಿದ ಶತ್ರುವನ್ನು ಹೊಗಳದಿರುವವನು ಶೂರನೇ? ವll ಎಂದು ಭೀಮನ ಪೌರುಷದ ಮಾತನ್ನು ಕೊಂಡಾಡುತ್ತಿರಲು ಭೀಮಸೇನನು ಅಲ್ಲಿ ನೆರೆದಿದ್ದ ಗುಂಪಿಗೆ ಹೀಗೆಂದನು-೧೬೧. ಕೆಟ್ಟ ಪ್ರತಿಜ್ಞೆಯನ್ನು ಮಾಡಿ ಅದು ವ್ಯರ್ಥವಾಗದಂತೆ ಗರ್ವಿಷ್ಠರಾದ ಕೌರವರನ್ನು ಹೊರಳಿಸಿ ಕೊಂದು ಇಲ್ಲಿಯ ವೈರಿಯ ರಕ್ತವನ್ನು ಕುಡಿದು ಅವನ ಕರುಳಿನಿಂದ ದೌಪದಿಗೆ ತುರುಬನ್ನು ಮನೋಹರವಾಗಿರುವಂತೆ ಮುಡಿಸಿ ಕೌರವನಾಯಕನಾದ ದುರ್ಯೋಧನನ ತೊಡೆಯನ್ನು ಮುರಿಯುವುದೊಂದನ್ನುಳಿದು ಮತ್ತೆಲ್ಲವನ್ನೂ ಕ್ರಮವಾಗಿ ಪೂರ್ಣಮಾಡಿದೆನಲ್ಲವೇ ಎಲ್ಲರೂ ಕೇಳಿ! ವ|| ಎಂದು ಹೇಳಿ ಆರ್ಭಟಮಾಡಿ ಯಮನ ದಂಡವನ್ನು ಹೋಲುವ ತನ್ನ ಗದಾದಂಡವನ್ನು ತೆಗೆದುಕೊಂಡು ತಿರುಗಿಸುತ್ತ ಬರುತ್ತಿರುವ ಭೀಮಸೇನನನ್ನು ಕರ್ಣನ ಮಗನಾದ ವೃಷಸೇನನು ನೋಡಿದನು. ೧೬೨. 'ದಾಂಡಿಗನಾದ ಭೀಮನೆಂಬ ಈ ಮೃತ್ಯುವನ್ನು 'ತುಳಿದುದಲ್ಲದೆ ಬಿಡುವುದಿಲ್ಲ' ಎಂದು ವೃಷಸೇನನು ತನ್ನ ಕ್ರೌರ್ಯವನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy