SearchBrowseAboutContactDonate
Page Preview
Page 601
Loading...
Download File
Download File
Page Text
________________ ೫೯೬ | ಪಂಪಭಾರತಂ ವ|| ಎಂದು ಕುರುಕುಲಚೂಡಾಮಣಿ ಶಲ್ಯನ ಹೃಚ್ಛಲಮೆಲ್ಲಮುಂ ಕಲೆ ನುಡಿದೊಡಾತ ನಿಂತೆಂದಂ ಚoll ಅತಿಯದೆಯುಂ ವಿಚಾರಿಸದೆಯುಂ ನೃಪ ನೀಂ ನೆಗಟ್ಟನ್ನೆಯಲ್ಲಿಯಾ ನಟಿವೆನದಂತೆ ಕರ್ಣನಣೆಗಂ ತೊಣೆಗಂ ನೃಪರಾರುಮಿಲ್ಲ ಚ | ಳ್ಳು ರಿಪುಸೇನ ತೇರನೂಸದಾನೆಸಗುತ್ತಿರೆ ಕರ್ಣನಂ ಗೆಲಲ್ | ನೆವರೆ ನಾಳೆ ಫಲ್ಗುಣನುಮಚ್ಯುತನುಂ ರಣರಂಗಭೂಮಿಯೊಳ್ || ೧೦೦ ಕ೦ll ಒಂದೆ ಗಡ ಹರಿಯ ಪೇಲೊಂ ದಂದದೆ ನರನೆಸಗುವಂತ ಕರ್ಣನುಮನ್ನಂ | ದೊಂದೂಜೆಯೋಳೆಸರದೊಡಾಂ ಸ್ಕಂದನದಿಂದಿಳಿದು ಪೋಪೆನಸಗಂ ತೇರಂ || - DOD ೧೦೧ ಎಂಬುದುಮಂಗಮಹೀಪತಿ ಯಂ ಬರಿಸಿ ಮಹಾಜಿಯಲ್ಲಿ ಮಾವು ತಾನೇ | ನೆಂಬನದನಂತ ಮೀಜದೂ ಡಂಬಡು ನೀನೆಂದು ಭೂಭುಜಂ ಪ್ರಾರ್ಥಿಸಿದಂ | ೧೦೨ ವ|| ಅಂತಿರ್ವರುಮನೊರ್ವರೊರ್ವರೊಳೊಡಂಬಡಿಸಿ ತನ್ನೊಡನೆಟ್ಟು ನಿಂದಿರ್ದ ಮದ್ರರಾಜನನಿರಟ್ಟು ಕರ್ಣನುಂ ತಾನುಂ ನಿಜನಿವಾಸಂಗಕ್ಕೆ ಪೋದರಾಗಳಾ ಪಡೆಮಾತನಜಾತಶತ್ರು ಕೇಳು ಮುರಾಂತಕಂಗೆ ಬಲಿಯನಟ್ಟಿ ಬರಿಸಿ ಕೊಟ್ಟಿದ್ದೇ ಹೇಳುತ್ತದೆ. ವ|| ಎಂದು ಕುರುಕುಲಚೂಡಾಮಣಿಯಾದ ದುರ್ಯೊಧನನು ಶಲ್ಯನ ಹೃದಯದ ನೋವೆಲ್ಲವೂ ಸಡಿಲವಾಗುವಂತೆ ಹೇಳಲು ಅವನು ಹೀಗೆಂದನು. ೧೦೦. ರಾಜನೇ ನೀನು ತಿಳಿಯದೆಯೂ ವಿಚಾರಮಾಡದೆಯೂ ಕಾರ್ಯ ಮಾಡುವಂಥವನಲ್ಲ, ಅದನ್ನು ನಾನು ಬಲ್ಲೆ.ಕರ್ಣನಿಗೆ ಸಮಾನರಾದ ರಾಜರಾರೂ ಇಲ್ಲ. ಶತ್ರುಸೈನ್ಯಕ್ಕೆ ಭಯವಾಗುವ ರೀತಿಯಲ್ಲಿ ನಾನು ಪ್ರೀತಿಯಿಂದ (ಮನಃಪೂರ್ವಕವಾಗಿ) ತೇರನ್ನು ನಡೆಸುತ್ತಿದ್ದರೆ ನಾಳೆ ಕೃಷ್ಣನೂ ಅರ್ಜುನನೂ ಯುದ್ಧಭೂಮಿಯಲ್ಲಿ ಕರ್ಣನನ್ನು ಗೆಲ್ಲಲು ಸಮರ್ಥರಾಗುತ್ತಾರೆಯೇ? ೧೦೧. ಆದರೆ ಒಂದು ವಿಷಯ, ಕೃಷ್ಣನು ಹೇಳಿದ ರೀತಿಯಲ್ಲಿ ಅರ್ಜುನನು ಮಾಡುವಂತೆ ಕರ್ಣನೂ ನಾನು ಹೇಳಿದ ಕ್ರಮದಲ್ಲಿ ಮಾಡದೇ ಹೋದರೆ ತೇರನ್ನು ಇಳಿದು ಹೋಗುತ್ತೇನೆ. ತೇರನ್ನು ನಡೆಸುವುದಿಲ್ಲ. ೧೦೨. ಎನ್ನಲು ಕರ್ಣನನ್ನು ಬರಮಾಡಿ ಈ ಮಹಾಯುದ್ದದಲ್ಲಿ ಮಾವನು ತಾನೇನು ಹೇಳುತ್ತಾನೆಯೋ ನೀನು ಅದನ್ನು ಹಾಗೆಯೇ ಮೀರದೆ ಒಪ್ಪಿಕೊ ಎಂದು ಮಹಾರಾಜನು ಪ್ರಾರ್ಥಿಸಿದನು. ವನ ಹಾಗೆ ಇಬ್ಬರನ್ನೂ ಒಬ್ಬರನ್ನೊಬ್ಬರು ಒಪ್ಪುವ ಹಾಗೆ ಮಾಡಿ ತನ್ನೊಡನೆ ಎದ್ದು ನಿಂತಿದ್ದ ಶಲ್ಯನನ್ನು ಅಲ್ಲಿಯೇ ಇರಲು ಹೇಳಿ ಕರ್ಣನೂ ತಾನೂ ತಮ್ಮ ಮನೆಗಳಿಗೆ ಹೋದರು. ಈ ಸಮಾಚಾರವನ್ನು ಧರ್ಮರಾಯನು ಕೇಳಿ ಕೃಷ್ಣನಲ್ಲಿಗೆ ದೂತರನ್ನು ಕಳುಹಿಸಿ ಬರಮಾಡಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy