SearchBrowseAboutContactDonate
Page Preview
Page 600
Loading...
Download File
Download File
Page Text
________________ ೯೫ ದ್ವಾದಶಾಶ್ವಾಸಂ | ೫೯೫ ಕಂ|| ಎನಿಲ್ಲದಿರ್ದೊಡು ಸ * ಜೈನರುಂ ಪತಿಹಿತರುಮಳೆಯವೇಲ್ಕುಂ ನೀನಿ | ನೈನಿತಂ ಕೂರದೊಡಂ ನಿ ಇ ನುಡಿಯನಾನಾಜಿರಂಗದೊಳ್ ಮಿಜುವನೇ || ವಗ ಎಂದು ನೊಂದು ನುಡಿದ ಮದ್ರರಾಜನ ನುಡಿಗೆ ಫಣಿರಾಜಕೇತನನಿಂತೆಂದಂಕಂ| ನೀಮೆನಗಿನಿತಂ ಕೆಮ್ಮನೆ ಮಾಮ ಮನಂ ನೊಂದು ಬೆಸಸಿದಿರ್ ಬಿನ್ನಪಮಂ | ನೀಮವಧಾರಿಸಿಮೆಂತನೆ ಸಾಮಾನ್ಯದ ಮನುಜನಲ್ಲನಂಗಮಹೀಶಂ || ಕುಲಹೀನನೆ ಅಪೊಡೆ ಕೇ ವಲಬೋಧಂ ಪರಶುರಾಮನೇನೀಗುವೆ ನಿ | ರ್ಮಲಿನಕುಲಂಗಲ್ಲದೆ ಪಿಡಿ ಯಲಲ್ಲದಂತಪ್ಪ ದಿವಬಾಣಾವಳಿಯಂ | ಮಣಿಕುಂಡಲಮುಂ ಕವಚಂ ಮಣಿಯದ ಚಾರಿತ್ರಮುಗ್ರತೇಜಮುಮೀಯೊ | ಲೈುಣಮುಂ ಕಲಿತನಮುಮಂ ಪ್ರಣತಾರೀ ಸೂತಸುತನೊಳೊಡವುಟ್ಟುಗುಮೆ ಕಲಿತನದ ನೆಗದ್ದಿ ಕಸವರ ಗಲಿತನದ ಪೊದು ಪರಮಕೋಟಿಗೆ ಪರಾರ್ | ಸಲೆ ಕರ್ಣನಲ್ಲದೆನಿಸುವ ಕಲಿತನಮಂ ಹರಿಗೆ ಕವಚಮಿತ್ತುದೆ ಪೇಯ್ಡುಂ || ೯೫. ಎಷ್ಟು ಮನಸ್ಸಿಗೆ ಒಪ್ಪದಿದ್ದರೂ ಸತ್ಪುರುಷರೂ ಪತಿಗೆ ಹಿತರಾದವರೂ ಒಪ್ಪಬೇಕು ತಾನೇ ? ನೀನು ಇನ್ನೆಷ್ಟು ಪ್ರೀತಿಸದಿದ್ದರೂ ನಿನ್ನ ಮಾತನ್ನು ನಾನು ಯುದ್ಧರಂಗದಲ್ಲಿ ಮೀರುತ್ತೇನೆಯೇ? ವ|| ಎಂದು ವ್ಯಥೆಯಿಂದ ಆಡಿದ ಶಲ್ಯನ ಮಾತಿಗೆ ದುರ್ಯೊಧನನು ಹೀಗೆಂದನು. ೯೬. ಮಾವ ನೀವು ನನಗೆ ಇಷ್ಟನ್ನು ಮನಸ್ಸಿನಲ್ಲಿ ವೃಥಾ ವ್ಯಥೆಪಟ್ಟು ಹೇಳಿದಿರಿ, ನನ್ನ ವಿಜ್ಞಾಪನೆಯನ್ನು ನೀವು ಲಾಲಿಸಿ. ಹೇಗೆಂದರೆ ಕರ್ಣನು ಸಾಮಾನ್ಯ ಮನುಷ್ಯನಲ್ಲ. ೯೭. ಕುಲಹೀನನೇ ಆಗಿದ್ದರೆ ಅಧ್ಯಾತ್ಮಜ್ಞಾನಿಯಾದ ಪರಶುರಾಮನು ಪರಿಶುದ್ಧವಾದ ಕುಲದವರಲ್ಲದವರು ಹಿಡಿಯಲಾಗದ ದಿವ್ಯಾಸ್ತಸಮೂಹವನ್ನು ಅವನಿಗೆ ಕೊಡುತ್ತಿದ್ದನೇ? ೯೮. ವಿಧೇಯರಾದ ಶತ್ರುಗಳನ್ನುಳ್ಳ ಎಲೈ ಶಲ್ಯನೇ ಮಣಿಕುಂಡಲವೂ ಕವಚವೂ ಬಗ್ಗದ ನಡತೆಯೂ ಉಗ್ರವಾದ ತೇಜಸ್ಪೂ - ಈ ಒಳ್ಳೆಯ ಗುಣ ಮತ್ತು ತೇಜಸ್ಸು ಇವು ಸೂತಪುತ್ರನಲ್ಲಿ ಜೊತೆಯಾಗಿ ಹುಟ್ಟುತ್ತವೆಯೇ? ೯೯.ಶೌರ್ಯದ ಮತ್ತು ಪ್ರಸಿದ್ದವಾದ ಔದಾರ್ಯದ ಪರಾಕಾಷ್ಠತೆಗೆ ಸಲ್ಲಲು ಕರ್ಣನಲ್ಲದೆ ಮತ್ತಾರಿದ್ದಾರೆ ಎನ್ನಿಸುವ ಶೌರ್ಯವನ್ನು ಇಂದ್ರನಿಗೆ ಕವಚವನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy