SearchBrowseAboutContactDonate
Page Preview
Page 582
Loading...
Download File
Download File
Page Text
________________ ದ್ವಾದಶಾಶ್ವಾಸಂ |೫೭೭ ಅಂತರ್ಭದದೊಳಂತು ಛಿದ್ರಿಸಿದರಾ ಗಾಂಗೇಯರಂ ಕೊಂದರಿಂ ದಿಂತೀಗಳ ಪುಸಿದೀ ಘಟೋದ್ಧವನನಾ ಕೌಂತೇಯರಾಯಕ್ಕೆ ಗೆಂ | ಟೆಂತೆಂತಕುಮದಂ ಮದುದ್ಯಮ ಪೇಟ್ಟಾ ವೈರಿಗಳೊಲ್ವೆನಾ ನೆಂತೊಳಂ ತಳೆವಂತು ತೇಜಮೆನಗಿನ್ನೆಂತಕ್ಕುಮಿಂ ಪೇಟೆರೇ || ವ|| ಎನೆ ಶಾರದ್ವತನಿಂತೆಂದಂ ಚಂll ಶಾ|| 42 ಚಲಮನೆ ಪೇಡಯ್ಯರುಮನಯ್ದಟೆಯೂರೊಳೆ ಬಾಟೆಸೆಂದು ಮುಂ ಬಲಿಬಲದನಂ ನುಡಿಯೆಯುಂ ಕುಡದಿರ್ದುದ ಪೇಟ್ಟುಮೆಯೆ ಮ 1 ಯಲಿತನಮಂ ಸರಿತ್ಸುತ ಘಟೋದ್ಧವರಂ ಪೊಣರ್ದಿಕ್ಕಿ ಗೆಲ್ಲರೊಳ್ ಕಲಹಮೆ ಪೇಟ್ಯುಮಿಂ ಪೆಂತು ಪೇಳ್ವೆಡೆಯಾವುದೊ ಕೌರವೇಶ್ವರಾ ||೪೮ ವ! ಅದಂದಮಂ ಪೆತು ಮಂತಣಕ್ಕೆಡೆಯಿಲ್ಲ ಮುನ್ನ ಚಕ್ಷುವನೆಂಬ ಮನುವಾದ ಕಾಲದೊಳ್ ಧರಾತಳಮನೊಲ್ಲಣಿಗೆಯಿಂ ಪಿಡೆವಂತೆ ತಳಮೆಯ್ದೆ ಸುರುಟ್ಟಿನಂ ಮುಖ್ಯಮ್ ಸೂ ಪಿಟಿದ ಸಾಹಸಮುಮನಿಂದ್ರಂಗೆ ತನ್ನ ಸಹಜ ಕವಚಮಂ ತಿದಿಯುಗಿದು ಕೊಟ್ಟ ಚಾಗದ ಪೆಂಪುಮಂ ದಿಗ್ವಿಜಯಂಗೆಯ್ದು ಮಿಡಿದನಿತು ಬೇಗದಿಂ ಜರಾಸಂಧನಂ ನೆಲಕ್ಕಿಕ್ಕಿ ಪುಡಿಯೊಳ್ ಪೊರಳ್ಳಿ ಮಲ್ಲಯುದ್ಧದೊಳ್ ಪಿಡಿದಡಿಗೊತ್ತಿದ ಭುಜಬಲಭೀಮನಂ ಗೆಲ್ಲ ಸಾಹಸಮುಮಂ ನಮ್ಮ ಪಡೆಯೆಲ್ಲಮಂ ತೊತ್ತದುಡಿದು ಕೊಲ್ವ ಘಟೋತ್ಕಚನೆಂಬ ರೂಕ್ಷ ರಾಕ್ಷಸನಂ ಕೊಂದ ಬೀರಮುಮನಾಲೋಕಾಂತರಂ ನೆಗ ಶಾರದ್ವತ, ಕೃತವರ್ಮ, ದುಶ್ಯಾಸನನೇ ಮೊದಲಾದವರನ್ನು ಬರಮಾಡಿ ಯೋಗ್ಯವಾದ ಸತ್ಕಾರಗಳಿಂದ ಕುಳ್ಳಿರಿಸಿ ೪೭. ರಹಸ್ಯವಾದ ಭೇದೋಪಾಯದಿಂದ ಹಾಗೆ ಆ ಭೀಷ್ಮರನ್ನು ಒಡೆದು ಹಾಕಿದರು. ಈ ದಿನ ಹೀಗೆ ಸುಳ್ಳು ಹೇಳಿ ದ್ರೋಣಾಚಾರ್ಯರನ್ನು ಕೊಂದರು. ಈಗ ಆ ಪಾಂಡವರಿಗೆ ಜಯವಾಗದಿರುವ ರೀತಿ ಯಾವುದು ಎಂಬುದನ್ನು ತಿಳಿಸಿ. ಆ ಶತ್ರುಗಳಲ್ಲಿ ನನಗೆ ಹೇಗೆ ಸ್ನೇಹವುಂಟಾದೀತು. ಪಾಂಡವರ ವಿಷಯದಲ್ಲಿ ಒಳ್ಳೆಯ ಭಾವವು ಬರುವುದು ಹೇಗೆ ಸಾಧ್ಯ? ನೀವೇ ಹೇಳಿರಿ. ವ|| ಎನ್ನಲು ಕೃಪನು ಹೀಗೆಂದನು- ೪೮. ನಿನ್ನ ಬಲವನ್ನು ಹೇಳುವುದಾದರೆ ಮೊದಲು ಕೃಷ್ಣನು ಬಂದು ಪಾಂಡವರೈವರನ್ನು ಅಯ್ದು ಕುಗ್ರಾಮಗಳಲ್ಲಿ ಬಾಳುವ ಹಾಗೆ ಮಾಡು ಎಂದು ಹೇಳಿದರೂ ಕೊಡದಿರುವುದೇ ಹೇಳುವುದು. ಭೀಷ್ಮ ದ್ರೋಣರನ್ನು ಪ್ರತಿಭಟಿಸಿ ಯುದ್ಧದಲ್ಲಿ ಸಂಹರಿಸಿ ಅವರನ್ನು ಗೆದ್ದ ಪಾಂಡವರಲ್ಲಿ ಯುದ್ಧಕ್ಕೆ ತೊಡಗಿರುವುದೇ ನಿನ್ನ ಪರಾಕ್ರಮವನ್ನು ಹೇಳುತ್ತದೆ. ದುರ್ಯೋಧನ! ಹೇಳುವುದು ಮತ್ತೇನಿದೆ? ವll ಆದುದರಿಂದ ಬೇರೆ ಮಂತ್ರಾಲೋಚನೆಗೆ ಅವಕಾಶವೇ ಇಲ್ಲ. ಹಿಂದೆ ಚಕ್ಷುಷ್ಯನೆಂಬ ಮನುವಾದ ಕಾಲದಲ್ಲಿ ಭೂಮಂಡಲವನ್ನು ಒದ್ದೆ ಬಟ್ಟೆಯನ್ನು ಹಿಂಡುವಂತೆ ಅಂಗೈಯಲ್ಲಿ ಸುರುಟಿಕೊಂಡು ಇಪ್ಪತ್ತೊಂದು ಸಲ ಹಿಂಡಿದ ಸಾಹಸವೂ ಇಂದ್ರನಿಗೆ ತನ್ನ ಸಹಜಕವಚವನ್ನು ತಿದಿಯ ಚರ್ಮವನ್ನು ಸುಲಿಯುವ ಹಾಗೆ ಅನಾಯಾಸವಾಗಿ ಸುಲಿದುಕೊಟ್ಟ ತ್ಯಾಗದ ಆಧಿಕ್ಯವೂ ದಿಗ್ವಿಜಯವನ್ನು ಮಾಡಿ ಚಿಟಿಕೆ ಹಾಕುವಷ್ಟು ಅಲ್ಪ ಕಾಲದಲ್ಲಿ ಜರಾಸಂಧನನ್ನು ನೆಲಕ್ಕೆ ಅಪ್ಪಳಿಸಿ ಹುಡಿಯಲ್ಲಿ ಹೊರಳಿಸಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy