SearchBrowseAboutContactDonate
Page Preview
Page 581
Loading...
Download File
Download File
Page Text
________________ ೫೭೬ | ಪಂಪಭಾರತಂ . ವ|| ಎಂಬುದುಮಶ್ವತ್ಥಾಮಂ ಕರ್ಣನ ನುಡಿಗೆ ಸಿಗಾಗಿಮ|| ಸll ಮುನಿಸಂ ಮುಂದಿಟ್ಟು ಬಿಲ್ಲಂ ಬಿಸುಡದೆ ಬಗೆದಂ ಮುನ್ಸಮಿನ್ನುರ್ಕಿನಿಂ ನಿ ನನೆ ಪೀನಂ ನಚ್ಚಿ ನಿನ್ನಾಳನ ನುಡಿಯಿಸೆ ನೀನಾಡಿದ ಮಾತನಾಡ | ಲೈನಗೀ ಸೂಬಲ್ಕು ಸೇನಾಧಿಪ ಪದವಿಯೊಳಿಂ ನೀನೆ ನಿಲ್‌ ನಾಳೆ ದುರ್ಯೋ ಧನನಂ ಸಕ್ಕಿಟ್ಟು ಮಾಜಾಂತದಟರೊಳಳವಂ ತೋಜುವಂ ನೀನುಮಾನುಂ || ೪೫ - ಕಂti ಸಾರಂಗಳ್ ನಿನ್ನ ಶರಾ ಸಾರಂಗಳಸಾರಮುಟದ ಕೆಯ್ಯುಗಳೆಂತುಂ | ಸಾರಾಸಾರತೆಯಂ ನಾ ಮಾರಯ್ಯಮಿದಿರ್ಚಿದರಿಕೃಷಧ್ವಜಿನಿಗಳೊಳ್ || - ವ|| ಎಂಬುದುಂ ದುರ್ಯೋಧನ ಕರ್ಣನುಮನಶ್ವತ್ಥಾಮನುಮಂ ನಿಮ್ಮೊಳಗೆ ನೀಂ ಮುಳಿಯಡ ನಿಮ್ಮ ಪುರುಷಕಾರಮನೆ ಬಗೆದು ನೆಗಟ್ಟುದಾನುಮತಿ ಕೊಂಡ ಕಜ್ರಮಂ ನಗಲ್ಲದಿರನೆಂದಾಯೆಡೆಯಿನೆಟ್ಟು ನಾಯಕರು ಬೀಡಿಂಗೆ ಪೋಗಲ್ವೇರಮನೆಯಂ ಪೊಕ್ಕು ಮಜ್ಜನ ಭೋಜನ ತಾಂಬೂಲಾನುಲೇಪನಂಗಳೆಂ ಸಂಗರ ಪರಿಶ್ರಮಮನಾಳಿಸಿ ಮಂತ್ರಶಾಲೆಗೆ ವಂದು ಶಲ್ಯ ಶಕುನಿ ಶಾರದ್ವತ ಕೃತವರ್ಮ ದುಶ್ಯಾಸನಾದಿಗಳು ಬರಿಸಿ ಯಥೋಚಿತ ಪ್ರತಿಪತ್ತಿಗಳಿಂದಿರಿಸಿಆಯುಧಗಳಿಂದ ಸಾಧ್ಯವಾಗದೇ ಇರುವುದು ಮತ್ತಾವ ಆಯುಧದಿಂದಾಗಲಿ ಸಾಧ್ಯವಾಗುತ್ತದೆಯೇ ? ನಿನ್ನ ಆಯುಧಗಳು ಯಾವಾಗಲೂ ಬಿಸಾಡಿರುವ ಲೆಕ್ಕವೇ (ಅಪ್ರಯೋಜಕವೇ). ಕಾರಣವಿಲ್ಲದೇ ಬಿಲ್ಲನ್ನು ಬಿಸಾಡುವ ಮತ್ತು ಕಣ್ಣೀರನ್ನು ಸುರಿಸುವ ಈ ಎರಡನ್ನೂ ನಿಮ್ಮಯ್ಯನಿಂದ ಕಲಿತಿದ್ದೀರಾ?' ವll ಎನ್ನಲು ಅಶ್ವತ್ಥಾಮನು ಕರ್ಣನ ಮಾತಿಗೆ ಲಜ್ಜಿತನಾಗಿ ೪೫. ನಾನು ಮೊದಲು ಕೋಪವನ್ನು ಮುಂದಿಟ್ಟು ಬಿಲ್ಲನ್ನು ಬಿಸುಡಲು ನಿರ್ಧರಿಸಿದೆನು. ಇನ್ನು ನಿನ್ನನ್ನು ನಿನ್ನ ಯಜಮಾನನು ಪೂರ್ಣವಾಗಿ ನಂಬಿ ಮಾತನಾಡಿಸಲು ನೀನು ಗರ್ವದಿಂದ ಮಾತನಾಡಿದೆ. ನಾನು ಮಾತನಾಡುವುದಕ್ಕೆ ಇದು ನನಗೆ ಸಮಯವಲ್ಲ, ಸೇನಾಧಿಪತಿಯ ಸ್ಥಾನದಲ್ಲಿ ನೀನೇ ನಿಲ್ಲು: ನಾಳೆ ದುರ್ಯೊಧನನನ್ನೇ ಸಾಕ್ಷಿಯಾಗಿಟ್ಟುಕೊಂಡು ಪ್ರತಿಭಟಿಸಿದ ಶೂರರಲ್ಲಿ ನೀನೂ ನಾನೂ ನಮ್ಮ ಪರಾಕ್ರಮವನ್ನು ತೋರಿಸೋಣ. ೪೬. ನಿನ್ನ ಬಾಣದ ಮಳೆಯು ಶಕ್ತಿಯುಕ್ತವಾದುದು ಉಳಿದ ಆಯುಧಗಳು ಹೇಗೂ ಅಸಾರವಾದುವು. (ಶಕ್ತಿಯಿಲ್ಲದುವು) ಈ ಸಾರಾಸಾರತೆಯನ್ನು ನಮ್ಮನ್ನು ಎದುರಿಸಿದ ಶತ್ರುರಾಜರ ಸೈನ್ಯದಲ್ಲಿ ವಿಚಾರ ಮಾಡೋಣ'. ವll ಎನ್ನಲು ದುರ್ಯೋಧನನು ಕರ್ಣನನ್ನೂ ಅಶ್ವತ್ಥಾಮನನ್ನೂ ಕುರಿತು 'ನೀವು ನಿಮ್ಮನಿಮ್ಮಲ್ಲಿ ಕೋಪಿಸಬೇಡಿ; ನಿಮ್ಮ ಪೌರುಷವನ್ನು ಯೋಚಿಸಿ ಕೆಲಸಮಾಡುವುದು. ನಾನೂ ಅಂಗೀಕಾರಮಾಡಿದ ಕೆಲಸವನ್ನು ಮಾಡದೇ ಇರುವುದಿಲ್ಲ ಎಂದು ಆ ಸ್ಥಳದಿಂದೆದ್ದು ನಾಯಕರನ್ನು ಬೀಡಿಗೆ ಹೋಗಲು ಹೇಳಿ ತಾನು ಅರಮನೆಯನ್ನು ಪ್ರವೇಶಿಸಿ ಸ್ನಾನ ಭೋಜನ ತಾಂಬೂಲ ಅನುಲೇಪನಗಳಿಂದ ಯುದ್ಧಾಯಾಸವನ್ನು ಹೋಗಲಾಡಿಸಿಕೊಂಡು ಮಂತ್ರಶಾಲೆಗೆ ಬಂದು ಶಲ್ಯ, ಶಕುನಿ,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy