SearchBrowseAboutContactDonate
Page Preview
Page 565
Loading...
Download File
Download File
Page Text
________________ ೫೬೦ | ಪಂಪಭಾರತಂ ವ|| ಎಂದು ಕುಂಭಸಂಭವಂ ಜಳನಿಧಿಯಂ ಕುಡಿದ ಕುಂಭಸಂಭವನಂತ ಪಾಂಡವ ಬಳ ಜಳನಿಧಿಯನಳುರಲ್ ಬಗೆದು ನೇಸಮ್ ಪಟೊಡಂ ಪೋಗದ ಪಗಲಿನನುವರ ದೊಳಿಎಳ್ಳೆಯಾದ ಪಾಂಡವರನಿರುಳೊಳೆ ಗೆಲ್ವೆನೆಂದು ಚತುರ್ಬಲಂಗಳನೊಂದುಮಾಡಿ ತಕ್ಕಿನ ವಿಕ್ರಮಾರ್ಜುನನ ಕೋಪದ ದಳ್ಳುರಿಗಳ ವಿರೋಧಿಯಂ | ಮುಕ್ಕಲೆ ಮುತ್ತಿದಂತೆ ಕರಿಗಂಟು ರಥಕ್ಕನುವಾಗೆ ನಾಲ್ಕು ವಾ | ಹಕ್ಕೆರಡಲ್ಲಿ ಪಾದಚರರ್ಗೊಂದನೆ ದೀವಿಗೆಗಳ ಜಲಕ್ಕನೆ ಕೈಕೊಯಿನಿಟ್ಟಳಂ ಬೆಳಗುತಿರ್ದುವರಚಿಸಯೊಡ್ಡಣಂಗಳೊಳ್ | ವll ಅಂತು ಪಗಲಿಳಿದು ತಣಿಯದಿರುಳಂ ಪಗಲಾಡಿ ಕಾದುವರಟ್ಟಡೆಗಳೇರ್ವಸನಂ ಕಣ್ಣಾರೆ ನೋಡಲೆಂದು ವೈಮಾನಿಕ ದೇವರಂಬರತಳದೊಳಿರ್ದು ಕಿರ್ಚಲ್ಲಿ ಲಂಕೆಯಂ ನೋಟ್ಟಂತೆ ನೋಡೆ ಧರ್ಮಪುತ್ರನನಧೋಕ್ಷಜನಿಂತೆಂದಂ ಚಂ|| ಇರುಳೊಳುಮಿಂತು ಪೋಗದಿಯಲ್‌ ಘಟಸಂಭವನಿರ್ದನೆಂತು ನಿ ತರಿಸುವಮೀ ಮಹಾಹವಮನೆಂಬುದುಮಿನ್ನಿರುಳೊಳ್ ಬಲಂ ನಿಶಾ | ಚರ ಬಲಕುಂಟು ಮಾಣದೆ ಘಟೋತ್ಕಚನಂ ಬೆಸವೇಚ್ಚುದೆಂದೂಡಾ ದರದೊಳೆ ಭೀಮನಂದನನನಾ ಪದದೊಳ್ ಯಮರಾಜನಂದನಂ || ೬ ಹೇಗೂ ವ್ಯರ್ಥವಾಗುವುದಿಲ್ಲವಲ್ಲವೇ ? ವll ಎಂದು ದ್ರೋಣಾಚಾರ್ಯನು ಸಮುದ್ರಪಾನಮಾಡಿದ ಅಗಸ್ಯರಂತೆ ಪಾಂಡವ ಸೇನಾಸಮುದ್ರವನ್ನು ಸುಟ್ಟು ಹಾಕಲು ಯೋಚಿಸಿ ಸೂರ್ಯಾಸ್ತಮಾನವಾದರೂ ಪಾಳೆಯಕ್ಕೆ ಹೋಗದೆ ಹಗಲಿನ ಯುದ್ದದಲ್ಲಿ ಅತ್ಯಾಯಾಸಗೊಂಡಿರುವ ಪಾಂಡವರನ್ನು ರಾತ್ರಿಯಲ್ಲಿ ಗೆಲ್ಲುತ್ತೇನೆ ಎಂದು ಚತುರಂಗಸೈನ್ಯವನ್ನು ಒಟ್ಟುಗೂಡಿಸಿದನು. ೫. ಯೋಗ್ಯನಾದ ವಿಕ್ರಮಾರ್ಜುನನ ಕೋಪದ ಮಹಾಜ್ವಾಲೆಗಳು ಶತ್ರುವನ್ನು ಮುತ್ತುವುದಕ್ಕಾಗಿಯೇ ಮುತ್ತಿದೆಯೋ ಎನ್ನುವಂತೆ ಒಂದು ಆನೆಗೆ ಎಂಟು, ರಥಕ್ಕೆ ನಾಲ್ಕು, ಕುದುರೆಗೆ ಎರಡು, ಪಾದಚರರಿಗೆ ಒಂದು ಎನ್ನುವ ಕ್ರಮದಲ್ಲಿ ದೀವಿಟಿಗೆಗಳು ಜಲಕ್ಕನೆ ಪಕ್ಕಪಕ್ಕದಲ್ಲಿಯೇ ಎರಡುಸೈನ್ಯಗಳಲ್ಲಿಯೂ ಮನೋಹರವಾಗಿ ಬೆಳಗುತ್ತಿದ್ದುವು. ವli ಹಾಗೆ ಹಗಲು ಯುದ್ದಮಾಡಿ ತೃಪ್ತಿಯಾಗದೆ ರಾತ್ರಿಯನ್ನೇ ಹಗಲುಮಾಡಿಕೊಂಡು ಕಾದುವ ಎರಡೂ ಸೈನ್ಯಗಳ ಯುದ್ಧಕಾರ್ಯವನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ವೈಮಾನಿಕ ದೇವರುಗಳು ಆಕಾಶ ಪ್ರದೇಶದಲ್ಲಿದ್ದುಕೊಂಡು ಉರಿಯುತ್ತಿದ್ದ ಲಂಕಾಪಟ್ಟಣವನ್ನು ನೋಡುವಂತೆ ನೋಡಲು ಧರ್ಮರಾಯನು ಕೃಷ್ಣನನ್ನು ಕುರಿತು ಹೀಗೆಂದನು. ೬. ದ್ರೋಣನು ರಾತ್ರಿಯಲ್ಲಿಯೂ ಹಿಂತಿರುಗದೆ ಯುದ್ಧಮಾಡಲಿದ್ದಾನೆ. ಈ ಮಹಾಯುದ್ಧವನ್ನು ನಾವು ಹೇಗೆ ನಿರ್ವಹಿಸೋಣ ಎನ್ನಲು ರಾಕ್ಷಸರು ರಾತ್ರಿಯಲ್ಲಿ ಶಕ್ತಿಯುಕ್ತರು, ಸಾವಕಾಶ ಮಾಡದೆ ಘಟೋತ್ಕಚನಿಗೆ ಆಜ್ಞೆ ಮಾಡು ಎಂದು ಕೃಷ್ಣನು ಹೇಳಿದನು. ಅದರಂತೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy