SearchBrowseAboutContactDonate
Page Preview
Page 564
Loading...
Download File
Download File
Page Text
________________ C ದ್ವಾದಶಾಶ್ವಾಸಂ ಕಂil ಶ್ರೀ ಶ್ರೀಕಾಂತಾಕಾಂತನಿಳಾ ಲೋಕೈಕಲಲಾಮನಾ ಮಹೋಗ್ರಾರಿ ನೃಪಾ | ನೀಕಮನನೇಕಮಂ ಗೆ ಲ್ಲಾ ಕಲಹದೊಳರಿಗನುಜದ ನಿಲ್ಲುದುಮಾಗಳ್ || ನಂಬಿ ನೃಪನೆನಗೆ ಸೈಂಧವ ನಂ ಬಂದಪ್ಪಸ ಪೂಣ್ಣೆನಾದುದನಾಗ | ಆ್ಯಂಬಟಿದನುವರದೊಳವಂ ಮುಂಬಯಣಂಬೋದನೆನಗೆ ಮಾಣ್ಣುದು ದೊರೆಯೇ || ಬವರದೂಳೇಂ ಬಲಂ ಕರ ಮೊವಜುಗೆಯಲ್ ಪರ್ಗೆ ಕಂಡು ತನಗಣಿಯನಂ | ತುವೂ ನುಡಿ ತಪ್ಪದು ಕಮ್ಮಟೆ ಯೊವಜಂ ಬಿಲ್ಗೊವಜನೆಂಬುದಂ ಮಾಡುವೆನೇ || ಒಪ್ಪ ಜಯದ್ರಥನಾದುದ ನಪ್ಟೆಂ ಪೋಗೆಂದು ಮುನ್ನೆ ನುಡಿದುದನೀಗಲ್ | ತಪ್ಪುವೆನೆ ಧರೆಯೊಳೆಂತುಂ ತಪ್ಪದು ವಲಮನ್ನ ನುಡಿಯುಮನ್ನೆಚ್ಚಂಬುಂ || ೨ ೧. ಜಯಲಕ್ಷಿಯೆಂಬ ಸ್ತ್ರೀಗೆ ಒಡೆಯನಾದವನೂ ಭೂಮಂಡಲದಲ್ಲೆಲ್ಲ ಏಕಮಾತ್ರ ಶ್ರೇಷ್ಠನಾದವನೂ ವಿಶೇಷಭಯಂಕರವಾದ ಅನೇಕ ಶತ್ರುರಾಜರುಗಳ ಸಮೂಹವನ್ನು ಗೆದ್ದಿರುವವನೂ ಆದ ಅರ್ಜುನನು ಆ ಯುದ್ಧದಲ್ಲಿ ವೇಗವಾಗಿ ಬಂದು ನಿಂತನು..೨. ರಾಜನಾದ ದುರ್ಯೋಧನನು ನನ್ನನ್ನು ನಂಬಿ ಸೈಂಧವನನ್ನು ತಂದು ನನಗೆ ಒಪ್ಪಿಸಿದನು. ಅವನಾದುದನ್ನಾಗುತ್ತೇನೆಂದು ನಾನು ಪ್ರತಿಜ್ಞೆ ಮಾಡಿದನು. ಆಶ್ರಯವಿಲ್ಲದೆ (ಕ್ರಮ ತಪ್ಪಿ) ಅವನು ಯುದ್ಧದಲ್ಲಿ ಮೊದಲು ಮಡಿದನು. ನಾನು ತಡೆದಿರುವುದು (ಹಾಗಾಗದಿರುವುದು) ಉಚಿತವೇ ?-೩. ಇತರರಿಗೆ ಉಪದೇಶ ಮಾಡುವುದಕ್ಕೆ ಬಲ್ಲನೇ ವಿನಾ ಯುದ್ದದಲ್ಲಿ ತಾನು ಏನು ಮಾಡಬಲ್ಲ ? (ಯುದ್ದದಲ್ಲಿ ತಾನು ಏನು ಮಾಡಬೇಕೆಂಬುದು ಅವನಿಗೇನು ಗೊತ್ತು?) ಎಂತಹುದೋ ಈ ಮಾತು. ಈ ಅಪಪ್ರಥೆ ನನಗೆ ತಪ್ಪುವುದಿಲ್ಲ. ಚಾಪಾಚಾರ್ಯನಾದ ನಾನು (ಸಾಮಾನ್ಯ ವಾದ ಮರಗೆಲಸದ ಓಜಿಯಂತೆ) ಆಡಿದಂತೆ ಮಾಡುವವನಲ್ಲ ಎಂಬ ಲೋಕಾಪ ವಾದಕ್ಕೆ ಗುರಿಯಾಗಲೆ! ೪. ಎಲ್ಲರಿಗೂ ಗೊತ್ತಿರುವ ಹಾಗೆ ಜಯದ್ರಥನಾದುದನ್ನು ನಾನು ಆಗುತ್ತೇನೆ ಹೋಗು ಎಂದು ಮೊದಲಾಡಿದ ಮಾತನ್ನು ಈಗ ತಪ್ಪುತ್ತೇನೆಯೇ? ಭೂಮಿಯಲ್ಲಿ ನಿಶ್ಚಯವಾಗಿಯೂ ನನ್ನ ಮಾತೂ ನಾನು ಪ್ರಯೋಗಿಸಿದ ಬಾಣವೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy