SearchBrowseAboutContactDonate
Page Preview
Page 556
Loading...
Download File
Download File
Page Text
________________ ಏಕಾದಶಾಶ್ವಾಸಂ | ೫೫೧ ಚಂ| ತಡೆಯದೆ ರಾಜರಾಜನಿದಿರಂ ಬರೆ ಭೋರ್ಗರೆದೆಚೊಡಂಬುಗಳ ನಡದೆ ಸಿಡಿಲುದುಂ ಕರತಳದ್ವಯಮಂ ಬಿರಿಯಚ್ಚು ಕೆಯ್ಯುವಂ | ಪಿಡಿವದಟೆಲ್ಲಮಂ ಕಿಡಿಸಿ ತಾಂ ಕೊಲಲೋಲ್ಲನೆ ಭೀಮನಾತನಂ ಮಡಿಪುವೆನೆಂದ ಪೂಕ್ಕೆ ಪುಸಿಯಾದಪುದೆಂದಮರೇಂದ್ರನಂದನಂ || ೧ರ್೩ ವ|| ಅನ್ನೆಗಮಿತ್ತ ಧರ್ಮಪುತ್ರನಮೋಘಾಸ್ತ ಧನಂಜಯನಂ ಕೆಯೊಳಲಟ್ಟಿದೊಡೆ ಕೌರವಬಳ ಜಳನಿಧಿಯ ನಡುವನುತ್ತರಿಸಿ ಬರ್ಪ ಸಾತ್ಯಕಿಯಂ ಭೂರಿಶ್ರವನೆಡೆಗೊಂಡಾಂತು* ಉll , ಪೋಗದಿರೆಂದು ಮೂದಲಿಸೆ ಸಾತ್ಯಕಿ ತೀವ್ರ ಶರಾಳಿಯಿಂದಗು ರ್ವಾಗೆ ವರೂಥಮಂ ಕಡಿದೊಡುರ್ಚಿದ ಬಾಳ್ವರಸಾತನೆಯ್ದವಂ | ದಾಗಳಿದಿರ್ಚೆ ತಾನುಮಸಿಯಂ ಸೆರಗಿಲ್ಲದೆ ಕಿಚ್ಚು ಹಾಯ್ದು ಭೂ ಭಾಗ ನಭೋವಿಭಾಗವರಮಳ್ಳು ಜತೆ ತಲೆದರ್ ವಿರೋಧಿಗಳ್ || ೧೪೦ ವl ಅಂತಿರ್ವರುಮೋರೊರ್ವರೋಲ್ ಬೀರಮುಮಂ ಬಿಂಕಮುಮಂ ಮೆಳೆದು ದಾಸವಣದಂಡೆಯಂ ತೋರದಿಂಡೆಯಾಡಿದಂತೆ ದೆಸೆ ದೆಸೆಗೆ ಕೆದಳದ ಕಂಡದಿಂಡೆಗಳುಂ ನಾರಂಗ ಸಕಳವಟ್ಟೆಯ ಪಬಯಿಗೆಗಳಂತೆ ನಭಕ್ಕೆ ಮಿಳಿರ್ದು ಮಿಲ್ಲಿಸಿ ಪಾಟುವ ನೆತ್ತರ ಸುಟ್ಟುರೆಗಳುಮತಿ ಭಯಂಕರಾಕಾರಮಾಗೆ ಕಾದಿ ಬಸವಳಿದ ಸಾತ್ಯಕಿಯಂ ಭೂರಿಶ್ರವನಶ್ರಮದೊಳ್ ನೆಲಕಿಕ್ಕಿ ಗಂಟಲಂ ಮೆಟ್ಟಿ ತಲೆಯನರಿವಾಗಳ್ ಸಾತ್ಯಕಿ ಭೂಮಿಯುದ್ಧ ಪ್ರವೀಣನಪ್ಪುದಳೆಂದಾತನ ಹೋದನು. ೧೩೯. ದುರ್ಯೋಧನನು ತಡೆಯದೆ ಎದುರಾಗಿ ಬಂದು ಭೋರ್ಗರೆದು ಬಾಣಪ್ರಯೋಗ ಮಾಡಲು ಬಾಣಗಳು ನಾಟಿಕೊಳ್ಳದೆ ಸಿಡಿದುವು. ಅರ್ಜುನನು ಅವನ ಎರಡು ಕೈಗಳನ್ನೂ ಬಿರಿದುಹೋಗುವ ಹಾಗೆ ಹೊಡೆದು ಆಯುಧವನ್ನು ಹಿಡಿಯುವ ಶಕ್ತಿಯನ್ನೂ ಕೆಡಿಸಿದನು. ಭೀಮನು ಆತನನ್ನು ಕೊಲ್ಲುವೆನೆಂದು ಮಾಡಿದ ಪ್ರತಿಜ್ಞೆಯು ಹುಸಿಯಾಗುವುದೆಂದು ಅವನನ್ನು ಕೊಲ್ಲಲಾರದೆ ಹೋದನು. ವ|| ಅಷ್ಟರಲ್ಲಿ ಈ ಕಡೆ ಧರ್ಮರಾಯನು ಅರ್ಜುನನ ರಕ್ಷಣೆಗಾಗಿ ಸಾತ್ಯಕಿಯನ್ನು ಕಳುಹಿಸಲು ಕೌರವಸೇನಾಸಮುದ್ರದ ಮಧ್ಯಭಾಗವನ್ನು ದಾಟಿ ಬರುತ್ತಿದ್ದ ಸಾತ್ಯಕಿಯನ್ನು ಭೂರಿಶ್ರವನು ಅಡ್ಡಗಟ್ಟಿ ಎದುರಿಸಿದನು. ೧೪೦. ಹೋಗಬೇಡ ಎಂದು ಮೂದಲಿಸಲು ಸಾತ್ಯಕಿಯು ಹರಿತವಾದ ಬಾಣ ಸಮೂಹದಿಂದ ಭಯಂಕರವಾಗಿ ಅವನ ತೇರನ್ನು ಕತ್ತರಿಸಲು ಹಿರಿದ ಕತ್ತಿಯೊಡನೆ ಆತನು ಸಮೀಪಕ್ಕೆ ಬಂದು ಎದುರಿಸಿದನು. ಆಗ ತಾನೂ ಭಯವಿಲ್ಲದೆ ಕತ್ತಿಯನ್ನು ಹೊರಸೆಳೆದು ನುಗ್ಗಿ ಭೂಮ್ಯಾಕಾಶಗಳವರೆಗೆ ಭಯಂಕರವಾಗಿ ವಿರೋಧಿಗಳು ಸಂಧಿಸಿ ಯುದ್ದಮಾಡಿದರು. ವ|| ಹಾಗೆ ಇಬ್ಬರೂ ಒಬ್ಬೊಬ್ಬರಲ್ಲಿ ವೀರವನ್ನೂ ಗರ್ವವನ್ನೂ ಪ್ರಕಾಶಿಸಲು ದಾಸವಾಳದ ಹೂವಿನ ಹಾರವನ್ನು ದೊಡ್ಡದಾಗಿ ರಾಶಿಮಾಡಿದಂತೆ ದಿಕ್ಕು ದಿಕ್ಕಿಗೆ ಚೆದುರಿ ಮಾಂಸದ ಉಂಡೆಗಳೂ ಕಿತ್ತಳೆಯ ಮತ್ತು ಬಣ್ಣ ಬಣ್ಣದ ಬಟ್ಟೆಯ ಬಾವುಟಗಳಂತೆ ಗಗನಕ್ಕೆ ಅತ್ತಿತ್ತ ಚಲಿಸುವ ಮತ್ತು ಚಿಮ್ಮಿ ಹಾರುವ ರಕ್ತದ ಸುಂಟುರುಗಾಳಿಗಳೂ ಅತಿ ಭಯಂಕರಾಕಾರವಾದುವು. ಹಾಗೆ ಕಾದಿ ಶಕ್ತಿಗುಂದಿದ ಸಾತ್ಯಕಿಯನ್ನು ಭೂರಿಶ್ರವನು ಶ್ರಮವಿಲ್ಲದೆಯೇ ನೆಲಕ್ಕೆ ಬಡಿದು ಗಂಟಲನ್ನು ಮೆಟ್ಟಿ ತಲೆಯನ್ನು ಕತ್ತರಿಸುವಾಗ ಸಾತ್ಯಕಿಯು ಭೂಮಿಯುದ್ದದಲ್ಲಿ ಪ್ರವೀಣನಾಗಿದ್ದುದರಿಂದ ಆತನ ಕತ್ತಿಯ ಬಾಯಲ್ಲಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy