SearchBrowseAboutContactDonate
Page Preview
Page 555
Loading...
Download File
Download File
Page Text
________________ ೫೫೦ | ಪಂಪಭಾರತಂ ಕೃಪರಂ ವಿರಥರ್ಮಾಡಿ ನಡುವಗಲಿಟಿವಿನಂ ಕಾದಿ ಬುಲ್ಲು ಕುದುರೆಗಳಂ ನೀರೊಳಿಕ್ಕಲೆಂದು ದೇವಖಾತವೆಂಬ ಮಡುವಿಂಗೆ ಬರ್ಪುದುಮಿ ದುರ್ಯೋಧನಂ ದ್ರೋಣರಲ್ಲಿಗೆ ವಂದುಚಂil ಅಟಿದುದು ಚಾತುರಂಗ ಬಲಮಳ್ಳುಜದಾಂತ ಮಹಾರಥರ್ಕಳುಂ ಕಲಕುಮಾದುದೊಡ್ಡಣಮಣಂ ತಲೆದೋಲೆ ಗಂಡರಿಲ್ಲ ತೊ | ತಂದು ದಪ್ಪನಿನ್ನಿನಿಸು ಬೇಗನೆ ಸೈಂಧವನಂ ನೆಗಟಿಯಂ ಗಟೆಯಿಸಿಕೊಳ್ಳೋಡನ್ನಿನಿಸು ನಿಂದಿಕೆಯಿಂ ತಳೆಸಂದು ಪಾರ್ಥನೊಳ್ || ೧೩೭ ವ|| ಎಂಬುದುಂ ದ್ರೋಣಾಚಾರಂ ಮುಗುಳಗೆ ನಕ್ಕು ವಿಕ್ರಮಾರ್ಜುನನನಿಳಿಸಿ - ನುಡಿವ ನಿನ್ನೆಣಗೋಣಂಗಳುಮೆಕ್ಕಸಕ್ಕತನಂಗಳುಮೆತ್ತವೋದುವುಚoll ನಿನಗರಸಾಳನಂ ನುಡಿವ ಬೀರರ ಬೀರದಳುರ್ಕೆ ವಿಕ್ರಮಾ ರ್ಜುನನೊಳದೇಕೆ ಸಲ್ಲದೆನಗಾತನಸಾಧ್ಯನವಧ್ಯನಾನುಮೀ || ಮೊನೆಯೋಳೆ ನಿಂದು ಕಾದಿದಪೆನನ್ನೆಗಮೆನ್ನ ವರೂಥ ಸೂತ ಕೇ ತನ ಕವಚಂಗಳಿಂ ನೆರೆದು ತಳಿ ನೀಂ ಜಗದೇಕಮಲ್ಲನೊಳ್ || ೧೩೮ ವ|| ಎಂಬುದುಂ ಸುಯೋಧನನೇನಾದೊಡೇನಾದುದೆನ್ನ ಹಗೆಯ ನಾನೇ ಕೊಲ್ವೆನೆಂದ ಭೇದ ಕವಚಮಂ ತೊಟು ದಿವಶರಾಸನ ಶರಂಗಳಂ ಕೊಂಡು ಕಳಶ ಕೇತನ ವರೂಥನಾಗಿ ಪೊಗಿ ಕೂಡಿಕೊಂಡು ಬರಲು ನಾಲ್ಕು ಸಾವಿರ ರಾಜರನ್ನು ಕೊಂದು ಶಲ್ಯನ ಎದೆಯನ್ನು ಬಿರಿಯುವ ಹಾಗೆ ಹೊಡೆದು ಕೃಪರನ್ನು ರಥವಿಲ್ಲದವರಂತೆ ಮಾಡಿ ನಡುಹಗಲು ಇಳಿಯುವವರೆಗೂ ಕಾದಿ ಬಳಲಿ ಕುದುರೆಯನ್ನು ನೀರಿಗೆ ಬಿಡಬೇಕೆಂದು ದೇವಖಾತವೆಂಬ ಮಡುವಿಗೆ ಬಂದನು. ದುರ್ಯೋಧನನು ದ್ರೋಣ ನಲ್ಲಿಗೆ ಬಂದನು. ೧೩೭. ಚತುರಂಗ ಬಲವೂ ನಾಶವಾಯಿತು. ಹೆದರದೆ, ಪ್ರತಿಭಟಿಸಿದ ಮಹಾರಥರುಗಳೂ ಚೆಲ್ಲಾಪಿಲ್ಲಿಯಾದರು. ಸೈನ್ಯವು ಸ್ವಲ್ಪವಾದರೂ ಕಾಣಿಸಿಕೊಳ್ಳಲು ಶೂರರಾದವರಾರೂ ಇಲ್ಲ. ಸ್ವಲ್ಪ ಕಾಲದಲ್ಲಿಯೇ ಸೈಂಧವನನ್ನು ತುಳಿದುಹಾಕುತ್ತಾನೆ. ಪ್ರಸಿದ್ದಿಯನ್ನು ಪಡೆಯಬೇಕಾದರೆ ಸ್ವಲ್ಪ ಸ್ಥಿರವಾಗಿ ನಿಂತುಕೊಂಡು ಅರ್ಜುನನೊಡನೆ ಯುದ್ದಮಾಡಿ ಎಂದನು. ವ|ದ್ರೋಣಾಚಾರ್ಯನು ಮುಗುಳಗೆ ನಕ್ಕು ವಿಕ್ರಮಾರ್ಜುನನನ್ನು ತಿರಸ್ಕರಿಸಿ ಮಾತನಾಡುವ ವಕ್ರವಾದ ಅಹಂಕಾರದ ಮಾತುಗಳೂ ನಿಂದೆ ಮತ್ತು ಪರಿಹಾಸದ ಮಾತುಗಳೂ ಈಗೆಲ್ಲಿಗೆ ಹೋದುವು -೧೩೮. ನಿನಗೆ ಚಕ್ರವರ್ತಿತ್ವವನ್ನು ಘೋಷಿಸುವ ವೀರರ ಶೌರ್ಯದ ಆಧಿಕ್ಯವು ವಿಕ್ರಮಾರ್ಜುನನಲ್ಲಿ ಅದೇಕೆ ಸಲ್ಲುವುದಿಲ್ಲ. ನನಗೆ ಅವನು ಗೆಲ್ಲುವುದಕ್ಕೆ ಅಸಾಧ್ಯನಾದವನು. ಕೊಲ್ಲಲಾಗ ದವನು. ನಾನೂ ಈ ಯುದ್ಧಮುಖದಲ್ಲಿಯೇ ನಿಂತು ಕಾದುತ್ತೇನೆ. ಅಲ್ಲಿಯವರೆಗೆ ನೀನೂ ನನ್ನ ತೇರು, ಸಾರಥಿ, ಧ್ವಜ ಕವಚಗಳಿಂದ ಕೂಡಿಕೊಂಡು ಜಗದೇಕಮಲ್ಲನಲ್ಲಿ ಸಂಧಿಸಿ ಯುದ್ಧಮಾಡು. ವ|| ಎನ್ನಲು ದುರ್ಯೋಧನನು ಏನಾದರೇನಾಯಿತು. ನನ್ನ ಶತ್ರುವನ್ನು ನಾನೇ ಕೊಲ್ಲುತ್ತೇನೆ ಎಂದು ಒಡೆಯಲಾಗದ ಕವಚವನ್ನು ತೊಟ್ಟು ಶ್ರೇಷ್ಠವಾದ ಬಿಲ್ಲುಬಾಣಗಳನ್ನು ತೆಗೆದುಕೊಂಡು ಕಳಶಧ್ವಜರಥದಿಂದ ಕೂಡಿಕೊಂಡು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy