SearchBrowseAboutContactDonate
Page Preview
Page 553
Loading...
Download File
Download File
Page Text
________________ ೫೪೮ / ಪಂಪಭಾರತಂ ಯುಧಾಮನ್ನೂತ್ತಮೌಜಃಕೈಕಯ ಪ್ರಧಾನ ನಾಯಕರಂ ತನ್ನೊಡನೆ ಕೂಡಿಕೊಂಡು ನಿಜಾಗ್ರಜನಂ ಬೀಳ್ಕೊಂಡು ನಿಜರಥಮಂ ರಥಾಂಗಧರನಂ ಮುನ್ನಮೇಜಲ್ಬಟ್ಟು ಮೂರು ಸೂಯ್ ಬಲವಂದು ಪೊಡಮಟ್ಟು ರಥವನೇ ವಜ್ರಕವಚಮಂ ತೊಟ್ಟು ತವಕಗಳನಮರ ಬಿಗಿದು ಗಾಂಡೀವಮನೇಲಿಸಿ ನೀವಿ ಜೇವೊಡೆದಾಗಳ್ಪದ್ಧಿ | ಭವಂ ಭವನ ಗೋತ್ರದಿಂದಜನಜಾಂಡದಿಂ ಭಾನು ಭಾ ನು ವೀಧಿಯಿನಿಳಾತಳಂ ತಳದಿನೆಯ್ದ ಕಿಟ್ಟು ತೂ | ಇವಾರ್ಯ ಭುಜವೀರ್ಯಮಂ ನೆಯ ತೋರ್ಪಿನಂ ಕುಂಭ ಸಂ ಭವಂ ಮರಲೆ ತಾಗಿದಂ ರಿಪುಕುರಂಗ ಕಂಠೀರವಂ || ವ|| ಅಂತು ತಾಗಿ ಚಕ್ರವ್ಯೂಹದ ಬಾಗಿಲೊಳ್ ತನ್ನಂ ಪುಗಲೀಯದಡ್ಡವಾಗಿ ನಿಂದ - ಕಾರ್ಮುಕಾಚಾರ್ಯನನುಜ ಸಗೆಯ್ಯದೆ ವಿನಯಾಸ್ತಮನೆಚ್ಚು ವಿನಯಮನೆ ಮುಂದಿಟ್ಟು ಬಲವಂದು ಪೊಡಮಟ್ಟು ಪೋಗವೋಗಮll ಕಮನೀಯಂ ಬಲವಂದು ಪೋಪನನಲೇ ಪೋಪೋಗದಿರ್ ಪೋಗದಿರ್ ಸಮರಕ್ಕೆನ್ನೂಡನಂಜಿ ಪೊದೆಯೆನಲಿಂತೆಂದಂ ನರಂ ದ್ರೋಣರಂ | ನಿಮಗಾನಂಜುವುದೆನ್ನ ಬಾಲತನದಿಂದಂದಾದುದಿಂದಾದುದೇ ನಿಮಗಾನಂಜದೊಡಂಜಿಸಲ್ ನೆಟವನೇ ತೈಲೋಕಮಂ ಯುದ್ಧದೊಳ್|| ೧೩೪ ೧೩೩ ಯುಧಾಮನ್ನೂತ್ತಮೌಜಸ್ ಕೈಕಯರೇ ಮೊದಲಾದ ನಾಯಕರನ್ನು ತನ್ನೊಡನೆ ಸೇರಿಸಿಕೊಂಡು ತಮ್ಮಣ್ಣನ ಅಪ್ಪಣೆಯನ್ನು ಪಡೆದು ಹೋದನು. ಕೃಷ್ಣನನ್ನು ಮೊದಲು ತನ್ನ ತೇರನ್ನು ಹತ್ತಲು ಹೇಳಿ ಮೂರು ಸಲ ಪ್ರದಕ್ಷಿಣ ನಮಸ್ಕಾರಮಾಡಿ ರಥವನ್ನು ಹತ್ತಿ ವಜ್ರಕವಚವನ್ನು ತೊಟ್ಟು ಬರಿದಾಗದ ಬತ್ತಳಿಕೆಯನ್ನು (ಅಕ್ಷಯತೂಣೀರ) ಬಿಗಿಯಾಗಿ ಬಿಗಿದುಕೊಂಡು ಗಾಂಡೀವಕ್ಕೆ ಹೆದೆಯೇರಿಸಿ ನೀವಿ ಶಬ್ದಮಾಡಿದನು. ೧೩೩. ಆ ಶಬ್ದದಿಂದ ಈಶ್ವರನು ಕೈಲಾಸಪರ್ವತದಿಂದಲೂ ಬ್ರಹ್ಮನು ಬ್ರಹ್ಮಾಂಡದಿಂದಲೂ ಸೂರ್ಯನು ಆಕಾಶಮಾರ್ಗದಿಂದಲೂ ಭೂಮಂಡಲವು ತನ್ನ ಮೂಲದಿಂದಲೂ ಪೂರ್ಣವಾಗಿ ಕಿತ್ತು ಎದ್ದು ಬರುವ ಹಾಗಾಯಿತು. ತಡೆಯಲಸಾಧ್ಯವಾದ ತನ್ನ ಬಾಹುಬಲವನ್ನು (ಅರ್ಜುನನು) ಪೂರ್ಣವಾಗಿ ಪ್ರದರ್ಶಿಸಿ ದ್ರೋಣಾಚಾರ್ಯನು ಸಂತೋಷಪಡುವಂತೆ ರಿಪುಕುರಂಗ ಕಂಠೀರವನಾದ ಅರ್ಜುನನು (ಪ್ರತಿಸೈನ್ಯವನ್ನು) ತಾಗಿದನು. ವ|| ಚಕ್ರವ್ಯೂಹದ ಬಾಗಿಲಿನಲ್ಲಿ ತಾನು ಪ್ರವೇಶಿಸುವುದಕ್ಕೆ ಅಡ್ಡವಾಗಿ ನಿಂತಿದ್ದ ಚಾಪಾಚಾರ್ಯನಾದ ದ್ರೋಣಾಚಾರ್ಯನನ್ನು ಚೆನ್ನಾಗಿ ಸೆರೆಹಿಡಿಯದೆ ವಿನಯಾಸ್ತ್ರವನ್ನೇ ಪ್ರಯೋಗಿಸಿ ನಮ್ರತೆಯನ್ನೆ ಮುಂದುಮಾಡಿಕೊಂಡು ಪ್ರದಕ್ಷಿಣನಮಸ್ಕಾರಮಾಡಿ ಮುಂದೆ ಹೋದನು. ೧೩೪. ಮನಗೊಳ್ಳುವಂತೆ (ಆಕರ್ಷಕವಾದ ರೀತಿಯಲ್ಲಿ ಪ್ರದಕ್ಷಿಣೆ ಮಾಡಿ ಹೋಗು ತಿರುವ ಅರ್ಜುನನನ್ನು ದ್ರೋಣಾಚಾರ್ಯರು ತಡೆದು 'ಎಲವೋ ಹೋಗಬೇಡ, ಹೋಗಬೇಡ, ನನ್ನೊಡನೆ ಯುದ್ಧಮಾಡುವುದಕ್ಕೆ ಹೆದರಿ ಹೋಗುತ್ತಿದ್ದೀಯೆ' ಎಂದರು. ಅರ್ಜುನನು ಆಚಾರ್ಯರನ್ನು ಕುರಿತು ಹೀಗೆಂದನು-'ನಿಮಗೆ ಹೆದರುವುದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy