SearchBrowseAboutContactDonate
Page Preview
Page 552
Loading...
Download File
Download File
Page Text
________________ ಏಕಾದಶಾಶ್ವಾಸಂ | ೫೪೭ ಮಿಂದು ಧವಳ ವಸನ ದುಕೂಲಾಂಬರ ಮಂಗಳ ವಿಭೂಷಣನುಂ ನಿರ್ವತಿ್ರತ ಸಂಧೋಪಾಸನನುಂ ಪರಿಸಮಾಪ್ತ ಜಪನುಮರ್ಚಿತ ಶಿತಿಕಂಠನುಮಾಹುತಿ ಹುತಾಗ್ನಿಹೋತ್ರನುಂ ಪೂಜಿತ ಧರಾಮರನುಂ ನೀರಾಜಿತ ರಥತುರಗನುಮಾಗಿ ರಜತ ರಥಮನೇಣಿ, ಸಂಗ್ರಾಮ ಭೂಮಿಯನೆಯ್ದವಂದು ಸಾಮಂತ ಚೂಡಾಮಣಿಯನಿನಿಸು ಮಾರ್ಕೊಂಡು ನಿಮ್ಮೊಡಂ ಸಿಂಧುರಾಜನಂ ಕಾವೊಡಮನೇಕ ಮೊಹರಚನೆಯೊಳಲ್ಲದೆ ಗೆಲಲ್ ಬಾರದೆಂದು ಚಕ್ರವ್ಯೂಹಮನಿದಿರೊಳೊಡ್ಡಿ ಸಕಳ ಸಾಮಂತ ಚಕ್ರಮನಿರಲ್ವೇಲ್ಲಿಗೆ ನಾಲ್ಕುಂ ಯೋಜನದ ಪದುಮವ್ಯೂಹದೊಳಂಗರಾಜ ಶಲ್ಯ ವೃಷಸೇನ ಕೃಪ ಕೃತವರ್ಮಾಶ್ವತ್ಥಾಮರಂ ದುರ್ಯೋಧನಂ ಬೆರಸಿರಿಸಿ ಮತ್ತಿತ್ತ ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲೊಳ್ ಬಾಘೀಕ ಸೋಮದತ್ತ ವಿಂದಾನುವಿಂದರೊಡನೆ ಸ೦ಸಕರ ನಿರಿಸಿ ಶಕಟವ್ಯೂಹದ ಪೆ ಅಗೆ ನಾಲ್ಕು ಯೋಜನದೊಳರ್ಧಚಂದ್ರವೂಹದೊಳಧಿಕ ಬಲರಪ್ಪ ಸೌಬಲ ದುಶ್ಯಾಸನಾದಿ ಪ್ರಧಾನ ವೀರಭಟ ಕೋಟಿಯ ನಡುವೆ ಸಿಂಧುರಾಜನನಿರಿಸಿ ಮೊದಲ ಚಕ್ರವ್ಯೂಹದ ಬಾಗಿಲೋಳ್ ಶರಾಸನಾಚಾರ್ಯ ನಿಂದನಿತ ಪಾಂಡವಬಲಮೆಲಮುಂ ವಿಕ್ರಮಾರ್ಜುನನುಂ ವಜ್ರಪಂಜರದಂತಭೇದಮಪ ವಜವೂಹಮನೊಡಿ ಧರ್ಮರಾಜನೊಡನೆ ಭೀಮ ನಕುಲ ಸಹದೇವ ಸಾತ್ಯಕಿ ಧೃಷ್ಟದ್ಯುಮ್ಮ ಘಟೋತ್ಕಚ ಪ್ರಮುಖ ನಾಯಕರ೦ ಪಟ್ಟು ದ್ರುಪದ ವಿರಾಟ ಶಿಖಂಡಿ (ತನ್ನ ಸ್ಥಿತಿಯನ್ನು ನಿಶ್ಚಯಿಸಿಕೊಂಡು ಚಿನ್ನದ ಕಲಶಗಳಲ್ಲಿ ತುಂಬಿದ ಮಂಗಳಜಲದಲ್ಲಿ ಸ್ನಾನಮಾಡಿ ಬಿಳಿಯ ರೇಷ್ಮೆಯ ಉಡುಪೇ ಮೊದಲಾದ ಮಂಗಳಾಭರಣಯುತನಾಗಿ ಸಂಧ್ಯಾವಂದನವನ್ನೂ ಜಪವನ್ನೂ ಮುಗಿಸಿ ಶಿವನನ್ನು ಆರಾಧಿಸಿ ಅಗ್ನಿಗಾಹುತಿಯನ್ನಿತ್ತು ಬ್ರಾಹ್ಮಣರನ್ನು ವಂದಿಸಿ ರಥ ಕುದುರೆಗಳಿಗೆ ಆರತಿಮಾಡಿ ಬೆಳ್ಳಿಯ ತೇರನ್ನು ಹತ್ತಿ ಯುದ್ಧರಂಗದ ಸಮೀಪಕ್ಕೆ ಬಂದನು. ಸಾಮಂತ ಚೂಡಾಮಣಿಯಾದ ಅರ್ಜುನನನ್ನು ಸ್ವಲ್ಪ ಎದುರಿಸಿ ನಿಲ್ಲಬೇಕಾದರೂ ಸೈಂಧವನನ್ನು ರಕ್ಷಿಸಬೇಕಾದರೂ ಅನೇಕ ವ್ಯೂಹರಚನೆಯಿಂದಲ್ಲದೆ ಗೆಲ್ಲಲು ಸಾಧ್ಯವಿಲ್ಲವೆಂದು ಚಕ್ರವ್ಯೂಹವನ್ನೇ ಮುಂಭಾಗದಲ್ಲಿ ಒಡ್ಡಿ ಸಾಮಂತರಾಜರ ಸಮೂಹವನ್ನು ಅಲ್ಲಿ ಇರಹೇಳಿದನು. ಅಲ್ಲಿಗೆ ನಾಲ್ಕು ಯೋಜನದ ದೂರದಲ್ಲಿದ್ದ ಪದ್ಮವ್ಯೂಹದಲ್ಲಿ ಕರ್ಣ, ಶಲ್ಯ, ವೃಷಸೇನ, ಕೃಪ, ಕೃತವರ್ಮಾಶ್ವತ್ಥಾಮರನ್ನು ದುರ್ಯೊಧನನೊಡನೆ ಇರಿಸಿದನು. ಮತ್ತೆ ಈ ಕಡೆ 'ನಾಲ್ಕು ಯೋಜನದ ಶಕಟವ್ಯೂಹದ ಬಾಗಿಲಿನಲ್ಲಿ ಬಾಹಿಕ ಸೋಮದತ್ತ ವಿಂದಾನುವಿಂದರೊಡನೆ ಸಂಸಪ್ತಕರನಿಟ್ಟನು. ಶಕಟವ್ಯೂಹದ ಹಿಂದೆ ನಾಲ್ಕು ಯೋಜನದಲ್ಲಿ ಅರ್ಧಚಂದ್ರವ್ಯೂಹದಲ್ಲಿ ಅಧಿಕಬಲರಾದ ಶಕುನಿ ದುಶ್ಯಾಸನನೇ ಮೊದಲಾದ ಪ್ರಧಾನ ನಾಯಕರ ಸಮೂಹದ ಮಧ್ಯದಲ್ಲಿ ಸಿಂಧುರಾಜನನ್ನು ಇರಿಸಿದನು. ಮೊದಲನೆಯ ಚಕ್ರವ್ಯೂಹದ ಬಾಗಿಲಿನಲ್ಲಿ ಚಾಪಾಚಾರ್ಯನಾದ ದ್ರೋಣನೇ ನಿಂತುಕೊಂಡನು. ಈ ಕಡೆ ಅರ್ಜುನನೂ ಪಾಂಡವಸೈನ್ಯವನ್ನೆಲ್ಲ ವಜ್ರಪಂಜರದಂತೆ ಭೇದಿಸುವುದಕ್ಕಾಗದಿರುವ ವಜ್ರವ್ಯೂಹವನ್ನೊಡ್ಡಿ ಧರ್ಮರಾಜನೊಡನೆ ಭೀಮ ನಕುಲ ಸಹದೇವ ಸಾತ್ಯಕಿ ಧೃಷ್ಟದ್ಯುಮ್ಮ ಘಟೋತ್ಕಚರೇ ಮುಖ್ಯರಾದ ನಾಯಕರನ್ನು ಇರಹೇಳಿ ದ್ರುಪದ ವಿರಾಟ ಶಿಖಂಡಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy