SearchBrowseAboutContactDonate
Page Preview
Page 534
Loading...
Download File
Download File
Page Text
________________ ಏಕಾದಶಾಶ್ವಾಸಂ | ೫೨೯ ಉll ಇತ್ತರಿಗಂಗಮಿತ್ರ ಜಯಮಪುದುಮತ್ತಮರರ್ಕಳಾರ್ದು ಸೂ ಸುತ್ತಿಗೆ ಪುಷ್ಪವೃಷ್ಟಿಗಳನೋಗರವೂಗಳ ಬಂಡನೆಯೆ ಪೀ | ರುಡವಂದುವಿಂದ್ರವನದಿಂ ಮಣಿದುಂಬಿಗಳಿಂದ್ರನೀಲಮಂ ಮುತ್ತುಮನೋಳಿಯೋಳಿಯೊಳ ಕೂದಲಲಿಕ್ಕಿದ ಮಾಲೆಯಂತೆವೋಲ್ |೮೧ ಕ೦ll ಧರಣೀಸುತನದಂ ದಿ | ಕರಿ ಕಡೆದುದು ನರಶರಂಗಳಿಂ ಭುವನಮುಮಿ || ನುರಿಯದಿರದಾನಡಂಗುವೆ ನಿರದೆಂಬವೋಲರ್ಕನಪರಜಳನಿಧಿಗೀಚಿದಂ || ೮೨ ವ|| ಆಗಳೆರಡುಂ ಪಡೆಗಳಪಹಾರಡೂರ್ಯಂಗಳಂ ಬಾಜಿಸಿ ತಂತಮ್ಮ ಬೀಡುಗಳೆ ಪೋಪುದುಂ ಸುಯೋಧನಂ ಭಗದತ್ತನ ಸಾವಿಂಗಲಲ್ಲು ತೊಟ್ಟ ಸನ್ನಣಮನಪೊಡಂ ಕಳೆಯದೆಯು ಮರಮನೆಗೆ ಪೋಗದ ಕುಂಭಸಂಭವನಲ್ಲಿಗೆ ವಂದುಮll ಮಸಕಂಗುಂದದ ಸುಪ್ರತೀಕ ಗಜಮಂ ಧಾತ್ರೀಸುತಂ ಕೀತಿ ಚೋ ದಿಸಿ ಭೀಮಂ ಗೆಲೆ ಮುಟ್ಟೆವಂದು ಹರಿಯುಂ ತಾನುಂ ಭರಂಗೆಯು ತ | ನೈಸಕಂಗಾಯದಧರ್ಮಯುದ್ಧದೆ ನರಂ ಕೊಲ್ವಲ್ಲಿ ಕಂಡಿಂತುಪೇ ಕ್ಷಿಸಿ ನೀಮುಂ ನಡೆ ನೋಡುತಿರ್ದರನೆ ಮತ್ತಿನ್ನಾರನಾಂ ನಂಬುವಂ || ೮೩ ಹರಿದುಹೋಗುವಂತೆ ಹೊಡೆಯಲು ದಿಕ್ಕರಿಯ ತಲೆಯೂ ಆತನ ತಲೆಯೂ ಕೈಗಳೂ ಭಾಗಮಾಡಿದಂತೆ ಆಶ್ಚರ್ಯಯುತವಾಗಿ ಜೊತೆಯಾಗಿಯೇ ಭೂಮಿಯ ಮೇಲೆ ಉರುಳಿದುವು. ೮೧, ಈ ಕಡೆ ಅರಿಗನಿಗೆ (ಅರ್ಜುನನಿಗೆ ಶತ್ರುಜಯವಾಗಲು ಆ ಕಡೆ ದೇವತೆಗಳು ಜಯಘೋಷಮಾಡಿ ಹೂಮಳೆಯನ್ನು ಸುರಿಸಿದರು. ಆ ಮಿಶ್ರಪುಷ್ಪಗಳ ವಾಸನೆಯನ್ನು ಪೂರ್ಣವಾಗಿ ಹೀರುತ್ತ ಇಂದ್ರನ ತೋಟವಾದ ನಂದನವನದಿಂದ ಮರಿದುಂಬಿಗಳು ಇಂದ್ರನೀಲಮಣಿರತ್ನವನ್ನೂ ಮುತ್ತುಗಳನ್ನೂ ದಂಡದಂಡೆಯಾಗಿ ಸಾಲಾಗಿ ಪೋಣಿಸಿ ಜೋಲುಬಿಟ್ಟ ಹಾರದಂತೆ ಜೊತೆಯಲ್ಲಿಯೇ ಬಂದುವು. ೮೨. ಅರ್ಜುನನ ಬಾಣದಿಂದ ಭೂಪುತ್ರನಾದ ಭಗದತ್ತನು ನಾಶವಾದನು. ದಿಗ್ಗಜವು ಕೆಳಗುರುಳಿತು. ಪ್ರಪಂಚವು ಇನ್ನು ಸುಟ್ಟು ಹೋಗದೇ ಇರುವುದಿಲ್ಲ: ನಾನು ಇಲ್ಲಿರದೆ ಮರೆಯಾಗುತ್ತೇನೆ ಎನ್ನುವ ಹಾಗೆ ಸೂರ್ಯನು ಪಶ್ಚಿಮ ಸಮುದ್ರಕ್ಕಿಳಿದನು. ವ|| ಆಗ ಎರಡು ಸೈನ್ಯಗಳೂ ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಸೂಚಿಸುವ ವಾದ್ಯಗಳನ್ನು ಬಾಜಿಸಲು ತಮ್ಮತಮ್ಮಶಿಬಿರಕ್ಕೆ ಹೋದುವು. ದುರ್ಯೊಧನನು ಭಗದತ್ತನ ಸಾವಿಗೆ ದುಃಖಪಟ್ಟು ಧರಿಸಿದ ಯುದ್ಧಕವಚವನ್ನು ಕಳೆಯದೆಯೂ ಅರಮನೆಗೆ ಹೋಗದೆಯೂ ದ್ರೋಣಾಚಾರ್ಯರ ಹತ್ತಿರಕ್ಕೆ (ಬಳಿಗೆ) ಬಂದನು-೮೩. ಮದವಡಗದ ಸುಪ್ರತೀಕಗಜವನ್ನು ಭಗದತ್ತನು ಭಯಶಬ್ದಮಾಡುತ್ತ ರೇಗಿಸಿ ಮುಂದೆ ನುಗ್ಗಿಸಿ ಭೀಮನನ್ನು ಗೆಲ್ಲಲು ಕೃಷ್ಣನೂ ಅರ್ಜುನನೂ ಹತ್ತಿರಕ್ಕೆ ಬಂದು ವೇಗದಿಂದ (ತನ್ನ ಮಾತಿನಂತೆ ನಡೆದುಕೊಳ್ಳದೆ ಯುದ್ಧ ಮಾಡುವುದಿಲ್ಲವೆಂಬ ತನ್ನ ಪ್ರತಿಜ್ಞೆಯನ್ನು, ಕಾರ್ಯವನ್ನು, ಮಾತನ್ನು ಪರಿಪಾಲಿಸದೆ) ಅಧರ್ಮಯುದ್ಧದಲ್ಲಿ ಅರ್ಜುನನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy