SearchBrowseAboutContactDonate
Page Preview
Page 533
Loading...
Download File
Download File
Page Text
________________ ೫೨೮ / ಪಂಪಭಾರತಂ ಕಂ।। ಉ|| ಇಡುವುದುಮದು ವಿಲಯಾಗಿಯ ಕಿಡಿಗಳನುಗುಲುತ್ತುಮೆಯ್ದವರ್ಪುದುಮಿದಿರಂ | ವ|| ಆಗಳ್ ವಿಕ್ರಾಂತತುಂಗಂ ಚೋದ್ಯಂಬಟ್ಟಿದೇನೆಂದು ಬೆಸಗೊಳೆ ಚಂ। ಕಂ।। ನಡೆದಜರನುರದಿನಾಂತೊಡೆ ತುಡುಗೆವೊಲೆಸೆದಿರ್ದುದಂಕುಶಂ ಕಂಧರದೊಳ್ || 22 ಇದು ಪಂತಲು ಭೂತಲಮನಾಂ ತರಲಾದಿ ವರಾಹನಾದನಂ ದದಲ್ಲಿ ವಿಷಾಣಮಂ ಬಡೆಯವಾ ವಸುಧಾಂಗನೆಗಿತ್ತನೀತನಾ | ಸುದತಿಯ ಪೌತ್ರನಾಕೆ ಕುಡೆ ಬಂದುದಿವಂಗೆನಗಲ್ಲದಾನಲಾ ಗದುದನಾಂತನಿಂ ತಳವುದೀ ಕರಿ ಕಂಧರಮಂ ಗುಣಾರ್ಣವಾ || 20 ಎಂಬುದುಮೊಂದ ದಿವ್ಯಶರದಿಂ ಶಿರಮಂ ಪತಿಯೆಚೊಡಾತನೊ ತಂಬದಿನಾಂತೊಡಾಂ ಬಳದೆ ತಪ್ಪಿದೆನೆಂದು ಕಿರೀಟಿ ತನ್ನ ಬಿ | ಲ್ಲಂ ಬಿಸುಟಿರ್ದೊಡಚ್ಚುತನಿದೇತರಿನಾಕುಲಮಿರ್ದೆ ನೋಡಿದಂ ತೆಂಬುದುಮೆಚ್ಚನಂತೆರಡು ಕೆಯ್ದಳುಮಂ ಮುಳಿಸಿಂ ಗುಣಾರ್ಣವಂ || ೭೯ ಎಚ್ಚವನ ತಲೆಯುಮಂ ಪತಿ ಯೆಕ್ಕೊಡೆ ದಿಕ್ಕರಿಯ ತಲೆಯುಮಾತನ ತಲೆಯುಂ | ಪಚ್ಚಿಕ್ಕಿದಂತೆ ಕೆಯ್ದಳು ಮಚ್ಚರಿಯಪ್ಪಿನೆಗಮೊಡನುರುಳುವು ಧರೆಯೊಳ್ || ೮೦ ಕೊಡಲ್ಪಟ್ಟ ದಿವ್ಯಾಂಕುಶವನ್ನು ತೆಗೆದುಕೊಂಡು ೭೭. ಎಸೆಯಲು ಅದು ಪ್ರಳಯಾಗ್ನಿಯ ಕಿಡಿಯನ್ನು ಉಗುಳುತ್ತ ಸಮೀಪಕ್ಕೆ ಬರಲು ಕೃಷ್ಣನು ಎದುರಾಗಿ ಹೋಗಿ ಎದೆಯಿಂದ ಅದನ್ನು ಎದುರಿಸಿದನು. ಆ ಅಂಕುಶವು ಅವನ ಕತ್ತಿನಲ್ಲಿ ಆಭರಣದ ಹಾಗೆ ಪ್ರಕಾಶಿಸಿತು. ವ|| ಆಗ ವಿಕ್ರಾಂತತುಂಗನಾದ ಅರ್ಜುನನು ಆಶ್ಚರ್ಯಪಟ್ಟು ಇದೇನೆಂದು ಪ್ರಶ್ನೆ ಮಾಡಿದನು-೭೮. ಇದು ಬೇರೆಯಲ್ಲ: ಭೂಮಂಡಲವನ್ನು ತರಲು ನಾನು ಆದಿವರಾಹನಾದೆನು. ಇದು ಅದರ ಕೋರೆಹಲ್ಲು. ಬಳಿಕ ಅದನ್ನು ನಾನು ಭೂದೇವಿಗೆ ಕೊಟ್ಟೆನು. ಈತನು ಆ ಭೂದೇವಿಯ ಮೊಮ್ಮಗ, ಅವಳು ಕೊಡಲು ಇವನಿಗೆ ಬಂದಿತು. ನಾನಲ್ಲದೆ ಮತ್ತಾರೂ ಇದನ್ನು ಎದುರಿಸಲಾಗದುದರಿಂದ ನಾನು ಎದುರಿಸಿದೆನು. ಅರ್ಜುನಾ, ಇನ್ನು ಈ ಆನೆಯ ಕತ್ತನ್ನು ಕತ್ತರಿಸು ಎಂದನು. ೭೯. ಒಂದೆ ದಿವ್ಯಾಸ್ತ್ರದಿಂದ ಆನೆಯ ತಲೆಯನ್ನು ಹರಿದುಹೋಗುವ ಹಾಗೆ ಹೊಡೆದನು. ಆ ಭಗದತ್ತನು ಅದನ್ನು ಬಲಾತ್ಕಾರದಿಂದ ತಾನು ಎದುರಿಸಿದನು. ಅರ್ಜುನನು ನಾನು ವ್ಯರ್ಥವಾಗಿ ಪ್ರಯೋಗಮಾಡಿದೆ (ಆನೆಯ ತಲೆಯನ್ನೂ ಭಗದತ್ತನ ತಲೆಯನ್ನೂ ಒಟ್ಟಿಗೆ ಹೊಡೆಯಬೇಕಾಗಿದ್ದಿತು) ಎಂದು ಬಿಲ್ಲನ್ನು ಬಿಸುಟಿರಲು ಕೃಷ್ಣನು ಇದೇಕೆ ವ್ಯಾಕುಲನಾಗಿದ್ದೀಯೆ? 'ನೋಡು ಇದು ಹೀಗೆ' ಎಂದು ತೋರಿಸಿದನು. ಅರ್ಜುನನು ಕೋಪದಿಂದ ಭಗದತ್ತನ ಎರಡು ಕೈಗಳನ್ನು ಹೊಡೆದನು. ೮೦. ಕೈಗಳನ್ನು ಕತ್ತರಿಸಿ ಅವನ ತಲೆಯನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy