SearchBrowseAboutContactDonate
Page Preview
Page 503
Loading...
Download File
Download File
Page Text
________________ ೪೯೮ / ಪಂಪಭಾರತಂ ಮ|| ಕಂ ಬಿಸುಟೆಂ ಬಿಲ್ಲನದೇವುದೆಂದು ಕಡುಪಿಂದೀಡಾಡಿ ಸೂರ್ಯಪ್ರಭಾ ಪ್ರಸರಂಗಳ ಮಸುಳ್ಳನ್ನೆಗಂ ಪೊಳೆವುದೊಂದಂ ಶಕ್ತಿಯಂ ಕೊಂಡಗು ರ್ವಿಸಿ ಗಾಂಗೇಯನನಿಟ್ಟನಿಡದನೀರಯಸ್ಮದಿಂದೆಚ್ಚು ಖಂ ಡಿಸಿ ಪೇರಾಳ ತಿಳಿದಿಕ್ಕಿದಂತೆ ತಲೆಯಂ ಪೋಗಚ್ಚನಾ ಶ್ವೇತನಾ || ಶ್ವೇತನ ಬೀರಮನುಪಮಾ ತೀತಮನೀ ಧರೆಗೆ ನೆಗಟ ನೆಗಟ್ಟುದನಿದನಾಂ | ಪಾತಾಳಕ್ಯಪುವನಂ ಬೀ ತಂದೊಳೆ ದಿನಪನಪರಜಲನಿಧಿಗಿಂದಂ || ೧೨೩ ܦܘ ವ|| ಆಗಳೆರಡುಂ ಪಡೆಯ ನಾಯಕರಪಹಾರತೂರ್ಯಂಗಳಂ ಬಾಜಿಸಿ ತಮ್ಮ ತಮ್ಮ ಬೀಡುಗಳ್ಳಿ ಪೋದರನ್ನೆಗಮಿತ್ತ ಸಂಸಪ್ತಕಬಲಮನೆಲ್ಲಮನೊಂದೆ ರಥದೊಳಾದಿತ್ಯ ನಸುರರನದಿರ್ಪುವಂತಾಟಂದು ವಿಕ್ರಮಾರ್ಜುನನುಮರಾತಿಕಾಳಾನಳನುಮತಿರಥ ಮಥನನುಂ ರಿಪುಕುರಂಗಕಂಠೀರವನುಂ ಸಾಹಸಾಭರಣನುಮಮ್ಮನ ಗಂಧವಾರಣನುಂ ಪಡಮಚ್ಚೆಗಂಡನುಂ ಪರಸೈನ್ಯಭೈರವನುವೆಂಬ ಪೆಸರ್ಗಳನನ್ವರ್ಥಂ ಮಾಡಿ ಶೂರನೂ ಇದ್ದಾನೆಯೇ? ೧೨೩. ಇದೋ ಬಿಲ್ಲನ್ನು ಬಿಸುಟಿದ್ದೇನೆ. ಅದರಿಂದೇನಾಗಬೇಕು ಎಂದು ವೇಗದಿಂದ ಎಸೆದು ಸೂರ್ಯಕಾಂತಿ ಸಮೂಹವನ್ನೂ ಮಸಕುಮಾಡುವಷ್ಟು ಕಾಂತಿಯುಕ್ತವಾದ ಒಂದು ಶಕ್ತಾಯುಧವನ್ನು ತೆಗೆದುಕೊಂಡು ಆರ್ಭಟಮಾಡಿ ಹೊಡೆದನು. ಆ ಹಿರಿಯನು (ಭೀಷ್ಮನು) ಅದನ್ನು ಹತ್ತು ಬಾಣಗಳಿಂದ ಹೊಡೆದು ಕತ್ತರಿಸಿ ಆ ಶ್ವೇತನ ತಲೆಯನ್ನು ತಿರುಪಿ (ಜಿಗಟಿ) ಕತ್ತರಿಸಿದಂತೆ ಹೊಡೆದು ಹಾಕಿದನು. ೧೨೪. ಈ ಲೋಕದಲ್ಲಿ ಪ್ರಸಿದ್ಧವಾಗಿದ್ದು ಹೋಲಿಕೆಗೂ ಮೀರಿದ್ದ ಈ ಶ್ವೇತನ ಪರಾಕ್ರಮವನ್ನು ನಾನು ಪಾತಾಳಕ್ಕೂ ತಿಳಿಸುತ್ತೇನೆ ಎನ್ನುವ ರೀತಿಯಲ್ಲಿ ಸೂರ್ಯನು ಪಶ್ಚಿಮಸಮುದ್ರಕ್ಕೆ ಇಳಿದನು. ವll ಆಗ ಎರಡು ಸೈನ್ಯದ ನಾಯಕರೂ ಯುದ್ಧವನ್ನು ನಿಲ್ಲಿಸಲು ಸೂಚಕವಾದ ವಾದ್ಯಗಳನ್ನು ಬಾಜಿಸಿ ತಮ್ಮ ತಮ್ಮ ಬೀಡುಗಳಿಗೆ ಹೋದರು. ಅಷ್ಟರಲ್ಲಿ ಈ ಕಡೆ ಸಂಸಪ್ತಕ ಸೈನ್ಯವೆಲ್ಲವನ್ನೂ ಒಂದೇ ತೇರಿನಲ್ಲಿ ಕುಳಿತು ಸೂರ್ಯನು ರಾಕ್ಷಸರನ್ನು ಅಡಗಿಸುವಂತೆ ಶತ್ರುಗಳ ಮೇಲೆ ಬಿದ್ದು ಅರ್ಜುನನೂ ಕೂಡಿ ತನ್ನ ಅರಾತಿಕಾಳಾನಳ, ಅತಿರಥಮಥನ, ರಿಪುಕುರಂಗಕಂಠೀರವ, ಸಾಹಸಾಭರಣ, ಗಂಧವಾರಣ, ಪಡೆಮೆಚ್ಚಗಂಡ, ಪರಸೈನ್ಯಭೈರವ ಎಂಬ ತನ್ನ ಹೆಸರುಗಳನ್ನು ಸಾರ್ಥಕವಾಗುವಂತೆ (ಅರ್ಥಕ್ಕನುಗುಣವಾಗುವಂತೆ) ಮಾಡಿದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy