________________
ದಶಮಾಶ್ವಾಸಂ / ೪೭ ವ|| ಎಂದು ತನ್ನಂ ನೋಯ ನುಡಿದೊಡೆ ಸಿಂಧುಪುತ್ರನಿಂತೆಂದಂ
ಮll.
ನಿನಗೇನೆಂದೊಡಮಂದುದೊಪ್ಪಿದಪುದಂತೇಕೆನ್ನನಿ ಶರಾ ಸನದೂಳ ಶೂಲಕಪಾಲಪಾಣಿ ದಯೆಯಿಂ ಬಂದಿರ್ದನು೦ತಾನುಮಿಂ | ತಿನಿತಂ ನೀಂ ನುಡಿವನ್ನೆಗಂ ತಡವನೇ ತ್ರೈಲೋಕ್ಯನಾಥಂ ಕಣಾ ವಿನಮನಸ್ತಕನಾದೆನಣುವೊಡೆ ನೀನೀ ದೇವನಂ ತೋಜುವೈ | ೧೨೦
ಕಂ!
ಇಳವಂತು ನಿನಗೆ ಮನದೊಳ್ . ತಳಸಲವುಂಟಪೊಡೆಲಿ ದೇವೇಶನನೇಂ | ಸೆವಿಡಿದೆ ತೋಲಗು ದೇವನ ಮಜಯಂ ಬಟಿಕಳೆಯಲುಮನಗಂ ನಿನಗಂ ||
ವ|| ಎಂಬುದುಂ ಶ್ವೇತನಿಂತೆಂದಂ
ಉll.
ಕಾಗೆವೊಲಿಂತು ಬಿಟ್ಟೆ ಕರಮಂಜುವಿರಂಜಲಿಮಾ ತ್ರಿಣೇತ್ರನಂ ಪೋ ಗೆಡೆಗೊಂಡು ಕಾದುವನೆ ಕಾದೆನಿದಂ ಹರನಿತ್ತನೆಂದು ನೋ | ಡಾಗಡುಮಟ್ಟಿಯಿಂ ಪಿಡಿವನಕ್ಕಟ ನಿಮ್ಮನದಿರ್ಪುವಲ್ಲಿ ಚಾ ನಾಗಮಮೇವುದಂತೆನಗೆ ಬಿಲ್ವರಮಾಜಿಯೋಣಂಪ ಗಂಡರಾರ್ || ೧೨೨
ಮಾಡಿ ಬಂದೆ. ನನಗುಂಟಾದ ಯುದ್ಧೋತ್ಸಾಹವನ್ನು ಕೆಡಿಸಿ ನಿಮ್ಮ ಪರಾಕ್ರಮವನ್ನು ಹಿಂದುಮಾಡಿ ನೀವೂ ಹೇಗೆ ಧೈರ್ಯಹೀನರಾಗಿದ್ದೀರಿ. ಇನ್ನು ಮೇಲೆ ಪರಾಕ್ರಮಶಾಲಿಗಳನ್ನು ಯಾರನ್ನಾದರೂ ಹೇಗೆ ನಂಬುವುದು? ವು ಎಂದು ತನಗೆ ನೋವುಂಟಾಗುವ ಹಾಗೆ ನುಡಿಯಲು ಭೀಷ್ಮನು ಹೇಳಿದನು - ೧೨೦. ನೀನು ಏನು ಹೇಳಿದರೂ ನಿನಗೆ ಒಪ್ಪುತ್ತದೆ. ಏಕೆನ್ನುವೆಯಾ? ನಿನ್ನ ಈ ಬಿಲ್ಲಿನಲ್ಲಿರುವ ಶೂಲಕಪಾಲಪಾಣಿಯಾದ ಈಶ್ವರನು ದಯೆಯಿಂದ ಕಾಣಿಸಿಕೊಂಡಿದ್ದಾನೆ. ಹಾಗಿಲ್ಲದ ಪಕ್ಷದಲ್ಲಿ ನೀನು ಇಷ್ಟು ಹರಟುವವರೆಗೆ ತಡೆಯುತ್ತಿದ್ದೆನೇ ? ಶಿವನು ಮೂರುಲೋಕದ ಒಡೆಯನಲ್ಲವೇ? ಆದುದರಿಂದ ನಮಸ್ಕಾರ ಮಾಡಿದೆ. ನಾನು ಯುದ್ಧ ಮಾಡುವುದಕ್ಕೆ ಬರಲು ನೀನು ಈಶ್ವರದೇವನನ್ನು ತೋರಿಸುತ್ತೀಯೆ. ೧೨೧. ನಿನಗೆ ಮನಸ್ಸಿನಲ್ಲಿ ಯುದ್ಧಮಾಡುವ ನಿಶ್ಚಯವೇ ಇದ್ದರೆ ದೇವಶ್ರೇಷ್ಠನಾದ ಈಶ್ವರನನ್ನೇಕೆ ಮರೆಹಿಡಿದಿದ್ದೀಯೆ? ದೇವನ ಆಶ್ರಯವನ್ನು ಬಿಟ್ಟು ಕಳೆ. ಬಳಿಕ ನನಗೂ ನಿನಗೂ ಇರುವ ಅಂತರವನ್ನು ತಿಳಿಯಲು ಸಾಧ್ಯವಾಗುತ್ತದೆ. ವl ಎನ್ನಲು ಶ್ವೇತನು ಹೀಗೆಂದನು. ೧೨೨. ಕಾಗೆಯ ಹಾಗೆ ಬಿಲ್ಲಿಗೆ ಹೆದರುತ್ತೀರಿ; ಹೆದರಬೇಡಿ, ಛೀ ಆ ಮುಕ್ಕಣ್ಣನನ್ನು ಆಶ್ರಯಿಸಿ ಕಾದುತ್ತೇನೆಯೆ? ನಾನು! ಇಲ್ಲ, ಇದು ಈಶ್ವರದತ್ತನೆಂಬ ಪ್ರೀತಿಯಿಂದ ಮಾತ್ರ ಇದನ್ನು ಯಾವಾಗಲೂ ಧರಿಸಿದ್ದೇನೆ. ಅಯ್ಯೋ ನಿಮ್ಮನ್ನು ಅಡಗಿಸುವುದಕ್ಕೆ ಧನುರ್ವಿದ್ಯೆ ತಾನೆ ಏಕೆ ನನಗೆ? ಅಲ್ಲದೆ ನಾನು ಬಿಲ್ಲನ್ನು ಹಿಡಿದರೆ ನನ್ನನ್ನು ಪ್ರತಿಭಟಿಸುವ