SearchBrowseAboutContactDonate
Page Preview
Page 492
Loading...
Download File
Download File
Page Text
________________ ದಶಮಾಶ್ವಾಸಂ / ೪೮೭ ಸೂಸುವ ಕೆನ್ನೆತ್ತರ್ ಕಬಲ್ಲುದಿರ್ವ ಸಕ್ಕದ ಸಿಪ್ಪುಗಳುಂ ಸಿಡಿಲು ಜೀತೇಲ್ವ ಕೋಲ್ಕಳುಮಗುರ್ವ೦ ಪಡೆಯಚಂ|| ನಡುವ ಸರಲ್ಲಿ ಮೆಟ್ರೊಳಗಡಂಗುವ ಸಂಕುಗೆ ದಿಂಕುಗೊಳ್ಳ ಕ ಕಡೆಗಿದಿರುರ್ಚುವಿಟ್ಟಿಗಿದಿರಾನೆಯ ಕೋಲ್ಕಳ ಕೊಳ್ಳೆ ನೊಂದು ಬಾ | ಮೈಡದಿನಿಸಪ್ರೊಡಂ ಪಳಯದಳದೆ ಪಾವಿನಲಿಟ್ಟವೋಲ್ ಪೊಡ ರ್ಪುಡುಗದೆ ಬಿಟ್ಟುವಿರ್ದ ನೆಲೆಯಿಂ ಕಲವುನದ ಗಂಧಸಿಂಧುರಂ || ೯೪ ಕಂ ಪಾಳುವ ಪಾಕುಂಬಳ ಕೊಳೆ ಜೀಜುಂಬರಕೆ ತಲೆ ಸಿಡಿಲೊಡಮಾ ಕಾ | ಯಾಣದ ಹರಣಂಗಯ್ಯುವು ಜಾಜಿಲ್ಲದೆ ಜೋದರಟ್ಟೆಗಳ್ ಕೆಲವಾಗಳ್ || ಚಂil ಕಣಕೆನೆ ಚಕ್ರತೀವ್ರ ಹತಿಯಿಂ ತಲೆ ಪೋದೊಡೆ ಜೋದರಟ್ಟೆ ಸಂ ದಣಿಸಿದ ಬಂಧದಿಂ ಬಿಸುಗೆಯೊಳ್ ನೆಲಸಿರ್ದಸೆದಾಡೆ ನಟ್ಟ ಕೂ| ರ್ಗಸವೆರಸಿರ್ದ ಕೂರ್ಗಣೆಗಳುಚ್ಚಳಿಸುತ್ತಿರೆ ಸುಯ್ಯು ಪುಣ್ಯತಿಂ ಥಿಣಿಗಳಿನಂದಗುರ್ವುವೆರಸಾಡಿದುವೊಂದರಡಾನೆಯಟ್ಟೆಗಳ್ || ವಗಿ ಅಂತರಡುಂ ಬಲದ ಕರಿಘಟೆಗಳೊಂದೊಂದಲೊಳ್ ತಾಗಿ ತಟ್ಟಲಿಯ ಬಿಸುನೆತ್ತರರ್ದಿಗಳುರ್ವಿ ಪಾಯೆ ಪೇರರ್ವಿಗಳೊರಸು ಜಾಜಿನ ಪರ್ವತಗಳಂತೆ ಕಡೆದಟ್ಟಿ ತಟ್ಟಿದಾಗ ೯೫ ವಿದಾಯಮಾಡಿಸಿದಾಗ ಎರಡು ಕಡೆಯ ತುಂಟಾನೆಗಳೂ ಕೊಲ್ಲುವ ವಿಧಾನಗಳಲ್ಲಿ ಧನುರ್ಧರರು ಕತ್ತಿಯಿಂದ ಇರಿಯುವಂತೆ ಇರಿಯಲು ಚೆಲ್ಲುವ ರಕ್ತವೂ ಸಡಿಲವಾಗಿ ಕೆಳಗೆ ಬೀಳುವ ಕಟವಾಯಿಚಪ್ಪುಗಳೂ ಜೀರೆಂದು ಸಿಡಿಯುವ ಕೊಂಬುಗಳೂ ಭಯವನ್ನುಂಟುಮಾಡಿದುವು. ೯೪. ಶರೀರದೊಳಕ್ಕೆ ನಾಟಿಕೊಳ್ಳುವ ಬಾಣಗಳಿಗೂ ಮೆಯ್ಯೋಳಕ್ಕೆ ಹೋಗಿ ಅಡಗಿಕೊಳ್ಳುವ ಕಠಾರಿಗಳಿಗೂ ಹಾರಿ ಬರುವ ಮುಳ್ಳು ಕೋಲು ಗಳಿಗೂ ಎದುರಾಗಿ ಚುಚ್ಚಿ ಬರುತ್ತಿರುವ ಈಟಿಗಳಿಗೂ ಆನೆಯ ಕೊಂಬುಗಳ ತಿವಿತಕ್ಕೂ ನೊಂದು ಕೂಗಿಕೊಳ್ಳದೆ ಸ್ವಲ್ಪವೂ ಹೆದರದೆ ಶಕ್ತಿಗುಂದದೆ ಹಾವಿನಿಂದ ಹೊಡೆದ ಹಾಗೆ ಸಾಮರ್ಥ್ಯವನ್ನು ಕಡಿಮೆಮಾಡಿಕೊಳ್ಳದೆ ಕೆಲವು ಮದ್ದಾನೆಗಳು ತಾವಿದ್ದ ಸ್ಥಳ ದಿಂದಲೇ ಉರುಳಿದುವು. ೯೫. ಹಾರಿ ಬರುವ ಚಕ್ರಾಯುಧವು ತಲೆಗಳನ್ನು ಕತ್ತರಿಸಿ ಜೀರೆಂದು ಶಬ್ದಮಾಡುತ್ತ ಆಕಾಶಕ್ಕೆ ಸಿಡಿದರೂ ಮಾವಟಿಗರ ಕೆಲವು ಮುಂಡಗಳು ಆಗ ಉತ್ಸಾಹಗುಂದದೆ ಹಿಂಜರಿಯದೆ ಶತ್ರುಗಳ ಪ್ರಾಣಾಪಹಾರ ಮಾಡಿದುವು. ೯೬. ಹರಿತವಾದ ಚಕ್ರಾಯುಧದ ಪೆಟ್ಟಿನಿಂದ ತಲೆಗಳು ಕಣಕ್ಕೆಂದು ಕತ್ತರಿಸಿ ಹೋದರೂ ಮಾವಟಿಗರ ಮುಂಡಗಳು ಗುಂಪಾಗಿ ಸೇರಿ ಅಂಬಾರಿಯಲ್ಲಿಯೇ ಇದ್ದು ಸೊಗಸಾಗಿ ನೆಗೆದು ಕುಣಿದುವು. ಹರಿತವಾದ ಬಾಣಗಳು ನಾಚಿಕೊಂಡಿದ್ದರೂ ತೀವ್ರ ಬಾಣಗಳು ಮೇಲಕ್ಕೆದ್ದು ಹಾರುತ್ತಿದ್ದರೂ ಆರುತ್ತಿದ್ದ ಹುಣ್ಣಿನ ಸಮೂಹಗಳು ಭಯಂಕರವಾಗಿ ಕಾಣುತ್ತಿದ್ದರೂ ಒಂದೆರಡು ಆನೆಯ ಮುಂಡಗಳು ಅದ್ಭುತವಾಗಿ ಕುಣಿದಾಡಿದುವು. ವ|| ಹಾಗೆ ಎರಡು ಸೈನ್ಯದ ಆನೆಯ ಸಮೂಹಗಳು ತಗುಲಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy