________________
೪೮೬ | ಪಂಪಭಾರತ ಮ|| ಉಡಿದಿರ್ದಚಟಿದೀಸು ತಟ್ಟಿದ ನೊಗಂ ಜೀು ಚಕ್ರಂ ಸಿಡಿಲ್
ಪೊಡೆದಂತೂರ್ಮೆಯ ಸೂಸಿ ಪಾಳದ ಮಡಂ ನುರ್ಗಾದ ಕೀಲ್ ಸಾಯಕಂ | ನಡೆ ನೊಂದಯ್ಕೆ ಸುರುಳುರುಳ ತುರಗಂ ಸುರ್ಕಿದ್ರ ಸೂತಂ ಕಡಲ್ ಕಡಲಂ ಮುಟ್ಟಿ ತೆರಳ್ತ ನೆತ್ತರ ಪೊನಲ್ ಕಸ್ಕೊಂಡುದುಗ್ರಾಜಿಯೊಳ್ || ೯೧
ವ|| ಅಂತು ಪತ್ತೆಂಟು ನೆತ್ತರ ಕಡಲ್ ಕಡಲನಟ್ಟೆಯುಂ ವರೂಥಯೂಥಂಗಳಲ್ಲಿ ಮೆಟ್ಟಿದಂತಾದಾಗಳ್ಉll ಇಕ್ಕಿದ ಲೋಹವಕ್ಕರೆಯ ಕರ್ಪುಗಳಿಂ ಕವಿತರ್ಪ ವಿಂಧ್ಯ ಕೈ
ಲಕೃಣೆಯಾಗೆ ಜೋದರಿಸುವಂಬಿನ ಬಲ್ಬರಿ ತಿಣಮಾಗಿ ಕ | ಹೈಕು ವಿರೋಧಿ ಸಾಧನ ಘಟಾಳಿಯನೋಡಿಸಲಾಗಳಾರ್ದು ಬಿ
ಟ್ರಕ್ಕಿದರುy ಸಿಂಧುರ ಘಟಾವಳಿಯಂ ಮುಳಿಸಿಂ ನಿಷಾದಿಗಳ್ || ೯೨ ಶಾll ಆದಿತ್ಯಂ ಮಸುಳ್ಳನ್ನೆಗಂ ಧ್ವಜ ಘಟಾಟೋಪಂಗಳಿಂದಂ ಲಯಾಂ
ಭೋದಂಗಳ ಕವಿವಂತವೋಲ್ ಕವಿವುದುಂ ಕಾಲ್ಕಾಪು ಕಾಲ್ದಾಪಿನೊಳ್ | ಜೋದರ್ ಜೋದರೊಳಾನಯಾನೆಯೋಳಗುರ್ವಪನ್ನೆಗಂ ಕಾದ ಕ
ಣ್ಣಾದಂ ಚೆಲ್ವೆಸೆದತ್ತು ಮೂಜು ನೆಲೆಯಿಂ ಮಾದ್ಯದ್ಭಜೇಂದ್ರಾಹವಂ | ೯೩
ವ|| ಅಂತಾ ದಂತಿಘಟಿಗಳನಾರೂಹಕರ್ ತೂಕೊಟೊಂದೊಂದರ್ಕೆ ಮೊಗಂಬುಗಿಸಿದಾಗಳುಭಯವ್ಯಾಳದಂತಿ ವಧ್ಯಕ್ರಮಂಗಳೊಳ್ ಭಾರ್ಗವ ಸುರಿಗಿಳಿವಂತಿಕೆಯ ಮಾಡುತ್ತಿರಲು ೯೧. ಒಡೆದುಹೋದ ಅಚ್ಚಿನ ಮರವೂ ನಾಶವಾದ ಇರಚಿನ ಮರವೂ ತಗ್ಗಿಹೋದ ನೊಗವೂ ಜೀರೆಂದು ಶಬ್ದಮಾಡುತ್ತಿರುವ ಚಕ್ರಗಳೂ ಸಿಡಿಲು ಹೊಡೆದ ಹಾಗೆ ಒಂದೇ ಸಲ ಹಾರಿದ ಪಾರೆಯ ಮರವೂ ಜಜ್ಜಿಹೋದ ಕೀಲೂ, ಬಾಣವು ನಾಟಲಾಗಿ ನೊಂದು ಸಂಪೂರ್ಣವಾಗಿ ಸೊರಗಿಕೊಂಡು ಬಿದ್ದ ಕುದುರೆಯೂ ಸಮುದ್ರವು ಸಮುದ್ರವನ್ನು ಮುಟ್ಟುವಂತೆ ಹರಿದ ರಕ್ತಪ್ರವಾಹವೂ ಯುದ್ಧಭೂಮಿಯಲ್ಲಿ ಭಯಂಕರವಾಗಿ ಕಂಡವು. ವ ಹಾಗೆ ಹತ್ತೆಂಟು ಸಮುದ್ರವನ್ನು ಹಿಮ್ಮೆಟ್ಟಿಸಲು ರಥಸಮೂಹಗಳು ಸಂಪೂರ್ಣವಾಗಿ ನಾಶವಾದವು. ೯೨. ತೊಡಿಸಿದ ಗುಳದಿಂದ ಕೂಡಿದ ಕಪ್ಪುಬಣ್ಣದ ಆನೆಗಳು ಮೇಲೆ ಕವಿದುಬೀಳುವ ವಿಂಧ್ಯಪರ್ವತಕ್ಕೆ ಸಮಾನವಾಗಿರಲು ಮಾವಟಗರು ಪ್ರಯೋಗಿಸುವ ಬಾಣದ ಬಲವಾದ ಮಳೆಯು ಅಧಿಕವಾಗಿ ಕೈಮೀರಿ ಶತ್ರುಪಕ್ಷದ ಆನೆಯ ಸಮೂಹವನ್ನು ಓಡಿಸಲು ಆಗ ಘಟ್ಟಿಯಾಗಿ ಕೂಗಿಕೊಂಡು ಮಾವಟಿಗರು ಭಯಂಕರವಾದ ಆನೆಯ ಸಮೂಹವನ್ನು ಭೂಬಿಟ್ಟರು. ೯೩. ಸೂರ್ಯನು ಕಾಂತಿಹೀನನಾಗುವ ಹಾಗೆ ಧ್ವಜದಿಂದ ಕೂಡಿದ ಆನೆಗಳು ವಿಜೃಂಭಣೆಯಿಂದ ಪ್ರಳಯಕಾಲದ ಮೋಡಗಳು ಮುತ್ತುವ ಹಾಗೆ ಮುತ್ತಲು ಪದಾತಿ ಸೈನ್ಯವು ಪದಾತಿಗಳೊಡನೆಯೂ ಮಾವಟಿಗರು ಮಾವಟಿಗರೊಡನೆಯೂ ಭಯವುಂಟಾಗುವ ಹಾಗೆ ಕಾಡುತ್ತಿರಲು ಆ ಮದ್ದಾನೆಗಳ ಕಾಳಗವು ಮೂರು ಅವಸ್ಥೆಗಳಲ್ಲಿಯೂ ಕಣ್ಣಿಗೆ ಸುಂದರವಾಗಿದ್ದಿತು. ವ|| ಹಾಗೆ ಆ ಮಂದೆಯ ಸಮೂಹಗಳನ್ನು ಮೇಲಿದ್ದ ಮಾವಟಿಗರು ಛಬಿಟ್ಟು ಒಂದಕ್ಕೊಂದಕ್ಕೆ