SearchBrowseAboutContactDonate
Page Preview
Page 487
Loading...
Download File
Download File
Page Text
________________ ೪೮೨ | ಪಂಪಭಾರತಂ - ವ|| ಅಂತು ವಿಳಯಕಾಳದ ಕಾಟ್ಕರ್ಚಿನ ಬೇಗೆ ಸಾರ್ವಂತಿರ್ವಲದಳವುಂ ಕಿರ್ಚು೦ ಕಿಡಿಯುಮಾಗೆ ತಾಗಿದಾಗಚoll ಪಸುಗ ನೆಲ ಜಲಂ ಹಯದೊಡಂಬಡು ವಂಚನೆ ಕೇಣಮಾಸನಂ ಕೊಸೆ ದೆಸೆ ದಿಟ್ಟಿ ಮುಟ್ಟಿ ಕೆಲಜಂಕೆ ನಿವರ್ತನೆ ಕಾಕ್ಕೆ ಪರ್ವಿದೇ | ರ್ವಸನದೊಳಾದ ಬಲೆಯೊಳೊಡಂಬಡ ತಳಿವಲ್ಲಿ ಮಿಂಚಿನೋಲ್ ಮುಸುಕಿದ ಮಾಯಾಯ್ತು ಸಮರಾಂಗಣಮುಳ್ಳುವ ಬಾಟ್ಗಳುಳ್ಳದಿಂ || ೭೭ ಕರ ಕರವಾಳಘಾತದೊಳರಾತಿಯ ಪಂದಲೆ ಪಂಚರಾಯುಧಂ ಬೆರಸಸೆವಟ್ಟೆ ತೊಟ್ಟ ಕವಚಂಚೆರಳಿದ ವಾಜಿ ಲೋಹವ | ಕರೆವೆರಸೊಂದೆ ಸೂಳೆ ಪಡಲ್ಡಡ ದೊರ್ವಲದುರ್ವು ಬೀರದೊಳ್ ಪೊರೆದಿರೆ ಬಿನ್ನಣಂ ನೆಗಟಿ ತಳೆದರ್ ಕೆಲರಾಜಿರಂಗದೊಳ್ || ೭೮ ಕಂt ಪಿಡಿದುದಿರ್ವ ಬಾಳ ಕಿಡಿಗಳ ನೊಡನೊಡನರೆವೊತ್ತಿ ಕೊಟ್ಟ ಸನ್ನಣವುರಿಯ | ಲೋಡರಿಸಿದೊಡವ ಪರ್ವ ಬಿಡೆಯರಿದರಿಸಮಿತಿಯೊಡನೆ ಕಾದಿದರರೆಬರ್ | ಚಂll ಭುಗಭುಗನುರ್ಚಿ ಪಾಯ್ಕ ಬಿಸುನೆತ್ತರ ಸುಟ್ಟುರೆಯಂ ನೆಲಕ್ಕೆ ಪ ರ್ದುಗಳುಗಲೀಯದವ್ವಳಿಸಿ ಪೀರ್ವಿನಮೊರ್ಮಯ ಪೊಯ್ದ ಪೊಯ್ದಳಿಂ | ನೆಗೆದು ಮುಗಿಳಿಟ್ಟೆಡೆಗಳೊಳ್ ತಲೆಗಳ ತೊಡರ್ದಿದ್ರ ಜೇನಪು ಟ್ಟಿಗಳನೆ ಪೋಲ್ಕುವೇಂ ಕಲಹಮಚ್ಚರಿಯಾಯೋ ತುರಂಗಸೈನ್ಯದೊಳ್ || ೮೦ | ಅರ್ಥ ಅನಿರ್ದಿಷ್ಟ ವ!! ಹಾಗೆ ಪ್ರಳಯಕಾಲದ ಕಾಡುಗಿಚ್ಚಿನ ಬೆಂಕಿಯು ಬರುವ ಹಾಗೆ ಎರಡು ಸೈನ್ಯದ ಸಾಮರ್ಥ್ಯವೂ ಕಿಚ್ಚು ಕಿಡಿಯಾಗಿ ದಳ್ಳಿಸಿ ತಾಗಿತು. ೭೭. ವಿಭಾಗ, ನೆಲ, ಜಲ, ಕುದುರೆಗಳ ಹೊಂದಾಣಿಕೆ, ಮೋಸ, ಮಾತ್ಸರ್ಯ, ಔದಾಸೀನ್ಯ, ವಾಹನದ ಆರೋಹಣ, ದಿಕ್ಕು ದೃಷ್ಟಿ ಮುಷ್ಟಿ, ಮುನ್ನುಗ್ಗುವಿಕೆ, ಹೆದರಿಸುವಿಕೆ, ಹಿಂದಿರುಗುವಿಕೆ, ಪುನಃ ಕಾಣಿಸಿಕೊಳ್ಳುವಿಕೆ ಇವು ವ್ಯಾಪ್ತವಾದ ಯುದ್ಧಕಾರ್ಯದ ಬಲೆಯಲ್ಲಿ ಸಮನ್ವಯವಾಗಿರುವಂತೆ ಸೇರಿಕೊಂಡಿರಲು ತಾಗಿ ಯುದ್ದಮಾಡುವಾಗ ಆ ಯುದ್ಧರಂಗವು ಪ್ರಕಾಶಮಾನವಾದ ಕಾಂತಿಯಿಂದ ಮಿಂಚಿನಲ್ಲಿ ಮುಸುಕಿದಂತಾಯಿತು. ೭೮. ಕೈಗತ್ತಿಯ ಪೆಟ್ಟಿನಿಂದ ಕೂಡಿದ ಶತ್ರುವಿನ ಹಸಿಯ ತಲೆ ಪಂಚರಾಯುಧದಿಂದ ಕೂಡಿದ ಪ್ರಕಾಶಮಾನವಾದ ಮುಂಡ, ಧರಿಸಿದ ಕವಚದೊಡನೆ ಕೂಡಿ ಹತ್ತಿರುವ ಕುದುರೆ, ಕಬ್ಬಿಣದ ಗಾಳ ಸಮೇತವಾಗಿ ಒಂದೇ ಬಾರಿಗೆ ಕೆಳಗೆ ಬೀಳಲು ಬಾಹುಬಲದ ಆಧಿಕ್ಯವು ಪರಾಕ್ರಮದಲ್ಲಿ ತೋರಿ ಬರುತ್ತಿರಲು ಪ್ರೌಢಿಮೆಯು ಉಂಟಾಗುವ ಹಾಗೆ ಕೆಲವರು ಯುದ್ಧರಂಗದಲ್ಲಿ ಬೆರಸಿ ಹೊಯ್ದಾಡಿದರು. ೭೯. ಎಡಬಿಡದೆ ಸುರಿಯುತ್ತಿರುವ ಕತ್ತಿಯ ಕಿಡಿಗಳಿಂದ ತಕ್ಷಣವೇ ಅರ್ಧ ಹತ್ತಿಕೊಂಡ ತೊಟ್ಟ ಕವಚವು ಉರಿಯುವುದಕ್ಕೆ ಮೊದಲಾಗಲು ಆ ಕವಚಗಳ ಜೋಡಣೆಯನ್ನು ಬಿರಿಯುವಂತೆ ಕತ್ತರಿಸಿ ಅನೇಕರು ಶತ್ರುಸಮೂಹದೊಡನೆ ಕಾದಿದರು. ೮೦. ಭುಗಭುಗನೆ ಸೀಳಿಕೊಂಡು ಹಾಯುವ ಬಿಸಿರಕ್ತದ ಪ್ರವಾಹವನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy