SearchBrowseAboutContactDonate
Page Preview
Page 486
Loading...
Download File
Download File
Page Text
________________ ದಶಮಾಶ್ವಾಸಂ | ೪೮೧ ಗಳಸನ್ನೆಗಯ್ಯು ತಗನೆ ದಗಿ ಪರಂಕಲಿಸಿ ಪರ್ಮಿ ಕೂಕಿಳಿದಿಸೆ ಕಂ | ಗತಿಯ ಮೊನೆಯಂಬುಗಳ ಕ ಈಜಯಿಸಿದುವು ಪೊಣರ್ವ ಬಿಲ್ಲ ಕಡುವಿಗರಂ || ೭೩ ಅರಿವ ನಡುವುಡಿವ ನೀರ್ಗೊ ಊರಿದುರ್ಚುವ ನಟ್ಟು ತೊನೆವ ಕಣಗಳೆ ಸೊಗಂ | ದಿರಿಯದಿದಿರಿದಿರನದಿರದೆ ಸುರಿಗಿಳಿವಂತಚರಂಬನಂಬಟ್ಟುವಿನಂ || ಪಿಡಿಕೆಯ್ಯ ದೊಣೆಯ ಪೊದೆಯಂ ಬಿಡೆ ಮುಡಿವಿನಮೆಚ್ಚು ಸುರಿಗೆಗಿದ್ರೆದಿರಿದಿರಂ | ಪಡ ಬೆಳದಿಳದುಂ ಬಿಲ್ವಡೆ ಪಡೆದುದು ಭೋರ್ಗರೆದು ಹರಿವ ನೆತ್ತರ ಕಡಲಂ || ವಗ ಅಂತುಭಯಬಲ ಧನುರ್ಧರಬಲಂಗಳುಮತ್ತೆ ಮತ್ತಿದಾಗಚಂtು ತೊಳಗುವ ಬಾಳ್ ತಲತ್ತಟಪ ಕಕ್ಕಡೆ ಬುಂಚುಕದೊಳ್ ತಗುಳು ಪ ಇಳಿಸುವ ಪಂಚರಾಯುಧಮಗುರ್ವಿಸುವಾವುತಿ ಪೂಸಿದಂತಿರಿ || ಮೃಳಮಮರ್ದಿದ್ರ ಮಾಳಜಿಗೆ ಸಕ್ಕರೆಯಿಕ್ಕಿದ ಜಾಯಿಲಂ ಭಯಂ ಗೊಳಿಸಿ ಕಡಂಗಿ ತಾಗಿದುದಸುಂಗೊಳೆ ತುಂಗ ತುರಂಗ ಸಾಧನಂ || ೭೬ ಗಟ್ಟಿಗರಾದ ಬಿಲ್ದಾರರು ಶಬ್ದಮಾಡಿ ಹೊಡೆಯಲಾಗಿ ಆಕಾಶಮಂಡಳವೆಲ್ಲ ಚಪ್ಪರ ಹಾಕಿದಂತಾಯಿತು. ೭೩. ಹರಿತವಾದ ಬಾಣಗಳಿಂದ ಗರಿಸನ್ನೆ ಮಾಡಿ ದೀರ್ಘವಾಗಿ ಸೆಳೆದು ವಿಸ್ತಾರವಾಗಿ ಹರಡಿ ಹಬ್ಬಿ ಆರ್ಭಟಮಾಡಿ ಬಾಣಪ್ರಯೋಗ ಮಾಡಲು ಕೆಂಪಾದ ಗರಿಯನ್ನುಳ್ಳ ಬಾಣಗಳು ಯುದ್ಧ ಮಾಡುತ್ತಿರುವ ಶೂರರಾದ ಬಿಲ್ದಾರರನ್ನು ಕಣ್ಣು ತೆರೆಯುವ ಹಾಗೆ ಮಾಡಿದುವು. ೭೪, ಕತ್ತರಿಸುವ, ನಾಟುವ, ಒಡೆದು ಹಾಕುವ, ನೇರವಾದ ಬಾಣಗಳು ಹಾರಿ ಸೀಳುವ, ನಾಟಿ ತೂಗುವ ಬಾಣಗಳಿಗೆ ಮುಖವನ್ನು ತಿರುಗಿಸಿಕೊಳ್ಳದೆ ಪ್ರತಿಭಟಿಸುವುದಕ್ಕೆ ಹೆದರದೆ ಕತ್ತಿಯಿಂದ ಹೊಡೆದ ಹಾಗೆ ಬಾಣವನ್ನು ಬಾಣವು ಹಿಂಬಾಲಿಸುವ ಹಾಗೆ ಹೊಡೆದರು. ೭೫. ಕಯ್ಯಲ್ಲಿ ಹಿಡಿದಿರುವ ಬತಳಿಕೆಯ ಹೊದೆಯಂಬುಗಳು ಸಂಪೂರ್ಣವಾಗಿ ಮುಗಿಯುವವರೆಗೂ ಪ್ರಯೋಗಮಾಡಿ ಅದು ಮುಗಿಯಲು ಕತ್ತಿಯನ್ನು ಸೆಳೆದು ಎದುರೆದುರಿಗೆ ಬಂದು ಸೈನ್ಯದಲ್ಲಿ ಹೆಣೆದುಕೊಂಡು ಬಿಲ್ದಾರರು ಆರ್ಭಟಮಾಡಿ ರಕ್ತ ಸಮುದ್ರವನ್ನು ಹರಿಯಿಸಿದರು. ವ|| ಹಾಗೆ ಎರಡು ಸೈನ್ಯದ ಬಿಲ್ದಾರ ಸೈನ್ಯವೂ ಸತ್ತು ನಾಶವಾಗಲು ೭೬. ಹೊಳೆಯುತ್ತಿರುವ ಕತ್ತಿ, ತಳತಳಿಸುತ್ತಿರುವ ಮುಳ್ಳುಗೋಲು, ಕುಚ್ಚಿಲಿನಲ್ಲಿ ಸೇರಿ ಪ್ರಜ್ವಲಿಸುವ ಪಂಚರಾಯುಧ, ಹೆದರಿಸುವ ಆವುತಿ, ಲೇಪಮಾಡಿದಂತೆ ಒತ್ತಾಗಿ ಸೇರಿರುವ ಮಾಳಜಿಗೆ, ಜೀನುಹಾಕಿದ ಜಾತಿಯ ಕುದುರೆಗಳು - ಇವು ಭಯವನ್ನುಂಟುಮಾಡಲು ಕುದುರೆಯ ಸೈನ್ಯವು ಪ್ರಾಣವನ್ನಪಹರಿಸುವ ಹಾಗೆ ತಾಗಿತು. (ಟಿ ಇಲ್ಲಿ ಬರುವ ಪಂಚರಾಯುಧ, ಆವುತಿ, ಮಾಳಜಿಗೆ ಮೊದಲಾದುವುಗಳ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy