SearchBrowseAboutContactDonate
Page Preview
Page 474
Loading...
Download File
Download File
Page Text
________________ ದಶಮಾಶ್ವಾಸಂ / ೪೬೯ ಲೋಕಚಕ್ಕು ನವ ಕಮ ಲಾಕರ ಬಾಂಧವನನೇಕ ದಿತಿಸುತ ಸಮರಾ | ನೀಕ ಭಯಂಕರನೆರಡುಮ ನೀಕಂಗಳನಡರೆ ನೋಡುವಂತುದಯಿಸಿದಂ || ೫೧ ವ|| ಆಗಳೇಳೆಸಿದ ಬೆಸುಗೆಗಳುಮಿಕ್ಕಿದ ಲೋಹವಕ್ಕರೆಗಳುಮುರ್ಚಿದ ಮೊಗವಡಂಗಳುಂ ಕಟ್ಟದ ಪಬಯಿಗೆಗಳುಮೊಟ್ಟದ ಮೂವತ್ತೆರಡಾಯುಧಂಗಳುಂ ಬೆರಸeಂಕವೆರಸಿದ ಕುಲಗಿರಿಗಳೆ ತಳರ್ವಂತ ತಳರ್ವ ಮದಾಂಧಗಂಧಸಿಂಧುರಂಗಳುಮಂ ಚಕಚೇತೃತನಾದದೊಳ್ ದಿಕ್ಷಕ ಮುಮಂ ಚಕ್ರಘಾತದೂ ಧರಾಚಕ್ರಮನಾಕ್ರಮಿಸಿ ನಿಶಾತಕೇತಿಗರ್ಭಂಗಳುಮನೇಕ ಪ್ರಕಾರ ಕೇತನ ವಾಜಿರಾಜಿಗಳುಮಾಗಿ ದೊಮ್ಮಳಿಸಿ ನಡೆವ ರಥಂಗಳುಮಂ ಕಣ್ಣುಂ ಖುರಮುಂ ತೋಟಿ ಪಕ್ಕರೆಯಿಕ್ಕಿ ಪೊಳೆವ ಪೊನ್ನ ಪರ್ಯಾಣಂಗಳುಮಸೆಯ ಘೋಳಾಯ್ದರ್ ಪೊಳೆಯಿಸಿ ಬಿಸಿಲ್ಗುದುರೆಗಳ ಪೊಳೆವಂತ ಪೊಳೆವ ಕಡುಗುದುರೆಗಳುಮಂ ಮಿಡುಮಿಡುಕನೆ ಮಿಡುಕುವ ಸಿಡಿಲೇಬಿಯುಮಂ ಕೋಳಸಗಿದ ಪುಲಿಯ ಪಿಂಡುಗಳುಮನನುಕರಿಸಿ ನಡೆವಣಿಯ ಸಂದಣಿಯುಮಂ ಕಾಬ್ರುಜು ಮಸಗಿದಂತೆ ಮಸಗಿದ ದುರ್ಧರ ಧನುರ್ಧರಬಲಮುಮಂ ಶ್ವೇತ ಭೀಷರ ಪೇಜೆಯೊಳೆರಡುಂ ಪಡೆಗಳ ಪಡವಳರ್ಕಳ್ ಕುರುಕ್ಷೇತ್ರದೊಳ್ ಚಿತ್ರಿಸಿದಂತೊಡ್ಡಿ ನಿಂದಾಗಳ್ ವಾಯಿತು, ೫೧. ಲೋಕಚಕ್ಷು, ಕಮಲಬಾಂಧವನೂ ಭಯಂಕರನೂ ಆದ ಸೂರ್ಯನು ಎರಡೂ ಸೈನ್ಯಗಳನ್ನು ಮೇಲಿಂದ ನೋಡುವಂತೆ ಉದಯಿಸಿದನು. ವ|| ಆಗ ಎತ್ತಿ ಕಟ್ಟಿದ ಅಂಬಾರಿಗಳು, ಹಾಕಿರುವ ಲೋಹದ ಪಕ್ಷರಕ್ಷೆಗಳು, ಬಿಚ್ಚಿರುವ ಮೊಗವಾಡಗಳು, ಕಟ್ಟಿದ ಧ್ವಜಗಳು ರಾಶಿಮಾಡಿರುವ ಮೂವತ್ತೆರಡಾಯುಧಗಳು ಇವುಗಳಿಂದ ಕೂಡಿ ರೆಕ್ಕೆಗಳಿಂದ ಕೂಡಿದ ಕುಲಪರ್ವತಗಳೇ ನಡೆಯುವಂತೆ ಮದಾಂಧವಾದ ಆನೆಗಳು ನಡೆದುವು. ಚಕ್ರದ ಚೀತ್ಕಾರ ಶಬ್ದದಿಂದ ದಿಕ್ಕುಗಳ ಸಮೂಹವನ್ನೂ, ಚಕ್ರಗಳ ಹೊಡೆತದಿಂದ ಭೂಮಂಡಲವನ್ನೂ ಆಕ್ರಮಿಸಿ ಹರಿತವಾದ ಆಯುಧಗಳನ್ನೊಳಗೊಂಡು ನಾನಾ ರೀತಿಯ ಬಾವುಟ ಮತ್ತು ಕುದುರೆಗಳ ಸಮೂಹಗಳನ್ನುಳ್ಳುದಾಗಿ ಸಡಗರದಿಂದ ತೇರುಗಳು ನಡೆದುವು. ಕಣ್ಣು ಗೊರಸುಗಳನ್ನುಳಿದು ಪಾರ್ಶ್ವಕ್ಕೆ ಹಾಕಿದ ಗುಳದಿಂದಲೂ ಹೊಳೆಯುತ್ತಿರುವ ಚಿನ್ನದ ಜೀನುಗಳಿಂದಲೂ ಅಲಂಕರಿಸಲ್ಪಟ್ಟ ಬಿಸಿಲ್ಗುದುರೆಗಳ ಹಾಗೆ ಹೊಳೆಯುತ್ತಿರುವ ವೇಗಶಾಲಿಗಳಾದ ಕುದುರೆಗಳು ಮುಂದುವರಿದುವು. ವಿಶೇಷವಾಗಿ ಪ್ರಕಾಶಿಸುತ್ತಿರುವ ಸಿಡಿಲಿನ ವೈಭವವನ್ನೂ ಕೋಪಗೊಂಡ ಹುಲಿಗಳ ಹಿಂಡನ್ನೂ ಅನುಕರಿಸುತ್ತಿರುವ ಕಾಲಾಳುಗಳ ಸಮೂಹ ಮುಂದೆ ನಡೆಯಿತು. ಕಾಡ ಹಸು ರೇಗಿದ ಹಾಗೆ ರೇಗಿರುವ ಧರಿಸಲಸಾಧ್ಯವಾದ ಬಿಲ್ಲಾಳಿನ ಸೈನ್ಯವೂ ಮುನ್ನುಗ್ಗಿತು. ಎರಡು ಸೈನ್ಯವೂ ಶ್ವೇತ ಮತ್ತು ಭೀಷ್ಮರು ಆಜ್ಞೆ ಮಾಡಿದ ರೀತಿಯಲ್ಲಿ ನಡೆದು ಕುರುಕ್ಷೇತ್ರದ ರಣರಂಗದಲ್ಲಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy