SearchBrowseAboutContactDonate
Page Preview
Page 473
Loading...
Download File
Download File
Page Text
________________ ೪೬೮ / ಪಂಪಭಾರತಂ ಕಂ| ಕೊಡರ್ಗುಡಿಯ ಕೆಂಪಿನೋಲ್ ಕಂ ಪಿಡಿದಿರೆ ರಿಪುನೃಪತಿಬಲದ ಶೋಣಿತಜಳಮಂ | ಕುಡಿಯದೆಯುಂ ದಲ್ ಮುನ್ನಮೆ ಕುಡಿದಂತೆಸೆದಿರ್ದುವರಿಗನಸ್ತಚಯಂಗಳ 11 ೪೮ ವll ಅಂತಾಯಿರುಳಂ ವಿಜಯಂ ವಿಜಯೋದ್ಯೋಗದೂಳ್ ಕಳೆಯ ಬೆಳಗಪ್ಪ ಜಾವದೊಳ್ ಬೀಡುವೀಡುಗಳೆಲ್ಲಂ ತೋಲಲ್ಲೇಕಿರ್ಪೀರೇಟಿಂ ಪಣಿಮನೆಈಗ ತಂಡದ ಕೀತಿ ಸಾಕುವ ಪಲರ್ ಪಡೆವಳ್ಳರ ಮಾತುಗಳ ಮನಂ ಗೊಂಡಿರೆ ಸನ್ನಣಂದುಡುವ ಪಣುವ ಬಾಚಿಯವಂದಿರಂ ಮರು | ಲೈಂಡವೊಲೂಲ್ಯ ಬಗ್ಗಿಸುವ ಬೇಗದೂಳಾ ಕಟಕಂಗಳೆಯ ಕೆ ಆ್ಯಂಡುವು ಮಂದರ ಕ್ಷುಭಿತ ದುಗ್ಗಪಯೋಧಿ ಗಭೀರನಾದಮಂ || ೪೯ ಚoll ಕತ ವಿವಿದಾಸ ವೀರಭಟಕೋಟ ಭಯಂಕರವಾಗ ಬೀಸುವಾ ವುತಿಯ ಕಳಂಕ ಪಂಕದೊಳೆ ಪೆರ್ಚದ ಕಲೆ ತೀವ್ರ ಶಸ್ತ್ರಸಂ | ಹತಿಗಳ ದೀಪ್ತಿಯಿಂ ಬಿಸುಗೆಯಾಗಿ ಕರಂ ಪೊಗರ್ವಟ್ಟಗುರ್ವುಮ ದ್ಭುತಮುಮನೀಯ ಪಣಿದುವು ಪಾಂಡವ ಕೌರವ ರೌದ್ರಸಾಧನಂ || ೫೦ ವll ಅಂತೆರಡುಂ ಪಡೆಗಳುಂ ಪಣ್ಣಪಣ್ಣನ ಪಣ್ಣ ಕಾಳಗಕ್ಕೆ ನಡೆಯತೊಡರಿಸಿದಾಗ ೪೮. ಆತನ ಬಾಣಸಮೂಹವು ದೀಪದ ಕುಡಿಯ ಕೆಂಪುಬಣ್ಣದಿಂದ ಕೆಂಪಾಗಿ ಶತ್ರುರಾಜರ ರಕ್ತಜಲವನ್ನು ಕುಡಿಯದಿದ್ದರೂ ಅದಕ್ಕೆ ಮೊದಲೇ ಅವು ಕುಡಿದಿದ್ದಂತೆ ಶೋಭಾಯಮಾನವಾಗಿದ್ದುವು. ವ|| ಹಾಗೆ ಈ ರಾತ್ರಿಯನ್ನು ಅರ್ಜುನನು ಯುದ್ಧೋದ್ಯೋಗದಲ್ಲಿಯೇ ಕಳೆದು ಬೆಳಗಿನ ಜಾವದಲ್ಲಿ ಬೀಡು ಬೀಡುಗಳಲ್ಲೆಲ್ಲ ಅಲೆದು “ಏಕೆ ಸುಮ್ಮನಿದ್ದೀರಿ ಎದ್ದು ಸಿದ್ದರಾಗಿ' ಎಂದನು. ೪೯. ಗುಂಪುಗುಂಪಾಗಿ ಕೋಪಿಸಿಕೊಂಡು ಸಾರಿ ಹೇಳುತ್ತಿರುವ ಅನೇಕ ಸೇನಾನಾಯಕರ ಮಾತುಗಳು ಮನಸ್ಸನ್ನು ಸೆಳೆಯುತ್ತಿರಲು, ಕಡಿವಾಣವನ್ನು ತೊಡಿಸುವ, ಯುದ್ಧಕ್ಕೆ ಅಣಿಮಾಡುತ್ತಿರುವ, ಕೆಲಸದಲ್ಲಿರುವವರನ್ನು ಹುಚ್ಚು ಹಿಡಿದವರ ಹಾಗೆ ಹೆದರಿಸುತ್ತಿರುವ ಆ ಸೈನ್ಯವು ವೇಗದಲ್ಲಿ ಮಂದರಪರ್ವತದಿಂದ ಕಡೆಯಲ್ಪಟ್ಟ ಕ್ಷೀರಸಮುದ್ರದ ಗಭೀರನಾದವನ್ನು ಅಂಗೀಕಾರಮಾಡಿತು. ೫೦. ನಾನಾವಿಧವಾದ ಅಸ್ತಶಸ್ತಗಳಲ್ಲಿ ಪೂರ್ಣಪಾಂಡಿತ್ಯವನ್ನು ಪಡೆದಿರುವ ವೀರಭಟರ ಸಮೂಹವು ಭಯವಾಗುವ ಹಾಗೆ ಬೀಸುತ್ತಿರುವ ಆವುತಿಯೆಂಬ ಆಯುಧದ ಕರೆಯೆಂಬ ಕೆಸರಿನಲ್ಲಿಯೇ ಹೆಚ್ಚಾದ ಕತ್ತಲೆಯು ಹರಿತವಾದ ಶಸ್ತ ಸಮೂಹಗಳ ಕಾಂತಿಯೊಡನೆ ಚೆನ್ನಾಗಿ ಬೆಸೆದುಕೊಂಡು ಕಾಂತಿಯುಕ್ತವಾಗಿ ಭಯವನ್ನೂ ಆಶ್ಚರ್ಯವನ್ನೂ ಏಕಕಾಲದಲ್ಲಿ ಉಂಟುಮಾಡುತ್ತಿರಲು ಪಾಂಡವ ಕೌರವರ ಭಯಂಕರವಾದ ಸೈನ್ಯಗಳು ಯುದ್ಧಕ್ಕೆ ಸಿದ್ದವಾದುವು. ವ|| ಹಾಗೆ ಎರಡು ಸೈನ್ಯಗಳೂ ಮೆಲ್ಲಮೆಲ್ಲನೆ ಯುದ್ಧಸನ್ನದ್ದವಾಗಿ ಯುದ್ಧಕ್ಕೆ ಹೊರಡಲು ಪ್ರಾರಂಭಿಸಿದಾಗ ಸೂರ್ಯೊದಯ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy