SearchBrowseAboutContactDonate
Page Preview
Page 441
Loading...
Download File
Download File
Page Text
________________ ೪೩೬ | ಪಂಪಭಾರತಂ ವn ಎಂಬುದುಂ ಕರ್ಣಂ ತನಗೆಂತುಮೊಡಂಬಡದುದಂ ನಿರ್ಣಯವಾಗದು ಮಗುಲ್ಬಟ್ಟು ನಾರಾಯಣಂ ಪೋದನಿತ್ತಲಂಗರಾಜನುಮಾತ್ರಾಲಯಕ್ಕೆ ಮದು ಚಿಂತಾಕ್ರಾಂತನಾಗಿಚoll ಕುರುಪತಿಗಿಲ್ಲ ದೈವಬಲಮಾಜಿಗೆ ಮೇಲ್ಮಲೆಗೆಯ್ಯರಾಗಳುಂ ಗುರು ಗುರುಪುತ್ರ ಸಿಂಧುಸುತರಾಳನುಮನನ ನಚ್ಚಿ ಪರ್ಚಿ ಮುಂ | ಪೂರೆದನಿದಿರ್ಚಿ ಕಾದುವರುಮನ್ವಯ ಸೋದರರೆಂತು ನೋಡಿ ಕೂ ಕರಿಸದೆ ಕೊಲ್ವೆನೆನ್ನೊಡಲನಾಂ ತವಿಪೆಂ ರಣರಂಗಭೂಮಿಯೊಳ್ | ೭೦ ಮ|| ಅಲೆದೆಂ ಸೋದರರೆಂದು ಪಾಂಡವರನ್ನೆಂತೆನ್ನರಂ ಕೊಲ್ವೆನು ಜತೊಳೆನ್ನಂ ಪೂರದೆಯ ನಂಬಿದ ನೃಪಂಗೆಂತಾಜಿಯೊಳ್ ತಪ್ಪುವಂ | ತಳಿಸಂದುದ್ಧತ ವೈರಿ ಭೂಪ ಬಲದೊಡ್ಡಳ್ಳಾಡ ಲೆಕ್ಕಕ್ಕೆ ತ ಇದನ್ನಾಳನಿನಾನ ಮುಂಚೆ ನಿಜಪಂ ಕೆಯ್ಯೋಂಡು ಕಟ್ಟಾಯಮಂ || ೭೧ ಎಂದು ದುರ್ಯೋಧನನು ಹಿಂಸಿಸುತ್ತಿರಲು ಮುತ್ತಿನ ಹಾರವು ಕಿತ್ತುಹೋಯಿತು. ತನ್ನ ಮುತ್ತಿನ ಕೇಡನ್ನೇ ನೋಡುತ್ತ ನಡುಗುತ್ತಿದ್ದ ಭಾನುಮತಿಯನ್ನು ದುರ್ಯೊಧನನು ಕರ್ಣನಿಗೆ ತೋರಿಸಿ, ನಾಚಿಕೆಯಿಲ್ಲದೆ ಮುತ್ತುಗಳನ್ನು ಆಯುವುದೇ ತಪ್ಪಿಲ್ಲದೇ ಹೇಳು' ಎಂದು ಹೇಳುವ ರಾಜಶ್ರೇಷ್ಠನಾದ ದುರ್ಯೋಧನನನ್ನು ಬಿಟ್ಟು ನಿಮ್ಮಲ್ಲಿ ಸೇರಿಕೊಂಡರೆ ನಾನು ಯಾರಿಗೂ ಬೇಡದವನಾಗುತ್ತೇನಲ್ಲವೇ? ಎಂದನು.* ವll ಕರ್ಣನು ಹೇಗೂ ತನ್ನ ಮಾತಿಗೆ ಒಪ್ಪುವುದಿಲ್ಲವೆಂಬುದನ್ನು ಸ್ಥಿರವಾಗಿ ತಿಳಿದುಕೊಂಡು ಕೃಷ್ಣನು ಅವನನ್ನು ಹಿಂತಿರುಗಹೇಳಿ ತಾನೂ ಹೋದನು. ಈ ಕಡೆ ಕರ್ಣನು ತನ್ನ ಮನೆಗೆ ಬಂದು ದುಃಖದಿಂದ ಕೂಡಿ-೭೦. ದುರ್ಯೋಧನನಿಗೆ ದೈವಬಲವಿಲ್ಲ, ದ್ರೋಣ ಅಶ್ವತ್ಥಾಮ ಭೀಷ್ಮರು ತೋರಿಕೆಯ ಯುದ್ಧವನ್ನು ಮಾಡುವವರು, ನನ್ನ ಯಜಮಾನನಾದ ದುರ್ಯೋಧನನು ನನ್ನನ್ನೇ ನಂಬಿ ಉಬ್ಬಿ ಮೊದಲು ಸಾಕಿದ್ದಾನೆ. ಯುದ್ಧಮಾಡುವವರು ನನ್ನ ಸಹೋದರರು, ತಿಳಿದು ತಿಳಿದು ಅಸಹ್ಯಪಡದೆ ಅವರನ್ನು ಹೇಗೆ ಕೊಲ್ಲಲಿ. ರಣರಂಗಭೂಮಿಯಲ್ಲಿ ನನ್ನ ಶರೀರವನ್ನೇ ನಾಶಮಾಡುತ್ತೇನೆ. ೭೧. ಪಾಂಡವರನ್ನು ಸೋದರರೆಂದು ತಿಳಿದೆನು. ಇನ್ನು ನನ್ನವರನ್ನು ಹೇಗೆ ಕೊಲ್ಲಲಿ? ಪ್ರೀತಿಯಿಂದ ಸಲಹಿ ಪೂರ್ಣವಾಗಿ ನಂಬಿದ ರಾಜನಿಗೆ ಹೇಗೆ ಯುದ್ಧದಲ್ಲಿ ತಪ್ಪಿ ನಡೆಯಲಿ. ಎರಡೂ * ಈ ಪದ್ಯದಲ್ಲಿ ಕರ್ಣನು ತನಗೆ ದುರ್ಯೋಧನನಲ್ಲಿದ್ದ ಸದರವನ್ನೂ ಆಂತರ್ಯ ಮನೋಭಾವವನ್ನೂ ವಿಶದಪಡಿಸುತ್ತಾನೆ. ಇಲ್ಲಿ ಪಗಡೆಯಾಡುತ್ತಿರುವವರು ದುರ್ಯೋಧನ ಭಾನುಮತಿಯರು, ಕರ್ಣ ಪ್ರೇಕ್ಷಕ, ದುರ್ಯೋಧನನ ಏಕಾಂತವಾದ ಅಂತಃಪುರಕ್ಕೂ ಅವನಿಗೆ ಪ್ರವೇಶವುಂಟು. ರಾಜರಾಣಿಯರ ಆಟದಲ್ಲಿಯೂ ಇವನ ಮಧ್ಯಸ್ಥಿಕೆ ಇರುತ್ತಿತ್ತು ಎಂಬುದು ಸೂಕ್ತವಾದ ಅರ್ಥ. ಅದು ಬಿಟ್ಟು ಕರ್ಣನು ಭಾನುಮತಿಯೊಡನೆ ಪಗಡೆಯಾಟವಾಡುತ್ತಿದ್ದು ಅವಳ ಹಾರಕ್ಕೆ ಕೈ ಹಾಕಿ ಹರಿದುಹಾಕಿದ ಎಂಬುದು ಲೌಕಿಕದೃಷ್ಟಿಯಿಂದ ಹಾಸ್ಯಾಸ್ಪದವಾಗುತ್ತದೆ. ಎಷ್ಟೇ ಸದರವಿದ್ದರೂ ಸ್ನೇಹಿತ ಅಥವಾ ಕೈಕೆಳಗಿನ ಅಧಿಕಾರಿಯೊಬ್ಬನು ರಾಣಿಯ ಮುತ್ತಿನ ಹಾರಕ್ಕೆ ಕೈಹಾಕಿ ಹರಿಯುವುದು ಅಪಚಾರದ ಪರಮಾವಧಿ. ರಾಜರಾಣಿಯರ ಪ್ರಣಯಕಲಹ ದಲ್ಲಿಯೂ ಕರ್ಣನ ಮಧ್ಯಸ್ಥಿಕೆಯಿತ್ತೆಂಬುದು ಅವರ ಪರಸ್ಪರ ಮೈತ್ರಿಯ ಪರಾಕಾಷ್ಠತೆಯನ್ನು ವಿಶದಪಡಿಸುತ್ತದೆ.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy