SearchBrowseAboutContactDonate
Page Preview
Page 440
Loading...
Download File
Download File
Page Text
________________ ನವಮಾಶ್ವಾಸಂ / ೪೩೫ ವಗ ದುರ್ಯೋಧನಂ ನಿನ್ನನೇತಕ್ ನಂಬವನೆಂದೂಡ ನೀನುಂ ತಾನುಮರ್ಮ ಗಂಗಾನದೀತೀರದೂ ಬೇಂಟೆಯಾಡುವಲ್ಲಿ ತತ್ಸಮೀಪದ ತಾಪಸಾಶ್ರಮದೊಳ್ ಸತ್ಯಂತಪರೆಂಬ ದಿವ್ಯಜ್ಞಾನಿಗಳು ಕಂಡು ಪೊಡವಟ್ಟರ್ವರುಮಂ ಪರಸಿ ನಿನಗೆ ಮುನ್ನಮೇಜಿಲ್ ತರಿಸಿದೊಡೆ ಸುಯೋಧನನೇವಯಿಸಿ ನಿನ್ನಂ ಪೋಗಲ್ವೆಟ್ಟುಉll ಆನಿರೆ ನೀಮಿದೇಕೆ ದಯೆಗೆಯಿರೊ ಮೀಂಗುಲಿಗಂಗೆ ಪೇಟಿಮಂ ದಾ ನರನಾಥನಂ ತಿಳಿಪ ತನ್ಮುನಿ ಭೂಭುಜನೆಯ ನಂಬಿ ಕಾ | ನೀನ ಸಮಂತು ಪಾಟಿಸುವೆನೊಯ್ಯನೆ ಮುಳ್ಳೂಳೆ ಮುಳ್ಳನೆಂದು ತಾ ನೀ ನಯದಿಂದ ಪೆರ್ಚಿ ಪೂರೆದಳಂದೂಡನುಂಡನಲ್ಲನೇ || ೬೭ ಚಂಗಿ ಎನೆಯೆನೆ ಬಾಷ್ಪವಾರಿ ಪುಳಕಂಬೆರಸೊರ್ಮೆಯೆ ಪೊಕ್ಕೆ ಮುನ್ನೆ ನೀ ವೆನಗಿದನೇಕೆ ಪೇಟೆರೊ ವೆಗಳ ಪೊಗwಯನಾಂಪಿನಂ ಸುಯೋ | ಧನನೆನಗೊಳ್ಳಿಕೆಯ ಕೃತಮಂ ಪಳಗಿಕ್ಕಿ ನೆಗಳೂ ಮಾಸೆ ನ ಣ್ಣಿನ ನೆವದಿಂದ ಪಾಂಡವರನಾನೊಳವೊಕ್ಕೊಡೆ ನೀಮ ಸಿರೇ ೬೮ eoll ನೆತ್ತಮನಾಡಿ ಭಾನುಮತಿ ಸೋಲೊಡೆ ಸೋಲಮನೀವುದೆಂದು ಕಾ ಡುತ್ತಿರೆ ಲಂಬಣಂ ಪಳಯ ಮುತ್ತಿನ ಕೇಡನೆ ನೋಡಿ ನೋಡಿ ಬ | ಳ್ಳುತ್ತಿದೆಯೇವಮಿಲ್ಲದಿವನಾಯ್ದುದೂ ತಪ್ಪದೆ ಪೇಟಿಮೆಂಬ ಭೂ ಪೋತ್ತಮನಂ ಬಿಸುಟ್ಟಿರದ ನಿಮ್ಮೊಳೆ ಪೂಕೊಡೆ ಬೇಡನಲ್ಲನೇ || , ೬೯ ಪೂರ್ಣವಾಗಿ ಬಲ್ಲೆವು. ವ|| ದುರ್ಯೋಧನನು ನಿನ್ನನ್ನು ಯಾವುದರಿಂದ ನಂಬಿದನೆಂದರೆ ನೀನೂ ಆತನೂ ಒಂದು ಸಲ ಗಂಗಾತೀರದಲ್ಲಿ ಬೇಟೆಯಾಡುತ್ತಿರುವಾಗ ಸಮೀಪದಲ್ಲಿದ್ದ ತಾಪಸಾಶ್ರಮದಲ್ಲಿ ಸತ್ಯಂತಪರೆಂಬ ದಿವ್ಯಜ್ಞಾನಿಗಳನ್ನು ಕಂಡು ನಮಸ್ಕಾರಮಾಡಿದಿರಿ. ನಿಮ್ಮಿಬ್ಬರನ್ನೂ ಹರಸಿ ಅವರು ನಿನಗೆ ಮೊದಲು ಆಸನವನ್ನು ತರಿಸಿಕೊಟ್ಟರು. ದುರ್ಯೋಧನನು ಲಜ್ಜಿತನಾಗಿ ನಿನ್ನನ್ನು ಹೊರಗೆ ಹೋಗಹೇಳಿ ೬೭. 'ನಾನಿರುವಾಗ ತಾವಿದೇಕೆ ಆ ಮೀಂಗುಲಿಗನಿಗೆ (ಮೀನನ್ನು ಕೊಲ್ಲುವ ಸ್ವಭಾವವುಳ್ಳವನು-ಬೆಸ್ತ ದಯೆಗೆಯ್ದಿರಿ' ಎಂದು ಆ ಋಷಿಯನ್ನು ಕೇಳಿದಾಗ ಅವರು ದೊರೆಗೆ ಎಲ್ಲವನ್ನೂ ತಿಳಿಸಿದರು. ದೊರೆಯು ನಂಬಿ ಕರ್ಣ! ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಉಪಾಯವನ್ನು ಮಾಡುವೆನೆಂದು ನಿನ್ನನ್ನು ಈ ನಯದಿಂದ ಪೋಷಿಸುತ್ತ ಪ್ರೀತಿಯಿಂದ ನಿನ್ನೊಡನೆ ಉಂಡನಲ್ಲವೇ ?” ೬೮. ಹೀಗೆಂದು ಕೃಷ್ಣನು ಹೇಳಲು ಕರ್ಣನಿಗೆ ರೋಮಾಂಚನದೊಡನೆ ಕಣ್ಣೀರು ಸುರಿಯಲಾರಂಭಿಸಿತು. ಅವನು ಕೃಷ್ಣನನ್ನು ಕುರಿತು 'ತಾವು ಮೊದಲು ನನಗೆ ಏಕೆ ತಿಳಿಸಿದರೋ? ಪ್ರಸಿದ್ದಿಗೂ ಹೊಗಳಿಕೆಗೂ ಪಾತ್ರವಾಗುವಷ್ಟು ಆತ್ಮವಿಶ್ವಾಸದಿಂದ ದುರ್ಯೊಧನನು ನನಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ಹೊರಗಿಕ್ಕಿ ನನ್ನ ಕೀರ್ತಿ ಮಾಸಿ ಹೋಗುವ ಹಾಗೆ ನೆಂಟಿನ ನೆಪದಿಂದ ಪಾಂಡವರಲ್ಲಿ ಸೇರಿಕೊಂಡರೆ ನೀವೂ ಹೇಸುವುದಿಲ್ಲವೇ ? ೬೯. ದುರ್ಯೊಧನನೂ ರಾಣಿಯಾದ ಭಾನುಮತಿಯೂ ಪಗಡೆಯಾಡಿ ಭಾನುಮತಿ ಸೋತು ಎದ್ದುಹೋಗಲು ಪಣವನ್ನು ಕೊಟ್ಟು ಹೋಗು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy