SearchBrowseAboutContactDonate
Page Preview
Page 42
Loading...
Download File
Download File
Page Text
________________ ಉಪೋದ್ಘಾತ | ೩೭ ನೋಟವಿಲ್ಲ, ತಿಳಿಯದ ತಂತ್ರವಿಲ್ಲ, ಅರಿಯದ ಆಯುಧಗಳಿಲ್ಲ. ಯುದ್ಧಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಯುದ್ಧ ಪ್ರಯಾಣ ಸಿದ್ಧತೆ, ಭೇರಿ, ವೀರಾಲಾಪ, ಧೀರಪ್ರತಿಜ್ಞೆ ಬೀಳ್ಕೊಡುಗೆ, ಧ್ವಜಸಂಚಳನ, ರಥಚೀತ್ಕಾರ, ಭಟರ ಸಿಂಹನಾದ, ಉತ್ಕಟಜ್ಯಾರವ, ಶರಾಸಾರದ ತೀವ್ರತೆ, ವೈವಿಧ್ಯ, ಚೋದಕರ ವೇಗ, ಹಶ್ವರಥ ಪದಾತಿಗಳ ಯುದ್ಧ ಪ್ರತಿಯುದ್ಧ, ಬಿದ್ದವರ ಕೊರಗು, ಎದ್ದವರ ಮೊಳಗು, ಪ್ರೇಕ್ಷಕರ ಪ್ರೇರಣೆ, ದೇವತೆಗಳ ಪುಷ್ಪವೃಷ್ಟಿ-ಇವು ಒಂದೊಂದರ ಅತಿ ವಿಶದ ವಿವರಗಳನ್ನು ಗ್ರಂಥದಲ್ಲಿ ಕಾಣಬಹುದು. ಕಣಯ, ಕಂಪಣ, ಮುಸಲ, ಮುಸುಂಡಿ, ಮುದ್ದರ, ತೋಮರ, ಭಿಂಡಿವಾಳ, ಹಂತಿ, ಬಾಳ್, ಕಕ್ಕಡೆ, ಬುಂಧುರ, ಪಂಚರಾಯುಧ, ಆವ್ರುತಿ, ಮಾಳಜಿಗೆ, ಜಾಯಿಲ, ಪರಶು, ಶರ, ಸಂಕು, ಇಟ್ಟಿ, ಪಾರುಂಬಳೆ, ಮಾರ್ಗಣೆ-ಇವು ಆಯುಧಗಳು, ನಿರ್ವಾಯ, ನರುವಾಯ, ಮುಂಮೊನೆ, ನೆರಕೆ, ನಾರಾಚ, ತಗರ್ತಲೆ, ಕಣೆ, ಕಕ್ಕಂಬು, ಪೆಜ್‌ಯಮುರುಗ, ಕಲ್ಲಂಬು, ಬಟ್ಟಿನಂಬು, ಪಾಯಂಬು, ಮೊನೆಯಂಬು, ಕಿಂಬು, ಬೆಳಸೆಯಂಬು ಇವು ಬಾಣವಿಶೇಷಗಳು. ವಂಚನೆ, ಕೇಣ, ಆಸನ, ಕೊಸ, ದೆಸೆ, ದಿಟ್ಟಿ, ಮುಟ್ಟಿ, ಕಲ ಜಿಂಕೆ, ನಿವರ್ತನ, ಜಾಳ್ಮೆ ಏರ್ವೆಸನ್, ಪುಸಿವಂಚನೆ, ಪುಸಿ, ಅಗಲಿತು, ತಕ್ಕುದಕ್ಕುಪಗೆ, ಕಲ್ಪನೆ, ಕೆಯ್ದಕುಸುರಿ, ನುಸುಳ್, ತಳಗೋಂಟೆ, ಮೊದಲಾದವು ಯುದ್ಧತಂತ್ರಗಳು. ಆಲೀಢ, ಪ್ರತ್ಯಾಲೀಢ, ಸಮಪಾದ ಎಂಬುವು ಆಸನಗಳು. ಮಂಡಳ, ಸವ್ಯ, ಅಪಸವ್ಯ ಭ್ರಾಂತ, ಉದ್ಘಾಂತ, ಸ್ಥಿತ, ಚಕ್ರ, ಸ್ಪಂದನ ಬಂಭನ ಇವು ರಥಕಲ್ಪಗಳು. ಪಾತ, ಲಕ್ಷ್ಮ, ಶೀಘ್ರ, ಘಾತ, ಬಹುವೇಗ, ವಿದ್ಯಾಧರಕರಣ ಇವು ಗದಾಯುದ್ಧದ ಪಟ್ಟುಗಳು. ಶರಸಂಕರ್ಷಣ, ಆಕರ್ಷಣ, ಹರಣಾದಿಗಳು ವಿವಿಧ ಶರಕಲ್ಪಕಳಾಪರಿಣತಿಗಳು, ಸಂಧಿ, ನಿಗ್ರಹ, ಯಾನ, ಆಸನ, ಸಂಶ್ರಯ, ದೈಧೀಭಾವಗಳು ಷಾಡುಣ್ಯಗಳು. ಮೂಲ, ನೃತ್ಯ, ಸುಹೃತ್, ಶ್ರೇಣಿ, ಮಿತ್ರ, ಆಟವಿಕ ಇವು ಷದ್ವಿಧ ಬಲಗಳು, ಪ್ರಭುಸಿದ್ಧಿ, ಮಂತ್ರಸಿದ್ಧಿ ಉತ್ಸಾಹಸಿದ್ಧಿ ಇವು ಸಿದ್ಧತ್ರಯಗಳು. ಇವುಗಳನೇಕದರ ರೂಪರೇಖೆಗಳನ್ನು ಇಂದು ನಿಷ್ಕರ್ಷಿಸುವುದು ಸುಲಭಸಾಧ್ಯವಲ್ಲ. ಯುದ್ಧಕ್ರಿಯೆಗಳ ವರ್ಣನೆಗಳೂ ಬಹುಮುಖವಾಗಿಯೂ ಆಕರ್ಷಕವಾಗಿಯೂ ಇವೆ- 'ಪ್ರಯಾಣಭೇರಿಯಂ ಪೊಯ್ದಿದಾಗಳ್ ಸುರೇಂದ್ರಾಚಳಂ ನಡುಗಿತ್ತು. ಅರ್ಕನಳುರ್ಕೆಗೆಟ್ಟು ನಭದಿಂ ತೊಳಂ. ಮರುಳಪ್ಪಿದಳ್ ಮೃಡನಂ ಗೌರಿ, ಸಮಸ್ತಮೀ ತ್ರಿಭುವನಂ ಪಂಕೇಜಪತ್ರಾಂಬುವೋಲ್‌ ನಡುಗಿತ್ತು, ವಿಲಯಕಾಲಜಳನಿಧಿ ತಳರ್ವಂತೆ ಸುಯೋಧನನ ಸೇನೆ ತಳರ್ದುದು, ಪೂರ್ಣಿತಾರ್ಣವಮನೊತ್ತರಿಸಿತ್ತು ಚತುರ್ಬಲಂ,' 'ಸೈನ್ಯಪಾದೋತರಜಮಂಬರಸ್ಥಳಮಂ ಮುಟ್ಟೆ ತೆಳುಗೆಟ್ಟು ಕೆಸರಾಯ್ತಾಕಾಶಗಂಗಾಜಲಂ', 'ಕರಿಘಟೆಗಳ ಕರ್ಣತಾಳಹತಿಯಿಂ ಕುಲಗಿರಿಗಳಾಡಿದುವು' ಎರಡುಂ ಬೀಡುಗಳೊಳ್ ಕೊಳ್ಳಿ ಬೀಸಿದಾಗಳ್ ಉರಿಮುಟ್ಟಿದರಳೆಯಂತಂಬರಮುರಿದತ್ತು.' 'ಸಿಡಿಲೊಳ್ ತಳ್ಳು ಪೋರ್ವ ಸಿಡಿಲಂತೆ ಬಾಳೊಳ್ ಬಾಳ್ ಪಳಂಚಿದುದು. ಪಲರ್ ಪಡವಳ್ಳರ ಮಾತುಗಳೆ 'ಮಂದರಕ್ಷುಭಿತದುಗ್ಧಪಯೋಧಿಗಭೀರನಾದಮಂ ಕೆಸ್ಕೊಂಡವು' 'ಸಿಡಿಲೇಟಿಯುಮಂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy