SearchBrowseAboutContactDonate
Page Preview
Page 41
Loading...
Download File
Download File
Page Text
________________ ೩೬ | ಪಂಪಭಾರತಂ ಜಾದಿಯೊಳೆ ಪಲೊರೆಯುತ್ತಿರೆ ಹಂಸೆ ಪೂತ ಪೂಗೊಳದೊಳೆ ರಾಗಿಸುತ್ತಿರೆ, ಶುಕಾವಳಿ ಬಂಧುರ ಗಂಧಶಾಳಿ ಸಂಕುಳದೊಳೆ ಪಾಯ್ದು ವಾಯ್ದು ನಲಿಯುತ್ತಿರೆ ಚಕೋರಂ ಇಂದು ಮಂಡಳಗಳಿತಾಮೃತಾಸವಮನುಂಡುಸುರುತ್ತಿರೆ ಚೆಲ್ಲು ಶಾರದಂ-ಪುಳಿಯೊಳೆ ಕರ್ಚಿದ ಬಾಳ-ಬಣ್ಣಮನೆ ಪೋಲ್ವಾಕಾಶಂ, ಆಕಾಶಮಂಡಳಮಂ ಪರ್ವಿದ ಬೆಳುಗಿಲ್ ಮುಗಿಲ * ಬೆಳ್ಳು ಒಳೊಕ್ಕು ತಳ್ಕೊಯ್ಯ ಬಳ್ವಳ ನೀಳಿರ್ದ ದಿಶಾಳಿ, ಶಾಳಿವನ ಗಂಧಾಂಧದ್ವಿರೇಘಾಳಿ ಕಣ್ಣೂಳಿಸಿತ್ತು ಒರ್ಮೆಯೆ ಬಂದುದಂದು ಶರದಂ ಲೋಕಕ್ಕೆ ಕಣ್ ಬರ್ಪಿನಂ' ಮೃಗಯಾವಿನೋದದಲ್ಲಿಯೂ ಪಂಪನಿಗೆ ವಿಶೇಷ ಪರಿಚಯವಿದ್ದಿರಬೇಕು. ಪರ್ವೆಂಟೆ, ಕಿಲುವೇಂಟೆ, ದೀವದ ವೇಂಟೆ, ಪಂದಿವೇಂಟೆ ಮೊದಲಾದವುಗಳ ವೈವಿಧ್ಯವನ್ನೂ ಬೇಂಟೆಯ ನಾಮ್, ಬೇಂಟೆವಸದನಂ, ಬೇಂಟೆಯ ಬಲೆಗಳ ಲಕ್ಷಣಗಳನ್ನೂ ಬೇಂಟೆಯ ಬಿನದ, ಬೇಂಟೆಯ ತಂತ್ರ, ಬೇಂಟೆಯ ಪ್ರಯೋಜನಗಳನ್ನೂ ಕಟ್ಟುವಂತೆ ವರ್ಣಿಸಿದ್ದಾನೆ. ಅವನ ಬೇಟೆಗಾಜರು, ನೆಲನುಂ ಗಾಳಿಯುಂ ಕೆಯ್ಯುಂ ಮೃಗಮನಡೆದು ಕಾಲಾಳೊಳಂ ಕುದುರೆಯೊಳಮೊಳಗಂ ಬರಲ್ ಬಲ್ಲರ್' ಪರ್ವೆಂಟೆ ಮತ್ತು ದೀವದ ಬೇಂಟೆಯ ವಿಷಯವನ್ನು ತಿಳಿಸುವುದಾದರೆ 'ಗಾಳಿಯುಂ ಕಲವುಂ ಮುಖವುಂ ಕಾಪುಂ ಮೇಪುಂ ತೋಡುಂ ಬೀಡುಂ ದೆಸೆಯುಂ ಕೊಸೆಯುಂ ಮೆಚ್ಚುಂ ಬೆಚ್ಚುಂ ಪೋಗುಂ ಮೇಗುಂ ಬೆದಯಂ ಕೆದುಂ ಪೆರ್ಚು೦ ಕುಂದುಮನಳೆದು ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಂ ಅಡಂಗಲುಂ ಅಡಂಗಿಸಲುಂ ಒಡ್ಡಲುಂ ಒಡ್ಡಿಸಲುಂ ಪುಗಿಸಲುಂ ಮಿಗಿಸಲುಂ ಕಾಣದುದಂ ಕಾಣಿಸಲುಂ ಮಾಣದುದಂ ಮಾಣಿಸಲುಂ ಏನಿದುದನ್ ಏಜೆಸಲುಂ ಜಾಣನಾಗಿ ಮೈಕೊಂಬುಮನ್ ಆನಾಣೋಗುಮಂ ಎರಶ್ನಿಚ್ಛೆಯುಮರ'ಮೂರು ಪೋತ್ತಮಂ ಮೃಗದ ಮೂಚೆರವುಮಂ ಆಯಿಆರಯ್ಕೆಯುಮಂ ಗಾಳಿಯುಮಂ ಎಜಿಂಕೆಯುಮಂ ಬಲ್ಲರಾಗಿ ನಂಬಿದ ಬರುವುಮಂ ನಂಬದ ಬರವುಮಂ ಅಳೆದುಂ ಅಲೆಯದುದ ಅಲೆಯಿಸಲುಂ ಅಲೆದುದು ತೊಲಗಿಸಲು ನಂಬದುದು ನಂಬಿಸಲುಂ ನಂಬಿದುದಂ ಬಿಡಿಸಲುಂ ಒಳಪುಗುವುದರ್ಕೆಡೆಮಾಡಲು ಎಡೆಯಾಗದ ಮೃಗಮಂ' ಅವುಂಕಿಸಲು ಒಲ್ಲುಂ ಒಲ್ಲದ ನಲ್ಲರಂತೆ ಮಿಡುಕಿಸಲು ಪಣವೊಡ್ಡಿದರಂತೆ ಅಡ್ಡಮಾಡಲುಂ ಎಸೆದ ದೆಸೆಗಳೆ ಓಡಿಸಲುಂ ಬಲ್ಲರ್'. ಬೇಟೆಯಿಂದಾಗುವ ಪ್ರಯೋಜನವನ್ನು ಮುಂದಿನ ಪದ್ಯದಲ್ಲಿ ಸೊಗಸಾಗಿ ನಿರೂಪಿಸಿದ್ದಾನೆ ಪಸಿವು ದೊರಕೊಳ್ಳುಂ, ಉಣಿಸುಗಳಿನಿಕೆಯುರಿ, ಆವಂದದೂಳ್ ಕನಲ್ಲಾ ಮಯ್ಯನ್ ಅಸಿಯನಾಗಿಪುದು, ಉಳಿದುವಪ್ಪುದು ಬಗೆಗೊಳಲಪ್ಪುದು ಮೃಗದ ಮಯೊಳ್ ನಿಸದಮಸೆವುದಂ ಬಲ್ಲಾಳ ಬಲ್ಕಿ ತನ್ನೊಳಂ, ಇಸುತ ಲೇಸಪ್ಪುದು ಬಸನಮಂದು, ಅಳಿಯದೆ, ಏಳಿಸುವರ್ ಬೇಂಟೆಯಂ, ಬೇಂಟೆಯ ಬಿನದಂಗಳರಸಿ ಸ್ವಯಂ ಯೋಧನಾಗಿ ಯುದ್ಧರಂಗದ ಪ್ರತ್ಯಕ್ಷಾನುಭವವಿದ್ದ ಪಂಪನಿಗೆ ' ಯುದ್ಧವರ್ಣನೆ ನೀರು ಕುಡಿದಂತೆ. ಅಲ್ಲಿ ಅವನು ಕಾಣದ ಕಾಣೆಯಿಲ್ಲ, ನೋಡದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy