SearchBrowseAboutContactDonate
Page Preview
Page 419
Loading...
Download File
Download File
Page Text
________________ ೪೧೪ / ಪಂಪಭಾರತಂ ಚoll ಮುರರಿಪು ಧರ್ಮನಂದನ ಪದಾಯುಗಕ್ಕೆ ಮರುತ್ತುತಾದಿಗಳ್ ಹರಿ ಚರಣಾಂಬುಜಕ್ಕೆಅಗೆಯುತ್ಸವದಿಂದಭಿಮನ್ಯು ತಮುತ್ವ | ವರ ಲಲಿತಾಂ ಪದನಿವಹಕ್ಕೆ ಆಗುತ್ತಿರ ತನ್ಮುಖಾಬದೊಳ್ ಪರಕೆಗಳು ಪೊಣಿದುವು ಪಂಕಜದಿಂ ಮಕರಂದದಂತವೋಲ್ || ಆ ವ|| ಅಂತು ಮಂದರಧರನುಂ ತಾಮುನೊಂದೊರ್ವರನಗಲ್ಲಿಂ ಬಡೆಯಮಾದ ಸುಖದುಃಖಗಳನನ್ನೋನ್ಮನಿವೇದನಂಗೆಯಾನಂದದಿಂ ಪೋಲಂ ಪೊಕ್ಕು ಮಜ್ಜನ ಭೋಜನಾದಿಗಳಿಂದಮಪಗತಪರಿಶ್ರಮನಂ ಮಾಡಿ ಮುರಾಂತಕನನಂತಕನಂದನನಭಿಮನ್ಯು ವಿವಾಹಕಾರ್ಯ ಪರ್ಯಾಲೋಚನೆಯೊಳೊಡಂಬಡಿಸಿ ಶುಭಲಗೋದಯದೊಳ್ ಉ ವಾರಿಧಿಘೋಷದಂತೆಸೆವ ಮಂಗಳರ್ಯರವಂಗಳಿಂ ಬಿಯಂ ಮೇರುವ ಪೊನ್ನಣಂ ನಯದೆಂಬಿನಮಿಟ್ಟಳಮಾಗೆ ವಾರನಾ | ರೀ ರಮಣೀಯ ನೃತ್ತಮಮರುತ್ತಿರೆ ಸಂದ ವಿರಾಟನೆಂದು ಕೆ ಯೀರದೀಯ ಗೆಯ್ದರಭಿಮನ್ಯುಗಮುತ್ತರೆಗಂ ವಿವಾಹಮಂ || 6 ವ|| ಅಂತಾ ವೀರನಂ ವೀರಯೊಳ್ ನೆರಪುವಂತುತ್ತರೆಯೊಳ್ ನೆರಪಿ ಕಂಸಧ್ವಂಸಿಯಂ ದ್ವಾರಾವತಿಗೆ ಕಳಿಸಿ ಎಂದು ವಿರಾಟನಿಗೆ ಸಂತೋಷವಾಗುವ ಹಾಗೆ ಮಾತನಾಡಿ ಶ್ರೀಕೃಷ್ಣನಿಗೆ ಸುಭದ್ರೆಯನ್ನೂ ಅಭಿಮನ್ಯುವನ್ನೂ ಜೊತೆಯಲ್ಲಿ ಕರೆದುಕೊಂಡು ಬರಬೇಕು ಎಂದು ಸಮಾಚಾರವನ್ನು ದೂತರ ಮೂಲಕ ಕಳುಹಿಸಿದರು. ಅವರ ಬರುವಿಕೆಯನ್ನು ತಿಳಿದು ಪಾಂಡವರೆದುಮಂದಿಯೂ ವಿರಾಟನೊಡಗೊಂಡು ಎದುರಾಗಿ ಹೋಗಿ ಕಂಡರು. ೮. ಕೃಷ್ಣನು ಧರ್ಮರಾಜನ ಪಾದಯುಗಳಗಳಿಗೂ ಭೀಮಸೇನಾದಿಗಳು ಕೃಷ್ಣನ ಪಾದಕಮಲಕ್ಕೂ ನಮಸ್ಕಾರಮಾಡಿದರು. ಅಭಿಮನ್ಯುವು ಆ ಅಯ್ದು ಜನರ ಮನೋಹರವಾದ ಪಾದಕಮಲಗಳಿಗೆ ನಮಸ್ಕಾರಮಾಡಿದನು. ಅವರ ಮುಖಕಮಲದಲ್ಲಿ ಕಮಲದಿಂದ ಮಕರಂದವು ಉಕ್ಕಿ ಹರಿಯುವಂತೆ ಹರಕೆಗಳು ಅಭಿವೃದ್ಧಿಗೊಂಡು ಚಿಮ್ಮಿದುವು. ವ|| ಹಾಗೆ ಶ್ರೀಕೃಷ್ಣನೂ ತಾವೂ ಒಬ್ಬೊಬ್ಬರನ್ನು ಅಗಲಿದ ಬಳಿಕ ಆದ ಸುಖದುಃಖಗಳನ್ನು ಪರಸ್ಪರ ತಿಳಿಯಪಡಿಸಿ ಸಂತೋಷದಿಂದ ಪುರಪ್ರವೇಶಮಾಡಿದರು. ಧರ್ಮರಾಜನು ಕೃಷ್ಣನೊಡನೆ ಅಭಿಮನ್ಯುವಿನ ಮದುವೆಯ ವಿಚಾರವಾಗಿ ಆಲೋಚನೆ ಮಾಡಿ ಅವನನ್ನು ಒಪ್ಪಿಸಿದನು. ಒಳ್ಳೆಯ ಶುಭಮುಹೂರ್ತದಲ್ಲಿ ೯, ಮಂಗಳವಾದ್ಯವು ಕಡಲ ಮೊರೆಯಂತೆ ಘೋಷಿಸುತ್ತಿರಲು ದಾನಮಾಡಿದ ಸುವರ್ಣಕ್ಕೆ (ದಕ್ಷಿಣೆ) ಮೇರುಪರ್ವತವೂ ಸಮಾನವಾಗಲಾರದು ಎನ್ನುವಷ್ಟು ಅತಿಶಯವಾಗಿರಲು ವೇಶ್ಯಾಸ್ತ್ರೀಯರ ಮನೋಹರವಾದ ನೃತ್ಯವು ರಮಣೀಯವಾಗಿರಲು ಪ್ರಸಿದ್ಧನಾದ ವಿರಾಟಮಹಾರಾಜನು ಧಾರಾಜಲವನ್ನೆರೆದು ಕನ್ಯಾದಾನಮಾಡಲು ಉತ್ತರೆಗೂ ಅಭಿಮನ್ಯುವಿಗೂ ಮದುವೆಯನ್ನು ಮಾಡಿದನು. ವ|| ಆ ವೀರನನ್ನು ವೀರಲಕ್ಷ್ಮಿಯಲ್ಲಿ ಕೂಡಿಸುವಂತೆ ಅಭಿಮನ್ಯುವನ್ನು ಉತ್ತರೆಯಲ್ಲಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy