SearchBrowseAboutContactDonate
Page Preview
Page 418
Loading...
Download File
Download File
Page Text
________________ ನವಮಾಶ್ವಾಸಂ | ೪೧೩. ಉll .ಕೇಳಿರೆ ಕಂಕಭಟ್ಟನೆ ಯುಧಿಷ್ಠಿರನಾ ವಲಲಂ ವೃಕೋದರಂ ಬಾಳೆಯರಂ ದಲಾಡಿಪ ಬೃಹಂದಳೆ ಫಲ್ಗುಣನಂಕದಶ್ವ ಗೋ | ಪಾಳಕರೆಂಬರಾ ನಕುಲನುಂ ಸಹದೇವನುಮಾಧರೇಂ ಮಹೀ ಪಾಳರೊಳಾದ ಕಾರ್ಯಗತಿಗಳ ಬಗೆಯ ಬಹು ಪ್ರಕಾರಮೋ ೬ ವ|| ಎಂಬ ಪುರಜನಾಳಾಪಂಗಳ ನೆಗ ವಿರಾಟನ ಮಹಾದೇವಿ ಸುದೇಷ್ಟೆ ಕೃಷ್ಣಗಾಗಳೆಲಗಿ ಪೊಡವಡ ಧರ್ಮತನೂಜಂಗೆ ವಿರಾಟನವತಮಣಿಮಕುಟನಿಂತೆಂದು ಬಿನ್ನಪಂಗೆಯ್ದಂಚಂ|| ಇರದುಟಿದಾವ ಮಂಡಲದೊಳಂ ನೃಪ ನೀಂ ದಯೆಯಿಂದಮಿಲ್ಲಿ ಬಂ ದಿರ ದೂರವೆತ್ತುದನ್ನ ಮಜ್ವಾಲೈಸನೆನ್ನ ತನೂಜೆಗಂಕದು | ತರೆಗೆ ವಿವಾಹಮಂಗಳಮನಿನ್ನಭಿಮನ್ಯುಗೆ ಮಾಟ್ಟುದುತ್ತರೋ ತರಮನೆ ಮಾಡು ನಿನ್ನ ದಯೆಯಿಂ ಮೆಳವಂ ಯಮರಾಜನಂದನಾ || ೭ ವ|ಎಂಬುದುಮಂತಗೆಯ್ಯಂ ನಿಮ್ಮಮ್ಮ ನಣುಗಳೀಗಳಾದುವಲ್ಲ ಹಿರಣ್ಯಗರ್ಭ ಬ್ರಹ್ಮರಿಂ ತಗುಳವ್ಯವಚ್ಚಿನ್ನಮಾಗಿ ಬಂದುವು ನಿನ್ನ ದೂರಯ ನಂಟನುಮನಲ್ಲಿ ಪಡವನೆಂದು ವಿರಾಟನಂ ಸಂತಸಂಬಡೆ ನುಡಿದು ಚಾಣೂರಾರಿಯಂ ಸುಭದ್ರೆಯುಮನಭಿಮನುವುಮನೊಡ ಗೊಂಡು ಬರ್ಪುದೆಂದು ಬಟಿಯನಟ್ಟಿ ಬರವಣಿದು ಪಾಂಡವರಯ್ಯರುಂ ವಿರಾಟ ಸಮೇತಮಿದಿವೊಳಗಿ ಕಂಡಾಗಳ ಪಡೆದ ಹಾಗೆ ವಿರಾಟನು ಸಂತೋಷಿಸಿದನು. ತನ್ನಲ್ಲಿದ್ದ ಸಾರವತ್ತಾದ ಐಶ್ವರ್ಯವನ್ನೆಲ್ಲ ಪಾಂಡವರ ಮುಂದಿಟ್ಟು ಅವರ ಮನಸ್ಸಿಗೆ ಅತ್ಯಂತ ಸಂತೋಷವನ್ನುಂಟುಮಾಡಿದನು. ೬. ಕೇಳಿರಿ, ಕಂಕಭಟ್ಟನೇ ಧರ್ಮರಾಜನು, ವಲಲನು ಭೀಮಸೇನ, ಬಾಲಕಿಯರನ್ನು ಲಕ್ಷಣವಾಗಿ ಆಡಿಸುವ ಬೃಹಂದಳೆಯು ಅರ್ಜುನ, ಪ್ರಸಿದ್ದರಾದ ಕುದುರೆ ಮತ್ತು ಗೋವುಗಳ ಪಾಲಕರಾದವರು ನಕುಲ ಮತ್ತು ಸಹದೇವರುಗಳಾಗಿದ್ದಾರೆ. ಈ ರಾಜರುಗಳಲ್ಲಿ ಆದ ಕಾರ್ಯಗಳ ಪರಿಣಾಮವನ್ನು ಯೋಚನೆಮಾಡುವುದಾದರೆ ಇವರಿಗೆ ಏನು ವಿಪರೀತ ವಿಧಿಯೋ? ವ|| ಎಂಬ ಪಟ್ಟಣಿಗರ ಮಾತುಗಳು ಪ್ರಸಿದ್ಧವಾಗಲು ವಿರಾಟನ ಮಹಾರಾಣಿಯಾದ ಸುದೇಷ್ಠೆಯು ಬ್ರೌಪದಿಗೆ ಬಗ್ಗಿ ನಮಸ್ಕಾರ ಮಾಡಿದಳು. ಧರ್ಮರಾಯನಿಗೆ ವಿರಾಟನು ಬಗ್ಗಿದ ಮಕುಟವುಳ್ಳವನಾಗಿ (ನಮಸ್ಕರಿಸಿ) ವಿಜ್ಞಾಪನೆ ಮಾಡಿದನು - ೭. ಧರ್ಮರಾಜನೇ ನೀವು ಬೇರೆ ದೇಶದಲ್ಲಿ ತಂಗದೆ ಕೃಪೆಯಿಂದ ಇಲ್ಲಿಗೆ ಬಂದಿದ್ದೀರಿ. (ಇದರಿಂದ) ನನ್ನ ದೊರೆತನ ಗೌರವಾನ್ವಿತವಾಯಿತು. ಪ್ರಸಿದ್ದಳಾದ ನನ್ನ ಮಗಳು ಉತ್ತರೆಗೆ ಉತ್ತರೋತ್ತರಾಭಿ ವೃದ್ಧಿಯಾಗುವ ಹಾಗೆ ನಿನ್ನ ಮಗನಾದ ಅಭಿಮನ್ಯುವಿನೊಡನೆ ಮದುವೆಯ ಮಂಗಳಕಾರ್ಯವನ್ನು ಮಾಡುವುದು. ನಿನ್ನ ದಯೆಯಿಂದ ನಾನು ಪ್ರಸಿದ್ಧಿಪಡೆಯುತ್ತೇನೆ. ವಗಿ ಎನ್ನಲು ಹಾಗೆಯೇ ಮಾಡುತ್ತೇನೆ. ನಿಮ್ಮ ನಮ್ಮ ಸ್ನೇಹ ಸಂಬಂಧಗಳು ಈಗ ಆದುವಲ್ಲ. ಹಿರಣ್ಯಗರ್ಭಬ್ರಹ್ಮನಿಂದ ಹಿಡಿದು ಎಡಬಿಡದೆ ಏಕಪ್ರಕಾರವಾಗಿ ಬಂದಂತಹವು. ನಿನಗೆ ಸಮಾನವಾದ ಬಂಧುವನ್ನು ನಾನೆಲ್ಲಿ ಪಡೆಯಲು ಸಾಧ್ಯ ?
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy