SearchBrowseAboutContactDonate
Page Preview
Page 408
Loading...
Download File
Download File
Page Text
________________ ಅಷ್ಠಮಾಶ್ವಾಸಂ / ೪೦೩ ವ|| ಎಂದೂಡ ಕರ್ಣನಿಂತೆಂದಂಚoll ಬಗೆಯದ ಸಾಮಮಂ ಬಿಸುಟು ಭೇದಮನೊಲ್ಲದುದಗ್ರದಾನಮಂ ನಗದದ ದಂಡಮಂ ನಿನಗೆ ಮಾಡಿದಕೃತ್ಯರನಂತು ಮಾಣುದೇ | ಬಗೆ ಪಗೆ ನೀಗೆಯುಂ ಮುಳಿಸು ಪೋಗೆಯುಮಾಯತಿ ಪರ್ಚಿಯುಂ ಜಗಂ ಪೊಗಳಯುಮಾಂತರಾತಿನೃಪರಂ ತವ ಕೊಲ್ಕುದಹೀಂದ್ರಕೇತನಾ || ೮೮ ವ|| ಎಂಬುದುಂ ಸುಯೋಧನನಿರ್ವರ ನುಡಿಯುಮಂ ಕೇಳು ತನ್ನ ಮನದೊಳಾದ ಕಜ್ಜಮನಿಂತೆಂದಂಚಂtl ಅಡಿಯಲವೇಚ್ಚುದಿರ್ದಡೆಯನಿರ್ದಡೆಯಿಂ ತಗದಾಜಿರಂಗದೊಳ್ ನಿಜಸಲಿವೇಟ್ಟುದಂತವರನಂತವರಿರ್ಪಯುಂ ವಿರಾಟನಿ | ರ್ಪತಿಕೆಯ ಪಟ್ಟಣಂ ನಮಗಿದೇವಿರಿದಪ್ಪುದು ತಳ್ಳದಯ್ಕೆ ನಾಂ ತುಲುವನೆ ಕೊಳ್ಳಮಂತು ತುಜುಗೊಂಡೊಡೆ ಪಾಂಡವರಿರ್ಪ ಗಂಡರೇ || ೮೯ ವ|| ಎಂದು ಪಿರಿದುಮಾಗ್ರಹಂಬೆರಸು ಗೋಗ್ರಹಣಪ್ರಪಂಚಮನೆ ನಿಶ್ಚಯಿಸಿ ವಿರಾಟನ ದಾಯಿಗಂ ತ್ರಿಗರ್ತಾಧೀಶಂ ಸುಶರ್ಮನುಮಂ ನಾಲ್ಕಾಸಿರ ರಥಂಬೆರಸು ದಕ್ಷಿಣದಿಶಾಭಾಗಕ್ಕೆ ವೇಟ್ಟು ತುಲುವ ಕೊಳಿಸಿದಾಗಚoll ಕರೆದು ವಿರಾಟನುತರನನಾತನೂಜನನಾ ಪೋಟಕ್ಕೆ ಕಾ ಪಿರಿಸಿ ಧರಾತಳಂ ತಳರ್ವವೊಲೆ ನಡೆದಾಗ ಪಾಂಡುಪುತ್ರರ | ಮೃರುಮಿದು ನಮ್ಮನಾರಯಲೆ ವೈರಿಯ ಮಾಡಿದ ಗೊಡ್ಡಮಿಲ್ಲಿ ಮಾ ಣ್ಣಿರಲಣಮಾಗ ಪೂಣ್ಣವಧಿಯುಂ ನದತ್ತು ಕಡಂಗಿ ಕಾದುವಂ || ೯೦ ವlt ಎನ್ನಲು ಕರ್ಣನು ಹೀಗೆ ಹೇಳಿದನು - ೮೮. ದುರ್ಯೋಧನ, ಸಾಮೋಪಾಯ ವನ್ನು ಯೋಚಿಸದೆ ಭೇದೋಪಾಯವನ್ನು ಬಿಸಾಡಿ ಶ್ರೇಷ್ಠವಾದ ದಾನೋಪಾಯವನ್ನು ಅಂಗೀಕರಿಸದೆ ನಿನಗೆ ದಂಡೋಪಾಯವನ್ನೇ ನಿಷ್ಕರ್ಷಿಸಿದ ಆ ಕೃತಘ್ನರನ್ನು ಹಾಗೆಯೇ ಬಿಡುವುದು ಯೋಗ್ಯವಲ್ಲ, ಶತ್ರು ತೋಲಗುವಂತೆಯೂ ಕೋಪವು ಪರಿಹಾರವಾಗು ವಂತೆಯೂ ಪೌರುಷವು ಹೆಚ್ಚುವಂತೆಯೂ ಲೋಕವು ಹೊಗಳುವಂತೆಯೂ ಪ್ರತಿಭಟಿಸಿದ ಶತ್ರುರಾಜರನ್ನು ಪೂರ್ಣವಾಗಿ ಕೊಲ್ಲುವುದು ಸೂಕ್ತವಾದ ಮಾರ್ಗ ಎಂದನು. ೮೯. ಎನ್ನಲು ದುರ್ಯೋಧನನು ಇಬ್ಬರ ಮಾತನ್ನು ಕೇಳಿ ತನ್ನ ಅಭಿಪ್ರಾಯವನ್ನು ಸೂಚಿಸಿದನು. ಮೊದಲು ಅವರು ಇರುವ ಸ್ಥಳವನ್ನು ತಿಳಿಯಬೇಕು. ಅವರನ್ನು ಅವರಿರುವ ಸ್ಥಳದಿಂದ ಓಡಿಸಿ ಯುದ್ಧಭೂಮಿಯಲ್ಲಿ ನಿಲ್ಲಿಸಬೇಕು. ವಿರಾಟನು ವಾಸಿಸುವ ಪ್ರಸಿದ್ಧವಾದ ವಿರಾಟನಗರವು ಅವರಿರುವ ಸ್ಥಳ. ನಮಗೆ ಆ ವಿರಾಟನಗರವು ಏನು ದೊಡ್ಡದು ? ಸಾವಕಾಶಮಾಡದೆ ನಾವು ಹೋಗಿ ಗೋವುಗಳನ್ನು ಹಿಡಿಯೋಣ. ಹಾಗೆ ಹಸುಗಳನ್ನು ಬಂಧಿಸಿದರೆ ಪಾಂಡವರು ಸುಮ್ಮನಿರುವ ಶೂರರಲ್ಲ. ವ|| ಎಂದು ವಿಶೇಷ ಕೋಪದಿಂದ ಕೂಡಿ ಪಶುಗಳನ್ನು ಬಂಧಿಸುವ ವಿಷಯವನ್ನೇ ನಿಶ್ಚಯಿಸಿದರು. ವಿರಾಟನ ಜ್ಞಾತಿಯೂ ತ್ರಿಗರ್ತಾಧೀಶನೂ ಆದ ಸುಶರ್ಮನನ್ನು ನಾಲ್ಕು ಸಾವಿರ ತೇರುಗಳೊಡನೆ ದಕ್ಷಿಣದಿಗ್ಯಾಗಕ್ಕೆ ಕಳುಹಿಸಿ ಪಶುಗಳನ್ನು ಹಿಡಿಸಿದರು. ೯೦. ವಿರಾಟನು ತನ್ನ ಮಗನಾದ ಉತ್ತರವನ್ನು ಕರೆದು ಆ ಪಟ್ಟಣಕ್ಕೆ ಕಾವಲಾಗಿರಿಸಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy