SearchBrowseAboutContactDonate
Page Preview
Page 407
Loading...
Download File
Download File
Page Text
________________ ೪೦೨) ಪಂಪಭಾರತಂ ವಗ ಆದಂ ಪಾಂಡವರೈವರುಂ ವಿರಾಟಪುರದೊಳಿರ್ದರಾಗಲವೇಚ್ಚುಮವ ರಿರ್ದರಪ್ರೊಡಚಂ|| ಪರಿಭವದೊಂದು ತುತ್ತ ತುದಿ ಕೃಷ್ಠೆಯ ಬನ್ನದೊಳಾಗೆ ಜೂದಿಯೊಳ್ ಪೊರಸಚಿವಂತೆ ತಮ್ಮರಸುಗೆಟ್ಟು ಕಬಲ್ಲೆರ್ದೆಗೆಟ್ಟರಣ್ಯದೊಳ್ | ತಿರಿತರುತಿರ್ದ ಕಣ್ಮಡಿಗರಿನ್ ಮಗುಟ್ಟುಂ ಬಿಲುತೋಡಿ ಬೇಡರೊಲ್ ನೆರೆದಿರಲಲ್ಲದೊಡ್ಡಯಿಸಿ ರಾಜ್ಯದೊಳೇಂ ನೆರೆಯ ತೀರ್ಗುಮೋ || ೮೫ ವಗ ಎಂಬುದುಮಾ ಕೌರವನ ಮಾತಿಂಗಮರಾಪಗಾನಂದನನಿಂತೆಂದಂಮ|| ಸ | ರಸೆಯೊಳ್ ಕಾಲಾಗ್ನಿರುದ್ರ ಜಲಶಯನದೊಳಂಭೋಜನಾಭಂ ಪೊದಾ | ಗಸದಿಂ ಸುತ್ತಿರ್ದಜಾಂಡೋದರದೊಳಜನಡಂಗಿರ್ಪಪೋಲ್ ಕಾರಣಕ್ಕಂ | ದೊಸೆದಿರ್ದ‌ ಪಾಂಡವರ್ ಕಾನನದೊಳಿರದವರ್ ನನ್ನಿಯಂ ತಪ್ಪೆಯುಂ ಸ ಪ್ರಸಮುದ್ರ ಮೇರೆಯಂ ತಪ್ಪೆಯುಮೊಳರೆ ಬಿಗುರ್ತಾಂಪವರ್ ರಾಜರಾಜಾ || ೮೬ ವ|| ಎನೆ ಕುಂಭಸಂಭವನಿಂತೆಂದಂಮ। ಕೃತಶಾಸ್ತರ್ ಧೃತಶಾಸ್ತರಪ್ರತಿಹತ ಪ್ರಾಗ ರೀಗಳ ಪೈಥಾ ಸುತರುದ್ಯೋಗಮವೆತ್ತಿಕೊಳ್ಳ ದವಸಂ ನಾರ್ಚಿತ್ತು ಕಾಲಾವಧಿ | ಹಿತಿಯುಂ ಬಂದುದಿದರ್ಕ ಮಾಣಿರದ ಮಂತಾವಾಸದೊಳ್ ಮಂತ್ರ ನಿ ಶಿತನಾಡೀಗಡ ಕಾದಿದಲ್ಲದಿಳೆಯಂ ನೀನೆಂತುಮೇನಿತ್ತಪ || ೮೭ ಇತರರಿಗೆ ಅಸಾಧ್ಯ. ವ|| ಆದುದರಿಂದ ಪಾಂಡವರೆದು ಜನವೂ ವಿರಾಟನಗರದಲ್ಲಿದ್ದ ತೀರಬೇಕು, ಅವರಿರುವುದಾದರೆ -೮೫. ಬ್ರೌಪದಿಯ ಅವಮಾನದ ಪರಮಾವಧಿ ಯಿಂದ ಜೂಜಿನಲ್ಲಿ ಪಾರಿವಾಳವು ನಾಶವಾಗುವಂತೆ ತಮ್ಮ ರಾಜ್ಯವನ್ನು ಕಳೆದು ಕೊಂಡು, ಗೌರವವನ್ನು ನೀಗಿ, ಉತ್ಸಾಹಶೂನ್ಯರಾಗಿ ಕಾಡಿನಲ್ಲಿ ಅಲೆದಾಡುತ್ತಿರುವ ಮೋಸಗಾರರು ಪುನಃ ಹೆದರಿ ಓಡಿಹೋಗಿ ಬೇಡರಲ್ಲಿ ಸೇರಿರಬೇಕಲ್ಲದೆ ಗುಂಪುಗೂಡಿ ರಾಜ್ಯದಲ್ಲಿ ಸೇರುವುದು ಸೂಕ್ತವೇ ? ಎಂದ ದುರ್ಯೊಧನ, ವll ಆ ದುರ್ಯೋಧನನ ಮಾತಿಗೆ ಭೀಷ್ಮನು ಹೇಳಿದನು : ೮೬. ಕಾಲಾಗ್ನಿರುದ್ರನು ಪಾತಾಳದಲ್ಲಿಯೂ ವಿಷ್ಣುವು ಜಲಶಯನದಲ್ಲಿಯೂ ಬ್ರಹ್ಮನು (ವ್ಯಾಪ್ತವಾದ) ಆಕಾಶದಿಂದ ಸುತ್ತಿರುವ ಬ್ರಹ್ಮಾಂಡದ ಮಧ್ಯಭಾಗದಲ್ಲಿಯೂ ಅಡಗಿರುವ ಹಾಗೆ ಯಾವುದೋ ಒಂದು ಕಾರಣಕ್ಕಾಗಿ ಪಾಂಡವರು ಸಮಾಧಾನ ಚಿತ್ತದಿಂದ ಕಾಡಿನಲ್ಲಿ ಅಡಗಿದ್ದರು. ದುರ್ಯೊಧನ ಅವರು ಹಾಗೆ ಮಾಡದೆ ಸತ್ಯವನ್ನು ತಪ್ಪಿದರೂ ಏಳು ಸಮುದ್ರಗಳು ಮೇರೆದಪ್ಪಿದರೂ ಪ್ರತಿಭಟಿಸುವವರು ಯಾರು ಇದ್ದಾರೆ? ಎನ್ನಲು ದ್ರೋಣಾಚಾರ್ಯರು ಹೀಗೆಂದರು. ೮೭. ಪಾಂಡವರು ಶಾಸ್ತ್ರವನ್ನು ತಿಳಿದವರು. ಶಸ್ತವನ್ನು ಧರಿಸಿರುವವರು. ತಡೆಯಿಲ್ಲದ ಪ್ರೌಢಿಮೆಯನ್ನುಳ್ಳವರು. ಅವರು ಕಾರ್ಯಾರಂಭಮಾಡುವ ಕಾಲ ಸಮೀಪಿಸಿದೆ. ಮಂತ್ರಾಲೋಚನಾಸಭೆಯಲ್ಲಿ ಈಗಲೇ ನಿಶ್ಚಿತವಾದ ಸೂಕ್ತವಾದ ಕಾರ್ಯವನ್ನು ನಿಶ್ಚಯಿಸು. ಯುದ್ದಮಾಡದೆ ಭೂಮಿಯನ್ನು ನೀನು ಹೇಗೂ ಕೊಡುವುದಿಲ್ಲವಲ್ಲವೆ?
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy