SearchBrowseAboutContactDonate
Page Preview
Page 387
Loading...
Download File
Download File
Page Text
________________ ೩೮೨ | ಪಂಪಭಾರತ ಮದಾಂಧಗಂಧಸಿಂಧುರದ ಬಳೆಯಂ ನಿರ್ವಂದದಿಂ ತಗುಳ್ಳುದುಮಾ ಮಾಯಾ ಮತ್ತಹಸ್ತಿಯುಂ ಮೂಲು ಜಾವಂಬರಂ ರೂಪುದೋಚಿ ಪರಿದು ಬಟೆಯಮದೃಶ್ಯಮಾದೊಡಯ್ಯರುಂ ಚೋದ್ಯಂ ಬಟ್ಟು ಘರ್ಮಕಿರಣಸಂತಾಪತಾಪಿತಶರೀರರೋಂದಾಲದ ಮರದ ಕೆಳಗೆ ವಿಶ್ರಮಿಸ ಧರ್ಮ ಪುತ್ರ ನೀರಡಸಿ ಸಹದೇವನನೆಲ್ಲಿಯಾದೊಡಂ ನೀರು ಕೊಂಡು ಬೇಗಂ ಬಾಯೆಂದು ಪೇಯ್ದುದು ಮಂತೆಗೆಯ್ದನೆಂದು ಕೂಜಳಚರಕುಳಕಳರವದೊಳಂ ಕಮಳಕುವಳಯರಜನಿಕಷಾಯ ಪರಿಮಳದಳಿಪಟಳಜಟಳಮಾಗಿ ಬಂದು ತೀಡುವ ಮಂದಾನಿಳನಿಂ ನೀರ ದಸೆಯನಳಿದು ಪೋಗೆ ವೋಗ ಕಂ ಬಕ ಕಲಹಂಸ ಬಲಾಕ ಪ್ರಕರ ಮೃದುಹೃಣಿತರಮ್ಯಮಿದಿರೊಳ್ ತೋಟ | ತ್ತು ಕೊಳಂ ಪರಿ ವಿಕಸಿತ ಕನ ಕ ಕಂಜಕಿಂಜಲಪುಂಜಪಿಂಜರಿತಜಳಂ || ೩೮ ವ|| ಅಂತು ಸೊಗಯಿಸುವ ಸರೋವರಮಂ ಕಂಡು ತಾನುಂ ನೀರಡಸಿದನಪುದಳೆಂದದ ಕೆಲದ ಲತೆಯ ಮೆಳೆಯೋಳ್ ಬಿಲ್ಕುಮಂಬುಮಂ ಸಾರ್ಚಿ ಕೋಳನಂ ಪೊಕ್ಕು ಕರಚರಣ ವದನಪ್ರಕಾಲನಂಗೆಯು ನೀರು ಕುಡಿಯಲೆಂದು ನಿಜಾಂಜಲಿಪುಟಮಂ ನೀಡಿದಾಗಳೊಂದು ದಿವ್ಯವಚನಮಾಕಾಶದೊಳ್ ಭಯಂಕರವಾದ ಬಿಲ್ಲನ್ನು ತರಿಸಿ ಪ್ರಳಯಕಾಲದ ಯಮನ ಆಕಾರವನ್ನು ತಾಳಿ ಆ ಮದ್ದಾನೆಯ ಮಾರ್ಗವನ್ನೇ ಅನುಸರಿಸಿ ಹಿಂದೆ ನಿರ್ಬಂಧದಿಂದ ಅಟ್ಟಿಕೊಂಡು ಹೋಗಲು ಆ ಮಾಯಾಮದಗಜವು ಮೂರು ಜಾವದವರೆಗೂ ತನ್ನ ಆಕಾರವನ್ನು ತೋರಿಕೊಂಡಿದ್ದು ಓಡಿ ಬಳಿಕ ಕಣ್ಮರೆಯಾಯಿತು. ಅಯ್ದು ಜನವೂ ಆಶ್ಚರ್ಯಪಟ್ಟು ಸೂರ್ಯನ ಬಿಸಿಲಿನ ಬೇಗೆಯಿಂದ ಸುಡಲ್ಪಟ್ಟ ಶರೀರವುಳ್ಳವರಾಗಿ ಒಂದು ಆಲದಮರದ ಕೆಳಗೆ ವಿಶ್ರಮಿಸಿಕೊಂಡರು ಧರ್ಮರಾಜನು ಬಾಯಾರಿ ಸಹದೇವನನ್ನು ಎಲ್ಲಿಂದಲಾರದೂ ಬೇಗ ನೀರನ್ನು ತೆಗೆದುಕೊಂಡು ಬಾ ಎಂದು ಹೇಳಿದನು. ಹಾಗೆಯೇ ಮಾಡುತ್ತೇನೆ ಎಂದು ಶಬ್ದಮಾಡುತ್ತಿರುವ ಜಲಚರಪ್ರಾಣಿಗಳ ಕಲಕಲಶಬ್ದದಿಂದಲೂ ಕಮಲಕನೈದಿಲೆಗಳ ಧೂಳಿನ ಒಗರಿನಿಂದ ಕೂಡಿದ ದುಂಬಿಗಳ ಸಮೂಹದಿಂದ ವ್ಯಾಪ್ತವಾಗಿ ಬಂದು ಬೀಸುವ ಮಂದಮಾರುತದಿಂದಲೂ ನೀರಿರುವ ಸ್ಥಳವನ್ನು ತಿಳಿದು ಆ ಕಡೆ ಹೋದನು. ೩೮. ಬಕ, ಹಂಸ, ಮತ್ತು ಬೆಳ್ಳಕ್ಕಿಗಳ ಸಮೂಹದ ನಯವಾದ ಶಬ್ದದಿಂದಲೂ ರಮ್ಯವಾಗಿ ಅರಳಿರುವ ಹೊಂದಾವರೆಯ ಕೇಸರಗಳ ರಾಶಿಯಿಂದಲೂ ಕೆಂಪು ಮಿಶ್ರವಾದ ಹಳದಿಯ ಬಣ್ಣವನ್ನು ನೀರಿನಿಂದಲೂ ಕೂಡಿದ ಸರೋವರವೊಂದು ಇದಿರಿನಲ್ಲಿ ಕಾಣಿಸಿಕೊಂಡಿತು. ವ|| ಹಾಗೆ ಸೊಗಯಿಸುತ್ತಿರುವ ಸರೋವರವನ್ನು ನೋಡಿ ತಾನೂ ಬಾಯಾರಿದ್ದುದರಿಂದ ಅದರ ಪಕ್ಕದ ಬಳ್ಳಿಯ ಮೆಳೆಯಲ್ಲಿ ಬಿಲ್ಲನ್ನೂ ಬಾಣವನ್ನೂ ಇಟ್ಟು ಸರೋವರವನ್ನು ಪ್ರವೇಶಿಸಿ ಕೈಕಾಲುಮುಖವನ್ನು ತೊಳೆದುಕೊಂಡು ನೀರನ್ನು ಕುಡಿಯುವುದಕ್ಕೋಸ್ಕರ ತನ್ನ ಕೈಬೊಗಸೆಯನ್ನು ನೀಡಿದಾಗ ಒಂದು ಅಶರೀರವಾಣಿಯು ಆಕಾಶದಲ್ಲಿ ಹೀಗೆಂದಿತು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy